BREAKING NEWS : ಮಾರ್ಚ್​ ಆರರಿಂದ, ಶಿವಮೊಗ್ಗ ನಗರಕ್ಕೆ ನೀರು ಸರಬರಾಜು ಮಾಡುವ ನೌಕರರಿಂದ ಮುಷ್ಕರ!

BREAKING NEWS: From March 6, employees supplying water to Shivamogga city will go on strike.

BREAKING NEWS :  ಮಾರ್ಚ್​ ಆರರಿಂದ, ಶಿವಮೊಗ್ಗ ನಗರಕ್ಕೆ ನೀರು ಸರಬರಾಜು ಮಾಡುವ ನೌಕರರಿಂದ ಮುಷ್ಕರ!

MALENADUTODAY.COM  |SHIVAMOGGA| #KANNADANEWSWEB

ನೌಕರಿ ಖಾಯಮಾತಿ ಮತ್ತು ಸಮಾನ ವೇತನಕ್ಕೆ ಆಗ್ರಹಿಸಿ ಇದೇ  ಮಾರ್ಚ್​ 6 ರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗದ 115 ನೌಕರರು ಕೆಲಸ ಸ್ಥಗಿತ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಶಿವಮೊಗ್ಗ ಮಹಾನಗರಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘ ತಿಳಿಸಿದೆ.  ಹಲವು ಬಾರಿ  ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸ್ಥಳೀಯ ಆಡಳಿತದಿಂದ ಹಿಡಿದು, ಸಚಿವರು ಹಾಗೂ  ಮುಖ್ಯಮಂತ್ರಿಗಳಲ್ಲಿ ಕೋರಲಾಗಿತ್ತು.

READ |  BREAKING NEWS : ನಾಳೆ ನಾಡಿದ್ದು ಶಿವಮೊಗ್ಗ ನಗರದ ಬಹುಪಾಲು ಪ್ರದೇಶಗಳಲ್ಲಿ ವಿದ್ಯುತ್​ ಇರೋದಿಲ್ಲ! ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ ಓದಿ

ಶಿವಮೊಗ್ಗಮಹಾನಗರಪಾಲಿಕೆಯ ಅಧೀನದಲ್ಲಿರುವ ಕರ್ನಾಟಕ ನಗರ ನೀರು ಸರಬ ರಾಜು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರನ್ನು ಖಾಯಂ ಮಾಡಲು ಕೋರಲಾಗಿತ್ತು. ಆದರೆ ಈ ವರೆಗೂ ಬೇಡಿಕೆ ಈಡೇರಿಲ್ಲ,  ಸರ್ಕಾರವು ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 11,133 ಸಂಖ್ಯೆ ಹೊರಗುತ್ತಿಗೆ/ನೇರಪಾವತಿ ಪೌರಕಾರ್ಮಿಕರುಗಳನ್ನು ಸಚಿವ ಸಂಪುಟ ಸಭೆಯಲ್ಲಿ ಖಾಯಂ ನೌಕರರುಗಳನ್ನಾಗಿ ಪರಿಗಣಿಸುವ ಬಗ್ಗೆ ಅನುಮೋದನೆ ನೀಡಿದೆ.

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

ಆದರೆ ನೀರು ಸರಬರಾಜು ನೌಕರರ ವಿಷಯದಲ್ಲಿ ಈ ಹಿಂದೆ ಸರಕಾರವೇ ರಚಿಸಿರುವ ಸಮಿತಿಯ ವರದಿಯನ್ನು ಸರ್ಕಾರವೇ ಪರಿಗಣಿಸಿಲ್ಲ. ನಮ್ಮ ಬೇಡಿಕೆ ಪರಿಗಣಿಸದಿದ್ದಲ್ಲಿ ಮುಷ್ಕರ ನಡೆಸುವ ಬಗ್ಗೆ ಫೆಬ್ರವರಿ 20 ರಂದೇ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸಂಘಟನೆ ನೀಡಿದ ಗಡುವು ಮುಗಿದು ವಾರವಾಗಿದೆ. ಆದ್ದರಿಂದ ಮಾ. 6 ರಿಂದ ಮುಷ್ಕರ ನಡೆಸಲಾಗುವುದು ಎಂದು ಸಂಘಟನೆ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಕಿರಣ್‌ ಕುಮಾರ್ ಡಿ.ಎನ್.ಉಪಾ ಧ್ಯಕ್ಷ ರಘುರಾಂ ಕೆ ಹಾಗೂ ಖಜಾಂಚಿ ವಿನಯ್ ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೇಡಿಕೆಗಳು!

  • ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ಖಾಯಂಗೊಳಿಸಿ ಸಮಾನ ವೇತನ ನೀಡಬೇಕು.
  • ಗುತ್ತಿಗೆ ಪದ್ಧತಿಯನ್ನು ಖಾಯಂ ಆಗಿ ರದ್ದುಪಡಿಸಲೇಬೇಕು. ದಿನಕ್ಕೆ ಎಂಟು ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಕಾನೂನು ಬದ್ಧ ವೇತನ ನೀಡಬೇಕು.
  • ರಜೆ, ಆರೋಗ್ಯ ವಿಮೆ, ನಿವೃತ್ತ ವೇತನ, ಉಪಧನ ಕೊಡುವ ಆದೇಶ ಹೊರಡಿಸಬೇಕು.
  • ಪಿಎಫ್ ಇಎಸ್ಐಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ಕೊಡಬೇಕು. ಗೃಹ ಭಾಗ್ಯ ಯೋಜನೆಯಡಿ ಮನವಿಯಲ್ಲಿ ನೀಡಬೇಕು

READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #