500 ರೂಪಾಯಿ ವಿಚಾರಕ್ಕೆ ಕಿರಿಕ್​ ! ದಾಖಲಾಯ್ತು ಐಪಿಸಿ 323,324,504,506,34 & ಅಟ್ರಾಸಿಟಿ ಕೇಸ್​!

A case under IPC sections 323,324,504,506,34 and a case of atracity at Doddapet police station in connection with a quarrel over Rs 500

500  ರೂಪಾಯಿ ವಿಚಾರಕ್ಕೆ ಕಿರಿಕ್​ !  ದಾಖಲಾಯ್ತು  ಐಪಿಸಿ  323,324,504,506,34 & ಅಟ್ರಾಸಿಟಿ ಕೇಸ್​!

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS

500 ರೂಪಾಯಿ ವಿಚಾರಕ್ಕೆ ಆರಂಭವಾದ ಜಗಳ ಅಂತಿಮವಾಗಿ ಹೊಡೆದಾಟ, ನಿಂದನೆಗೆ ಕಾರಣವಾಗಿ  ಸಾಲು ಸಾಲು ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಕೇಸ್ ಆಗಲು ಕಾರಣವಾಗಿದೆ. ಶಿವಮೊಗ್ಗ ಸೀಗೇಹಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್​ ದಾಖಲಾಗಿದೆ. 

ನಡೆದಿದ್ದೇನು?

ದಾಖಲಾಗಿರುವ ಎಫ್ಐಆರ್​ನ ಪ್ರಕಾರ,  ಸೀಗೇಹಟ್ಟಿನಿವಾಸಿ ಲಕ್ಷ್ಮಣ್​ ಎಂಬವರ ಅಳಿಯನ ಬಳಿ ಉಮೆಶ್ , ಮಂಜಣ್ಣ  ಎಂಬವರು ಐನೂರು ರೂಪಾಯಿ ಪಡೆದುಕೊಂಡಿದ್ದರಂತೆ.ಈ ವೇಳೆ ಆರೋಪಿಗಳು ದೂರುದಾರರ ಅಳಿಯನ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಇದೇ ವಿಚಾರಕ್ಕಾಗಿ ಲಕ್ಷ್ಮಣ್​ ಹಾಗೂ ಇತರರು ಪ್ರಶ್ನಿಸಲು, ಆರೋಪಿಗಳ ಮನೆಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಇಬ್ಬರು ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ಧಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಸದ್ಯ ಈ ಘಟನೆ ಸಂಬಂಧ,  IPC 1860 (U/s-323,324,504,506,34); The SC & ST (Prevention of Atrocities) Amendment Act 2015 (U/s-3(1)(r),3(1)(s),3(2)(va)) ಅಡಿಯಲ್ಲಿ ದೊಡ್ಡಪೇಟೆ ಪೊಲೀಸರು ಕೇಸ್ ದಾಖಲಿಸಿದ್ಧಾರೆ. 


ಬೆಳಗ್ಗೆ ಬೆಳಗ್ಗೆ ಹುಷಾರ್! ಬೈಕ್​ನಲ್ಲಿ ಬೆನ್ನಟ್ಟಿ ನಡೆಸ್ತಾರೆ ಕ್ರೈಂ ! ಚಿಕ್ಕಲ್​ನಲ್ಲಿ ಏನು ನಡೆಯಿತು ಗೊತ್ತಾ?

ಶಿವಮೊಗ್ಗ ನಗರದ ಚಿಕ್ಕಲ್​ ಬಳಿಯಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋದ ಘಟನೆ ಬಗ್ಗೆವರದಿಯಾಗಿದೆ. 

ನಡೆದಿದ್ದೇನು ?

ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನ ತಡೆದಿದ್ದಾರೆ. ಮಾತನಾಡುತ್ತಲೇ ಮಹಿಳೆಯ ಕುತ್ತಿಗೆಗೆ ಕೈ ಹಾಕಿ, ಸರ ಕಿತ್ತಿದ್ದಾರೆ.  ಈ ವೇಳೆ ಮಹಿಳೆ ತಮ್ಮ ಸರವನ್ನು ಹಿಡಿದುಕೊಂಡಿದ್ದರಿಂದ,  ಅರ್ಧ ಸರ ಮಾತ್ರ ಕಳ್ಳರ ಕೈಗೆ ಬಂದಿದೆ. ಘಟನೆ ಬೆನ್ನಲ್ಲೆ ಮಹಿಳೆ ಕೂಗಿದ್ದರಿಂದ  ಕಳ್ಳರು ಅಲ್ಲಿಂದ ಎಸ್ಕೇಪ್​ ಆಗಿದ್ಧಾರೆ. 

 

ಚಿಕ್ಕಲ್ ನಿವಾಸಿ ಲತಾ ಎಂಬವರು ಮನೆಯ ಸಮೀಪದ ಪಾರ್ಕ್ ಬಳಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ನಡೆದ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.   50 ಗ್ರಾಂ ತೂಕದ ಮಾಂಗಲ್ಯ ಸರದಲ್ಲಿ ಸುಮಾರು 30 ಗ್ರಾಂ ಸರಗಳ್ಳರ ಪಾಲಾಗಿದೆ. ಇದರ ಮೌಲ್ಯ ಸುಮಾರು 1.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.  ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.