ಸಾಗರ ಟೌನ್ನಲ್ಲಿ ನಡೆದಿರುವ ಹಲ್ಲೆ ಯತ್ನ ಕೇಸ್ಗೆ ಸಂಬಂಧಿಸಿದಂತೆ, ಸಮೀರ್ ಕುಟುಂಬಸ್ಥರು ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಮೀರ್ ಸಹೋದರಿ, ಘಟನೆಯಲ್ಲಿ ನನ್ನಣ್ಣನದ್ದು ಏನೂ ತಪ್ಪಿಲ್ಲ, ಆತ ನನಗೆ ಚುಡಾಯಿಸುತ್ತಿದ್ದ. ಆ ವಿಷಯವನ್ನು ನಾನು ಮನೆಯಲ್ಲಿ ಹೇಳಿದ್ದೆ. ಈ ಕಾರಣಕ್ಕೆ ಆತನಿಗೆ ಹೆದರಿಸಲು ಹೋಗಿರಬಹುದು. ಆದರೆ ನ್ಯೂಸ್ನಲ್ಲಿ ಏನೇನೋ ಬರುತ್ತಿದೆ. ಅದನ್ನ ನೋಡಿಕೊಂಡು ಮಾದ್ಯಮದ ಮುಂದೆ ಬಂದಿದ್ದೇವೆ. ನನ್ನಣ್ಣ ಏನೂ ಸಹ ಮಾಡಿಲ್ಲ, ಆತನನ್ನು ಬಿಟ್ಟುಬಿಡಿ, ನಾವು ಎಲ್ಲಾದರೂ ಹೋಗಿ ಚೆನ್ನಾಗಿ ಇರುತ್ತೇವೆ ಎಂದು ಸಹೋದರಿ ಕಣ್ಣೀರಿಟ್ಟಿದ್ಧಾಳೆ.
ಸಾಗರ ಟೌನ್ನಲ್ಲಿ ಹಲ್ಲೆಗೆ ಯತ್ನ ಕೇಸ್/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ
ಇನ್ನೂ ಸುನೀಲ್ ತನ್ನನ್ನ ಚುಡಾಯಿಸುತ್ತಿದ್ದ, ಆತ ಕಾಲೇಜು ಬಳಿ ಬಂದು ಚುಡಾಯಿಸುತ್ತಿದ್ದ. ಆತ ಚುಡಾಯಿಸುತ್ತಿದ್ದ ಎಂದೇ ಆತನಿಗೆ ಗೊತ್ತಾಗಬಾರದು ಎಂದು ಚಪ್ಲಿ ಬದಲಾಯಿಸಿಕೊಂಡು ಹೋಗುತ್ತಿದ್ದೆ. ಆ ಬಗ್ಗೆ ಮನೆಯಲ್ಲಿ ಹೇಳಿದ್ದೆ. ಹಿಜಾಬ್ ಸಮಸ್ಯೆ ಆದ ಸಂದರ್ಭದಲ್ಲಿ ಆತ ಚುಡಾಯಿಸುತ್ತಿದ್ದ ಎಂದು ಯುವತಿ ಆರೋಪಿಸಿದ್ದಾರೆ. .
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com