ಪುಟ್​ಪಾತ್​ ಮೇಲೆ ಹೋಗ್ತಿದ್ದ ಯುವತಿಯರಿಗೆ ಕಾರು ಡಿಕ್ಕಿ | ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ | ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 19, 2023 SHIVAMOGGA NEWS’

ಪುಟ್ ಪಾತ್​ ಮೇಲೆ ಕಾರು ಹತ್ತಿಸಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕಾರು ಹರಿಸಿದ ಭೀಕರ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮಾರದಲ್ಲಿ ರೆಕಾರ್ಡ್​ ಆಗಿದ್ದು ದೃಶ್ಯವು ಬೀಭತ್ಸವಾಗಿದೆ. 

ಮಂಗಳೂರು ನಗರದ ಲೇಡಿಹಿಲ್ ಬಳಿ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಒಬ್ಬ ಯುವತಿ ಸಾವನ್ನಪ್ಪಿದ್ದಾಳೆ.  ರೂಪಶ್ರೀ (23) ಮೃತರು. ಇನ್ನೂ ಸ್ವಾತಿ (26), ಹಿತ್ನವಿ (16), ಕೃತಿಕಾ(16) ಮತ್ತು ಯತಿಕಾ(12)  ಗಂಭೀರವಾಗಿ ಗಾಯಗೊಂಡಿದ್ದಾರೆ. 

ಭೀಕರ ಅಪಘಾತದ ದೃಶ್ಯಕ್ಯಾಮರಾದಲ್ಲಿ ಸೆರೆ 

ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕುದ್ರೋಳಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ಯುವತಿಯರಿಗೆ ಕಾರು ಡಿಕ್ಕಿ ಹಡೊಎದಿದೆ. ಮಣ್ಣಗುಡ್ಡ ಜಂಕ್ಷನ್​ನಿಂದ ಬರುತ್ತಿದ್ದ ಕಾರು, ಇದ್ದಕ್ಕಿದ್ದ ಹಾಗೆ ಪುಟ್​ಪಾತ್ ಏರಿದೆ.ಅಲ್ಲದೆ ನಿಯಂತ್ರಣಕ್ಕೆ ಸಿಗದೇ ಬಂದ ವೇಗದಲ್ಲಿಯೇ ಯುವತಿಯರಿಗೆ ಡಿಕ್ಕಿಯಾಗಿದೆ. ಘಟನೆ ಬೆನ್ನಲ್ಲೆ ಕಾರು ಚಾಲಕ ಪರಾರಿಯಾಗಿದ್ದಾನೆ. ನಂತರ ಪೊಲೀಸ್ ಸ್ಟೇಷನ್​ಗೆ ಬಂದು ಶರಣಾಗಿದ್ದಾನೆ.  


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor