ಮಲೆನಾಡು ಟುಡೆ ಸುದ್ದಿ | ಧರ್ಮಸ್ಥಳ ಲಕ್ಷ ದೀಪೋತ್ಸವ 2026 |ಬೆಳ್ತಂಗಡಿ | ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಸಂಭ್ರಮ ಡಿ.4ರಿಂದ 9ರವರೆಗೆ ನೆರ ವೇರಲಿದೆ. ದೀಪೋತ್ಸವದ ಮೊದಲ ದಿನ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ, ವಸ್ತು ಪ್ರದರ್ಶನ ಉದ್ಘಾ ಟನೆ ನಡೆಯಲಿದೆ.
5ರಂದು ದೇವರ ಕೆರೆಕಟ್ಟೆ ಉತ್ಸವ, 6ಕ್ಕೆ ದೇವರ ಲಲಿತೋದ್ಯಾನ ಉತ್ಸವ ಮತ್ತು ಅಮೃತ ವರ್ಷಿಣಿ ಸಭಾಭವನದಲ್ಲಿ ಲಲಿತಾ ಕಲಾಗೋಷ್ಠಿ, 7ರ ಸಂಜೆ ಅಮೃ ತವರ್ಷಿಣಿ ಸಭಾಭವನದಲ್ಲಿ 94ನೇ ಸರ್ವಧರ್ಮ ಸಮ್ಮೇ ಳನ, ರಾತ್ರಿ ದೇವರ ಕಂಚಿಮಾರುಕಟ್ಟೆ ಉತ್ಸವ ನಡೆಯಲಿದೆ.
ಡಿ.8ರ ಸಂಜೆ ಅಮೃತವರ್ಷಿಣಿ ಸಭಾಭವನದಲ್ಲಿ 94ನೇ ಸಾಹಿತ್ಯ ಸಮ್ಮೇಳನ, ರಾತ್ರಿ ಗೌರಿಮಾರುಕಟ್ಟೆ ಉತ್ಸವದ ಮೂಲಕ ಲಕ್ಷದೀಪೋತ್ಸವ ಸಂಪನ್ನಗೊಳ್ಳಲಿದೆ. ಡಿ.9ರಂದು ಶ್ರೀ ಚಂದ್ರನಾಥ ಸ್ವಾಮಿಗೆ ಸಮವಸರಣ ಪೂಜೆ ನೆರವೇರಲಿದೆ.
