ಅರಣ್ಯ ಒತ್ತುವರಿ ನೆಪದಲ್ಲಿ, ಸಿಗಂದೂರು ದೇಗುಲದ ಆಡಳಿತದಲ್ಲಿ ಹಸ್ತಕ್ಷೇಪ/ ಜನವರಿ 22 ಕ್ಕೆ ಬೃಹತ್ ಹಕ್ಕೊತ್ತಾಯ ಸಮಾವೇಶ

ಈಡಿಗ, ಬಿಲ್ಲವ, ನಾಮಧಾರಿ ಹಾಗೂ ನಾರಾಯಣಗುರು ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 22 ರಂದು ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು ಎಂದು ಶ್ರೀ ನಾರಾಯಣಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷರಾದ ಸಿಗಂದೂರಿನ ಡಾ.ರಾಮಪ್ಪ ಹೇಳಿದರು.

ಅರಣ್ಯ ಒತ್ತುವರಿ ನೆಪದಲ್ಲಿ, ಸಿಗಂದೂರು ದೇಗುಲದ ಆಡಳಿತದಲ್ಲಿ ಹಸ್ತಕ್ಷೇಪ/  ಜನವರಿ 22 ಕ್ಕೆ ಬೃಹತ್ ಹಕ್ಕೊತ್ತಾಯ ಸಮಾವೇಶ

ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಹಿಂದುಳಿದ ಜಾತಿಗಳ 2-ಎ ಮೀಸಲಾತಿ ರಕ್ಷಣೆ ಮತ್ತು ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ರಚನೆ ಹಾಗೂ ಶರಾವತಿ ಮತ್ತು ಇತರೆ ಮುಳುಗಡೆ ಸಂತ್ರಸ್ತರ ಪುನರ್ ವಸತಿಗೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.  

ಚಾಕೋಲೆಟ್ ಎಂದು ತಿಳಿದು ಇಲಿ ಪಾಷಾಣ ತಿಂದ ಮಗು/ ಪೋಷಕರೇ ಎಚ್ಚರವಹಿಸಿ / ತೀರ್ಥಹಳ್ಳಿಯಲ್ಲಿ ಪುಟ್ಟ ಮಗು ಸಾವು

ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಪಂಚಮಸಾಲಿ ಲಿಂಗಾಯಿತ ಸೇರಿದಂತೆ ಬೇರೆ ಬೇರೆ ಸಮುದಾಯದವರು ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರದ ಮೀಸಲಾತಿ ಧೋರಣೆಯಿಂದ ನಮ್ಮ ಸಮಾಜಕ್ಕೆ ಇರುವ ಮೀಸಲಾತಿ ಕೈ ತಪ್ಪುವ ಆತಂಕ ಎದುರಾಗಿದೆ. ನಾಮಧಾರಿ, ಈಡಿಗ, ಬಿಲ್ಲವ, ಕುರುಬ, ಕುಂಬಾರ, ಅಗಸ, ಮಡಿವಾಳ, ದೇವಾಡಿಗ, ದೋಬಿ, ಸೆರೇಗಾರ್, ಭಂಡಾರಿ, ಪೂಜಾರಿ, ಹಾಲಾಕ್ಷತ್ರಿಯ, ನಾಡರ್, ಗಾಣಿಗ, ಕಮ್ಮಾರ, ಹಾಲುಮತ, ಹಡಪದ, ಮಹಾಲೆ, ನಾಡಿಗ, ಸವಿತಾ, ವಿಶ್ವಕರ್ಮ, ತಿಗಳ, ಆಚಾರಿ, ಅಕ್ಕಸಾಲಿ, ಬಡಿಗಾರ್, ಮೇಸ್ತ, ಬಡಗಿ ಹೀಗೆ ನೂರಕ್ಕೂ ಮೇಲ್ಪಟ್ಟ ಹಿಂದುಳಿದ ಜಾತಿಗಳ ಸಮುದಾಯದ ೨ ಎ ಮೀಸಲಾತಿಯು ಇಂದು ಸರ್ಕಾರದ ಅವೈಜ್ಞಾಕ ತಿಯಿಂದ ಕೈ ತಪ್ಪುವ ಸಾಧ್ಯತೆ ಇದೆ. ಇದಕ್ಕಾಗಿ ನಾವು ಜಾಗೃತರಾಗಬೇಕಿದೆ. ನಮ್ಮ ಹಕ್ಕು ರಕ್ಷಣೆಗಾಗಿ ಹೋರಾಟ ಅವಾರ್ಯ ಎಂದರು. 

ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​?

ಪ್ರಮುಖವಾಗಿ ನಮ್ಮ ಐದು ಬೇಡಿಕೆಗಳಿದ್ದು, ಅವುಗಳನ್ನು ಸರ್ಕಾರ ಈಡೇರಿಸಬೇಕು ಎಂಬದು ನಮ್ಮ ಸಮಾಜದ ಆಗ್ರಹ. ಪ್ರವರ್ಗ ೨-ಎ ಮೀಸಲಾತಿ ರಕ್ಷಿಸಿ, ಕಾಂತರಾಜು ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ಸಮಾಜದ ಬಂಧುಗಳು ಕುಲಕಸುಬನ್ನು ಕಳೆದುಕೊಂಡಿದ್ದು, ಪರ್ಯಾಯ ವ್ಯವಸ್ಥೆಯಾಗಬೇಕು. ಸಮಾಜದ ಅಭಿವೃದ್ಧಿಗಾಗಿ ನಾರಾಯಣಗುರು ನಿಗಮ ರಚನೆಗೆ ಒತ್ತಾಯಿಸಿದ್ದರಿಂದ ಅದರ ಘೋಷಣೆಯಾಗಿದೆ. ಆದರೆ ಇನ್ನೂ ಸರ್ಕಾರಿ ಆದೇಶ ಹೊರಬಿದ್ದಿಲ್ಲ. ಅಧ್ಯಕ್ಷರ ನೇಮಕವಾಗಿಲ್ಲ. ನಿಗಮ ರಚಿಸಿ ಕನಿಷ್ಠ ರೂ. ೫೦೦ ಕೋಟಿ ಅನುದಾನ ಮೀಸಲಿಡಬೇಕು. 

ಅರಣ್ಯ ಒತ್ತುವರಿ ಹೆಸರಲ್ಲಿ ದೇವಸ್ಥಾನದ ಆಡಳಿತದಲ್ಲಿ ಹೆಸ್ತಕ್ಷೇಪ

ಮಲೆನಾಡು ಭಾಗದಲ್ಲಿ ನೀರಾವರಿ, ವಿದ್ಯುತ್‌ಗಾಗಿ ಶರಾವತಿ, ಸಾವೆಹಕ್ಲು ಇತರೆ ಮುಳುಗಡೆ ಪ್ರದೇಶದಿಂದ ನಮ್ಮ ಸಮಾಜದವರು ಸಂತ್ರಸ್ತರಾಗಿದ್ದಾರೆ. ಅವರಿಗೆ ಪುನರ್ ವಸತಿ ಕಲ್ಪಿಸಬೇಕು. ಈ ಬಗ್ಗೆ ಸಾಕಷ್ಟು ಹೋರಾಟ ನಡೆಯುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಸಾರ್ವಜನಿಕ ದೇವಸ್ಥಾನ ಆಗುವ ಮೊದಲು ರಾಮಪ್ಪನವರ ಮನೆ ದೇವರಾಗಿತ್ತು. ಈಗ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಅರಣ್ಯಭೂಮಿ ಒತ್ತುವರಿ ನೆಪದಲ್ಲಿ ಸರ್ಕಾರ ದೇವಸ್ಥಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದನ್ನು ನಿಲ್ಲಿಸಬೇಕು. 

ಇದನ್ನು ಸಹ ಓದಿ ಶಿವಮೊಗ್ಗ ಕೋಮುಗಲಭೆಯ ಹಿಂದಿರೋ ತಂಡದ ಹೆಡೆಮುರಿ ಕಟ್ಟಿದ ಎಸ್​ಪಿಮಿಥುನ್​ ಕುಮಾರ್! ಏನಿದು ಕೇಸ್​? JP ಸ್ಟೋರಿ

ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರಿಡಬೇಕು. ಬಂಗಾರಪ್ಪನವರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಅಭಿವೃದ್ಧಿ ಹರಿಕಾರರು. ಅವರ ಹೆಸರಡಬೇಕೆಂಬುದು ನಮ್ಮ ಸಮಾವೇಶದ ಹಕ್ಕೊತ್ತಾಯದಲ್ಲೊಂದು ಎಂದರು.  ವಿಚಾರ ವೇದಿಕೆಯ ಘಟಕಗಳನ್ನು ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ರಚಿಸಲಾಗಿದೆ. ನಮ್ಮ ಹಕ್ಕು ರಕ್ಷಣೆಗಾಗಿ ರಂತರ ಹೋರಾಟ ನಡೆಸಲಾಗುವುದು. ನಮ್ಮ ಸಮಾಜದ ಹಿರಿಯರಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಹಾಲಪ್ಪ ಹರತಾಳು, ಬಿ.ಸ್ವಾಮಿರಾವ್, ಜಿ.ಡಿ.ನಾರಾಯಣಪ್ಪ ಮುಂತಾದವರು ಈ ಸಮಿತಿಯಲ್ಲಿದ್ದಾರೆ ಎಂದರು. 

ಇದನ್ನು ಓದಿಶಿವಮೊಗ್ಗದಲ್ಲಿ ಗಿಲ್ಲಕ್ಕೋ ಶಿವ...ಗಿಲ್ಲಕ್ಕೋ/ ಶಿವಣ್ಣನ ಟಗರು ಡ್ಯಾನ್ಸ್​ಗೆ , ಬಿಂದಾಸ್​ ಆಗಿ ಕುಣಿದ ಲೇಡಿಸ್ ಫ್ಯಾನ್ಸ್​

ಹಕ್ಕೋತ್ತಾಯ ಸಮಾವೇಶ

ಜನವರಿ ೨೨ ರಂದು ೧೦ ಗಂಟೆಗೆ ಸಮಾಜದ ಮೆರವಣಿಗೆಯು ಜಿಲ್ಲಾ ಆರ್ಯ ಈಡಿಗರ ಸಂಘದ ಸಭಾಭವನದಿಂದ ಹೊರಟು ಬಸ್ ಲ್ದಾಣದ ಮೂಲಕ ಬಿ.ಎಚ್.ರಸ್ತೆಯ ಮಾರ್ಗವಾಗಿ ಸರ್ಕಾರಿ ಪದವಿಪೂರ್ವ ಕಾಲೇಜು ತಲುಪುವುದು. ೧೧ ಗಂಟೆಗೆ ಮೀನಾಕ್ಷಿ ಭವನದ ಎದುರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು. 

ಗೋವಾ ಪ್ರವಾಸದಲ್ಲಿದ್ದ ವೇಳೆ ಸರ್ಜಿ ಆಸ್ಪತ್ರೆಯ ವೈದ್ಯ ಸತೀಶ್ ಅಸ್ವಸ್ಥ

ವೇದಿಕೆ ತಾಲ್ಲೂಕು ಅಧ್ಯಕ್ಷ ಚಂದ್ರ್ರಶೇಖರ ಸೂರಗುಪ್ಪೆ, ಸಮಾಜದ ಪ್ರಮುಖರಾದ ಟಿ.ವಿ.ಪಾಂಡುರಂಗ, ಎಚ್.ಎನ್.ದಿವಾಕರ, ಕಲ್ಸೆ ಚಂದ್ರಪ್ಪ, ಪರಮೇಶ್ವರಪ್ಪ, ಶ್ರೀಧರಮೂರ್ತಿ, ಲಿಂಗರಾಜ್ ಆರೋಡಿ, ಗುರು ಶಿರವಾಳ, ಷಣ್ಮುಖ, ಚೇತನರಾಜ್ ಕಣ್ಣೂರು, ಆನಂದ ಬಿಳಿಸಿರಿ, ಚಂದ್ರಕಾಂತ್, ಶಿವಪ್ಪ, ಎಂ.ಹಾಲಪ್ಪ, ಟಿ.ರಘುಪತಿ, ಹೊದಲ ಶಿವು, ಪ್ರಭಾವತಿ, ಮಂಜುಳಾ ಪ್ರಭಾಕರ, ಜಯಲಕ್ಷ್ಮಿ ನಾರಾಯಣಪ್ಪ ಮತ್ತಿತರರು ಹಾಜರಿದ್ದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com