ಬಸ್ಸಿನಲ್ಲಿ ಪಕ್ಕದ ಸೀಟಲ್ಲಿ ಸಿಕ್ಕಿ ಲೇಡಿ, ಲಾಡ್ಜ್​ಗೆ ಕರೆದೊಯ್ದಳು! ರೂಮ್​ನಲ್ಲಿ ನಡೆದಿದ್ದು ರೋಮ್ಯಾನ್ಸ್​ ಅಲ್ಲ! ಶಾಕ್?

Here is the details of the fraud case committed by a woman in Doddapet police station limits in Shivamogga

ಬಸ್ಸಿನಲ್ಲಿ ಪಕ್ಕದ ಸೀಟಲ್ಲಿ ಸಿಕ್ಕಿ ಲೇಡಿ,  ಲಾಡ್ಜ್​ಗೆ ಕರೆದೊಯ್ದಳು!  ರೂಮ್​ನಲ್ಲಿ  ನಡೆದಿದ್ದು  ರೋಮ್ಯಾನ್ಸ್​ ಅಲ್ಲ! ಶಾಕ್?

SHIVAMOGGA  |  Dec 24, 2023  |  ಕಣ್ಣಿಗೆ ಕಾಣಿಸುವ ಅಪರಾಧ ಪ್ರಕರಣಗಳಲ್ಲಿ ಕೆಲವೊಮ್ಮೆ ವಿಶೇಷ ಅನ್ನಿಸುವಂತಃ ಘಟನೆಗಳು ನಡೆಯುತ್ತಿರುತ್ತವೆ. ಇದಕ್ಕೆ ಸಾಕ್ಷಿ ಎಂಬಂತ ಘಟನೆಯೊಂದು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್​ ನಲ್ಲಿ ನಡೆದಿದೆ. 

ದೊಡ್ಡಪೇಟೆ ಪೊಲೀಸ್ ಸ್ಟೇಷನ್ 

ಸಾಮಾನ್ಯವಾಗಿ ಕೆಎಸ್​​ಆರ್​ಟಿಸಿ ಬಸ್​​ ನಿಲ್ದಾಣದಲ್ಲಿ ನಡೆಯುವ ಸರಗಳ್ಳನ ಪ್ರಕರಣಗಳನ್ನ ದಾಖಲಿಸಿಕೊಳ್ತಿದ್ದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​  ಬಸ್​ ನಿಲ್ದಾಣದ ಘಟನೆಗಳಿಗೆ ಕೇವಲ ಮೂಕ ಸಾಕ್ಷಿಯಾಗುತ್ತಿದೆ. ಅದರ ಜೊತೆಗೆ ಇದೀಗ ಹೊಸದೊಂದು ಕೇಸ್​ ಕಳೆದ 22 ರಂದು ದೊಡ್ಡಪೇಟೆಯಲ್ಲಿ ದಾಖಲಾಗಿದೆ. ಈ ಕೇಸ್ ತುಸು ವಿಚಿತ್ರ ಮತ್ತು ವಿಶೇಷ ಅನ್ನಿಸಿಕೊಳ್ತಿದೆ.

ನೆರೆ ಜಿಲ್ಲೆ ಉತ್ತರ ಕನ್ನಡದಿಂದ ಶಿವಮೊಗ್ಗಕ್ಕೆ ಬರುವಾಗ ಕೆಎಸ್​​ಆರ್​ಟಿಸಿ ಬಸ್​ನಲ್ಲಿ ಸಿಕ್ಕ ಮಹಿಳೆಯನ್ನ ನಂಬಿ ತನ್ನದ್ದೆಲ್ಲಾ ಕಳೆದುಕೊಂಡ ವ್ಯಕ್ತಿಯ  ಬಗ್ಗೆ ವರದಿ ಇದಾಗಿದೆ. ಬಸ್​ನಲ್ಲಿ ತಮ್ಮ ಸೀಟು ಪಕ್ಕ ಮಹಿಳೆಯೊಬ್ಬರು ಬಂದು ಕೂತರೆ ಕೆಲವರಿಗೆ ಅದೊಂದು ಸಂತಸದ ವಿಷಯವಾಗಿರುತ್ತದೆ. ಹಾಗೆಯೇ ಉತ್ತರಕನ್ನಡ ಜಿಲ್ಲೆಯೊಂದರ ಊರಿನಿಂದ ಹೊರಟು ಶಿವಮೊಗ್ಗಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಅನಿಸಿತ್ತು. ಪಕ್ಕದಲ್ಲಿದ್ದ ಮಹಿಳೆಯು ಲಾಂಗ್ ಜರ್ನಿಯಲ್ಲಿ ತನ್ನ ಪಕ್ಕದಲ್ಲಿದ್ದ ವ್ಯಕ್ತಿಯ ಜೊತೆಗೆ ಪರಿಚಯ ಮಾಡಿಕೊಂಡು ಹರಟಲು ಆರಂಭಿಸಿದ್ದಳು

ಲಾಡ್ಜ್‌ಗೆ ಕರೆದೊಯ್ದ ಮಹಿಳೆ

ಶಿವಮೊಗ್ಗಕ್ಕೆ ಬರುವಷ್ಟರಲ್ಲಿ ಮಹಿಳೆ ಆಲ್​ಮೋಸ್ಟ್​ ಪಕ್ಕದಲ್ಲಿದ್ದ ವ್ಯಕ್ತಿಯ ಜೊತೆ ಸಲುಗೆ ತೆಗೆದುಕೊಂಡಿದ್ದಳು. ಆತ ಸಹ  ಮಹಿಳೆ ತೋರಿದ ಆಫರ್​ಗೆ ಮರುಳಾಗಿದ್ದ. ಗಂಡನಿಲ್ಲದ ಬದುಕಿದು, ಸ್ನೇಹದ ಸಾನಿಧ್ಯ ಬೇಕಿದೆ, ಒಪ್ಪಿತ ಸಂಬಂಧದ ಆಸೆ ತೋರಿದ್ದ ಮಹಿಳೆ, ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಇಳಿಯುತ್ತಲೇ ಪರಪುರಷನನ್ನ ಅಲ್ಲಿಯೇ ಸಮೀಪದ ಹೊಸ ಲಾಡ್ಜ್​ ಒಂದಕ್ಕೆ ಕರೆದೊಯ್ದಿದ್ದಳು.. 

ತಿಂಡಿ ತರುವಷ್ಟರಲ್ಲಿ ಮಾಯ

ತಾನೇ ರೂಮ್​ ಬುಕ್​ ಮಾಡಿಕೊಂಡು ರೂಮಿಗೆ ಕರೆಸಿಕೊಂಡ ಮಹಿಳೆ ಪರಪುರಷನಿಗೆ ತನ್ನಲ್ಲಿರುವ ಚಿನ್ನ, ದುಡ್ಡು ಎಲ್ಲಾ ಬ್ಯಾಗ್​​ ಗೆ ಹಾಕಿಟ್ಟುಕೊಳ್ಳಲು ಹೇಳಿದ್ದಾಳೆ. ತನ್ನೊಂದಿಗೆ ಮಲಗಲು ಚಿನ್ನಾಭರಣ ತೆಗೆದಿಡಬೇಕು ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ ಎಂದು ಪರಪುರಷನನ್ನ ನಂಬಿಸಿದ್ದಾಳೆ. ಎಲ್ಲವನ್ನು ಆಕೆಯೇ ನೋಡಿಕೊಳ್ತಿದ್ದರಿಂದ ಆತನು ಆಕೆ ಹೇಳಿದಾಗೆ ಕೇಳಿದ್ದಾನೆ. ಅಷ್ಟರಲ್ಲಿ ದುಡ್ಡುಕೊಟ್ಟು ಪರಪುರಷನ ಬಳಿ ನೀರು, ಊಟ ತರಲು ಅವಳು ಹೇಳಿದ್ಧಾಳೆ. ಆತ ಸರಿ ಎಂದು ಹೊರಕ್ಕೆ ಹೋಗಿ ತಿಂಡಿ ನೀರು ತರಲು ಖರೀದಿಸಿದ. ಆದರೆ ವಾಪಸ್ ಬರುವಷ್ಟರಲ್ಲಿ ಶಾಕ್ ಕಾದಿತ್ತು. 

ದಾಖಲಾಯ್ತು ಕೇಸ್

ಅಲ್ಲಿವರೆಗೂ ಎಲ್ಲವೂ ಸರಿಯಾಗಿತ್ತು. ಪರಪುರುಷ ವಾಪಸ್ ಲಾಡ್ಜ್​ಗೆ ಬರುವಾಗ, ಲಾಡ್ಜ್​​ನಲ್ಲಿದ್ದವರು ನಿಮ್ಮವರು ಹೋದರು ಎಂದಿದ್ದಾರೆ. ಈತನಿಗೆ ಭಯವಾಗಿ ರೂಮಿಗೆ ಹೋಗಿ ನೋಡಿದ್ದಾನೆ. ಅಲ್ಲಿ ದುಡ್ಡು,ಚಿನ್ನ ಇದ್ದ ಬ್ಯಾಗ್​ ಸಹ ಮಾಯವಾಗಿತ್ತು. ತಾನು ಮೋಸ ಹೋಗಿದ್ದು ಅರಿವಾದರೂ ಮರ್ಯಾದೆಯ ಪ್ರಶ್ನೆಯಾಗಿತ್ತು. ಖುದ್ದು ಹುಡುಕಿ ಕೊನೆ ದೊಡ್ಡಪೇಟೆ ಪೊಲೀಸರ ಮೊರೆಹೋಗಿದ್ದಾರೆ. ಸದ್ಯ ದೊಡ್ಡಪೇಟೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.