ಬ್ಯಾರಿ ಮಾಲ್​ಗೆ 99 ವರ್ಷ ಲೀಜ್​ ಗ್ಯಾರಂಟಿನೆ? ನಡೆಯಿತೇ ಕಾಣದ ಕೈಗಳ ಡೀಲ್​?

This Article Written by / Malenadu Today / ಡಿಸೆಂಬರ್ 15, 2022

ಶಿವಮೊಗ್ಗದ ಅಮೀರ್​ ಅಹಮದ್ ಸರ್ಕಲ್​ನಲ್ಲಿರುವ ಎಸ್​ಎನ್ ಮಾರ್ಕೆಟ್ ಅಥವಾ ಬ್ಯಾರಿ ಮಾಲ್​ಗೆ ನೀಡಿರುವ ಗುತ್ತಿಗೆ ಅವಧಿಯನ್ನು 99 ವರ್ಷಗಳ ಕಾಲಕ್ಕೆ ವಿಸ್ತರಿಸುವುದು ಬಹುತೇಕ ಖಾಯಂ ಎನ್ನಲಾಗುತ್ತಿದೆ. ಈ ಸಂಬಂಧ ಇವತ್ತು ಸಭೆ ಅಜೆಂಡಾದಲ್ಲಿ ಇಲ್ಲದ ವಿಷಯವನ್ನು , ಸಭೆಗೆ ತಂದಿರುವ ಬಗ್ಗೆ ತನಿಖೆ ಕೈಗೊಂಡ ತನಿಖಾ ಸಮಿತಿಯ ವರದಿಯನ್ನು ಮಂಡಿಸಲಾಗಿದೆ. 

ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರ ಉಚ್ಚಾಟಣೆ! ಕಾರಣ

ಪಾಲಿಕೆ ಸದಸ್ಯರ ಮೀಟಿಂಗ್​

ಆದರೆ ಇದರ ಜೊತೆಯಲ್ಲಿ ಸಾಮಾನ್ಯ ಸಭೆಯಲ್ಲಿ ಬ್ಯಾರಿ ಮಾಲ್​ಗೆ 99 ವರ್ಷ ಗುತ್ತಿಗೆ ವಿಸ್ತರಣೆ ಮಾಡುವ ಸಂಬಂಧ ಅರ್ಜಿ ಬಂದಿದ್ದು, ಈ ಬಗ್ಗೆ ಚರ್ಚಿಸಲು ಅವಕಾಶ ಕೇಳಿರುವ ಪ್ರಸ್ತಾವನೆಯು ಸಹ ಇತರೇ ಅಂಶಗಳ ಪಟ್ಟಿಯಲ್ಲಿದೆ. ಅಲ್ಲದೆ ಈ ಸಂಬಂಧ ಎಲ್ಲಾ ಪಾಲಿಕೆ ಸದಸ್ಯರಿಗು ತಿಳುವಳಿಕೆ ಕಾಪಿಯನ್ನು ಸಹ ಕಳಿಸಲಾಗಿದೆ. ಇನ್ನೂ ಇದೇ ವಿಚಾರವಾಗಿ ಇವತ್ತು ಪಾಲಿಕೆಯಲ್ಲಿ ಪ್ರತ್ಯೇಕವಾಗಿ ಪಾಲಿಕೆ ಸದಸ್ಯರ ಸಭೆ ಕೂಡ ನಡೆದಿದೆ ಎನ್ನಲಾಗುತ್ತಿದ್ದು, ಅಲ್ಲಿ ಚರ್ಚಿತ ವಿಷಯದ ಬಗ್ಗೆ ಸಾಕಷ್ಟು ಸಮಾಲೋಚನೆಗಳು ಸಹ ನಡೆದಿವೆಯಂತೆ. ಹಾಗೊಂದು ವೇಳೆ ಪಾಲಿಕೆ ಸದಸ್ಯರೆಲ್ಲರು ಅಸ್ತು ಎಂದಲ್ಲಿ ವಿವಾದವೇ ಇಲ್ಲದೇ ಗುತ್ತಿಗೆ ಅವಧಿ ವಿಸ್ತರಣೆಯಾಗಲಿದೆ. 

ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ

ಡೀಲ್ ಆಯ್ತಾ? 

ಇನ್ನೊಂದು ಮೂಲದ ಪ್ರಕಾರ, ಬ್ಯಾರಿ ಮಾಲ್​ಗೆ 99 ವರ್ಷದ ಗುತ್ತಿಗೆ ನೀಡಲು ದೊಡ್ಡ ಮಟ್ಟದ ಲಾಭಿಯು ಸಹ ನಡೆದಿದೆ ಎನ್ನಲಾಗುತ್ತಿದೆ. ಇದರ ಹಿಂದೆ ಬಹುಕೋಟಿ ಹಣದ ವ್ಯವಹಾರ ನಡೆದಿರುವ ಸಂಶಯವೂ ಸಹ ದಟ್ಟವಾಗಿದೆ. ಈ ವಹಿವಾಟಿನ ನೇತೃತ್ವ ವಹಿಸಿಕೊಂಡವರು ಯಾರು? ಯಾರಿಗೆಲ್ಲ ಇದರಲ್ಲಿ ಪಾಲಿದೆ? ಒಂದು ಮಾಲಿನ ವಿಚಾರವಾಗಿ ಏನೆಲ್ಲಾ ನಡೆದಿದೆ ಎಂಬಿತ್ಯಾದಿ ಅಂಶಗಳ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ. ಅಂತಿಮವಾಗಿ ಬ್ಯಾರಿ ಮಾಲ್​ಗೆ 99 ವರ್ಷಗಳ ಕಾಲ ಗುತ್ತಿಗೆ ವಿಸ್ತರಣೆ ಸರಾಗವಾಗಿ ಆಗುವ ಸಾದ್ಯತೆಯೇ ಹೆಚ್ಚುಎನ್ನುತ್ತಿದ್ದಾರೆ ಪಾಲಿಕೆಯಲ್ಲಿ ನಡೆಯುತ್ತಿರುವ ಬೆಳವಣಿಗಳನ್ನು ಬಲ್ಲವರು.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

#ShivamoggaNews,shimogga,SHIVAMOGGA,shivamogga latest news,shivamogga live,shivamogga today news

ಮುಂದಿನ ಸುದ್ದಿ ಒದಿ

Leave a Comment