BREAKING / ಕುಂತಿ ಪುತ್ರನ ಜನನ/ ಸಕ್ರೆಬೈಲ್ ಬಿಡಾರದಲ್ಲಿ ಸಂತಸ/ ನಾಲ್ಕನೇ ಮರಿಗೆ ಜನ್ಮ ಕೊಟ್ಟ ಸಾಕಾನೆ

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ಸಕ್ರೆಬೈಲ್ ಬಿಡಾರದಿಂದ (sakrebyle elephant camp) ಉತ್ತರಭಾರತಕ್ಕೆ ಆನೆಗಳು ಟ್ರಾನ್ಸಫರ್​ ಆಗುತ್ತಿರುವ ಸುದ್ದಿಗಳು ಆನೆ ಪ್ರೇಮಿಗಳಿಗೆ ನಿರಾಸೆ ಉಂಟುಮಾಡಿತ್ತು. ಅಲ್ಲದೆ ಅಪಸ್ವರ ಕೇಳಿಬರುವಂತೆ ಮಾಡಿತ್ತು. ಇದರ ನಡುವೆ ಇದೀಗ ಸಕ್ರೆಬೈಲ್​ನಲ್ಲಿ ಮತ್ತೆ ಸಂತಸ ಮೂಡಿದೆ. ಏಕೆಂದರೆ ಆನೆ ಕ್ಯಾಂಪ್​ಗೆ ಹೊಸ ಅತಿಥಿ ಬಂದಿದ್ದಾನೆ.

ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರ ಉಚ್ಚಾಟಣೆ! ಕಾರಣ

ಆನೆ ಬಿಡಾರದ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಇವತ್ತು ಬಿಡಾರದ ಹೆಮ್ಮೆಯ ಆನೆ ಎನಿಸಿರುವ ಕುಂತಿಯು ನಾಲ್ಕನೆ ಮರಿಗೆ ಜನ್ಮ  ನೀಡಿದೆ. ಗಂಡು ಮರಿಗೆ ಕುಂತಿ ಆನೆ ಜನ್ಮ ನೀಡಿದೆ. ಸಿಬ್ಬಂದಿ ಕುಂತಿ ಆನೆ ಹಾಗೂ ಮರಿಯಾನೆಯ ಆರೈಕೆಯಲ್ಲಿ ತೊಡಗಿದ್ದಾರೆ. 

ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ

ಹಾಸನ ವಿಭಾಗದಲ್ಲಿ ಮೊದಲ ಮರಿಯೊಂದಿಗೆ ಸೆರೆಯಾಗಿದ್ದ ಕುಂತಿ ಆನೆ ಸಕ್ರೆಬೈಲ್​ ಪ್ರಮುಖ ಆನೆ. ಅರ್ಜುನ (11 ವರ್ಷ) ಹೇಮಾವತಿ (8 ವರ್ಷ), ಧನುಷ್​ ( 4 ವರ್ಷ) ಒಟ್ಟು ಮೂರು ಮರಿಗಳನ್ನು ಹೊಂದಿರುವ ಕುಂತಿಗೆ ಇದು ನಾಲ್ಕನೇ ಮರಿ.ಇನ್ನೂ ವೈಲ್ಡ್​ ಲೈಫ್​ ಸಿಸಿಎಫ್​ ಐಎಂ ನಾಗರಾಜ್​ರವರು ಇದೇ ತಿಂಗಳು ನಿವೃತ್ತರಾಗ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂತಿಯ ನಾಲ್ಕನೇ ಮರಿಗೆ ಐಎಂ ಎಂದು ಹೆಸರಿಡಲು ಸಿಬ್ಬಂದಿ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor