KARNATAKA NEWS/ ONLINE / Malenadu today/ May 31, 2023 SHIVAMOGGA NEWS
ಒಂದು ಕಡೆ ಲೋಕಾಯಕ್ತ ರೇಡ್ ನಡೆಯುತ್ತಿದ್ದರೇ ಇನ್ನೊಂದು ಕಡೆ ರಾಷ್ಟ್ರೀಯ ತನಿಖಾ ದಳ NIA ರಾಜ್ಯದ ಕರಾವಳಿಯಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಿದೆ. ಬೆಳಗ್ಗೆಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆ ಯ ಒಟ್ಟು 16 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದದೆ. ಈ ಹಿಂದೆ ಬಿಹಾರದಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಯವರ ಕಾರ್ಯಕ್ರಮದಲ್ಲಿ ದುಷ್ಕೃತ್ಯವೆಸಗಲು ಸಂಚು ರೂಪಿಸಿದ ಆರೋಪ ಸಂಬಂಧ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಎಲ್ಲೆಲ್ಲಿ ಎನ್ಐಎ ರೇಡ್?
ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆಗಳಲ್ಲಿ ದಾಳಿ ನಡೆದಿದ್ದು, ಹಲವರ ಮನೆ ಹಾಗೂ ಕಚೇರಿಗಳಲ್ಲಿ ಅಧಿಕಾರಿಗಳು ದಾಖಲಾತಿಗಳನ್ನ ಪರಿಶೀಲನೆ ನಡೆಸ್ತಿದ್ಧಾರೆ.
ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಲ್ಲಿಂದು ಯಲ್ಲೋ ಅಲರ್ಟ್! ಹವಾಮಾನ ಇಲಾಖೆ ವರದಿಯಲ್ಲಿ ಗಾಳಿ, ಮಳೆ, ಸಿಡಿಲು, ಗುಡುಗಿನ ಬಗ್ಗೆ ಮಾಹಿತಿ!
ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಜೂನ್ 4 ವರೆಗೂ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಹವಾಮಾನ ವರದಿಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿಅಧಿಕ ಮಳೆ
ಬೆಂಗಳೂರಿನಲ್ಲಿ ಜೂನ್ 4ರವರೆಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನವರದಿಯಲ್ಲಿ ತಿಳಿಸಲಾಗಿದೆ. ಸಾಧಾರಣ ಹಾಗೂ ಗುಡುಗು ಸಿಡಿಲಿನೊಂದಿಗೆ ಅಧಿಕ ಮಳೆಯಾಗಲಿದೆ ಎಂದು ತಿಳಿಸಲಾಗದಿದೆ.
7 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್!
ನಿನ್ನೆ ಪ್ರಕಟಗೊಂಡಿರುವ ವರದಿಯ ಪ್ರಕಾರ ಏಳು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಪ್ರಕಟಗೊಂಡಿದೆ. 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ , ಶಿವಮೊಗ್ಗ ಜಿಲ್ಲೆಗಳಿಗೆ ಇವತ್ತು ಅಂದರೆ, May 31, 2023 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಎಲ್ಲೆಡೆ ಮಳೆ
ಇನ್ನೂ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಗುಡುಗು ಸಿಡಿಲಿನೊಂದಿಗೆ ಜಿಲ್ಲೆಯ ಬಹುಭಾಗಗಳಲ್ಲಿ ಮಳೆಯಾಗುವ ಸೂಚನೆಗಳಿವೆ. ಅಲ್ಲದೆ ತೀವ್ರವಾದ ಗಾಳಿ ಬೀಸುವ ಸಾಧ್ಯತೆ ಇದ್ದು, ಈ ಹಿಂದೆ ನೀಡಿದಂತೆ ಗಾಳಿಯ ವೇಗವನ್ನು ನಮೂದಿಸಿಲ್ಲ.
