KARNATAKA NEWS/ ONLINE / Malenadu today/ Jul 15, 2023 SHIVAMOGGA NEWS
ಶಿವಮೊಗ್ಗ ನಗರದ ಚಿಕ್ಕಲ್ ಬಳಿಯಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋದ ಘಟನೆ ಬಗ್ಗೆವರದಿಯಾಗಿದೆ.
ನಡೆದಿದ್ದೇನು ?
ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನ ತಡೆದಿದ್ದಾರೆ. ಮಾತನಾಡುತ್ತಲೇ ಮಹಿಳೆಯ ಕುತ್ತಿಗೆಗೆ ಕೈ ಹಾಕಿ, ಸರ ಕಿತ್ತಿದ್ದಾರೆ. ಈ ವೇಳೆ ಮಹಿಳೆ ತಮ್ಮ ಸರವನ್ನು ಹಿಡಿದುಕೊಂಡಿದ್ದರಿಂದ, ಅರ್ಧ ಸರ ಮಾತ್ರ ಕಳ್ಳರ ಕೈಗೆ ಬಂದಿದೆ. ಘಟನೆ ಬೆನ್ನಲ್ಲೆ ಮಹಿಳೆ ಕೂಗಿದ್ದರಿಂದ ಕಳ್ಳರು ಅಲ್ಲಿಂದ ಎಸ್ಕೇಪ್ ಆಗಿದ್ಧಾರೆ.
ಚಿಕ್ಕಲ್ ನಿವಾಸಿ ಲತಾ ಎಂಬವರು ಮನೆಯ ಸಮೀಪದ ಪಾರ್ಕ್ ಬಳಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ನಡೆದ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 50 ಗ್ರಾಂ ತೂಕದ ಮಾಂಗಲ್ಯ ಸರದಲ್ಲಿ ಸುಮಾರು 30 ಗ್ರಾಂ ಸರಗಳ್ಳರ ಪಾಲಾಗಿದೆ. ಇದರ ಮೌಲ್ಯ ಸುಮಾರು 1.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#Shivamogga / ಮಹಿಳೆಯ ಸರವನ್ನ ಕದ್ದ ಕಳ್ಳರು! pic.twitter.com/TuvWlZrAFE
— malenadutoday.com (@CMalenadutoday) July 15, 2023




