SHIVAMOGGA CRIME NEWS TODAY

ಶಿವಮೊಗ್ಗ: ವೆಂಕಟೇಶ್ ನಗರದಲ್ಲಿ ಮಟಮಟ ಮಧ್ಯಾಹ್ನವೇ ಕಳ್ಳತನ, 19 ಲಕ್ಷ ಮೌಲ್ಯದ ಚಿನ್ನ, ದುಡ್ಡು ಮಾಯ! ಹೇಗಾಯ್ತು ಘಟನೆ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ನಡುಹಗಲಲ್ಲೇ ಮನೆಯ ಬೀಗ ಮುರಿದು 19 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ದುಡ್ಡು ಕಳವು ಮಾಡಿದ ಘಟನೆಯೊಂದು ಶಿವಮೊಗ್ಗ ಸಿಟಿಯಲ್ಲಿಯೇ ವರದಿಯಾಗಿದೆ. ಕಳೆದ ಮೇ ನಾಲ್ಕರಂದು ಜಯನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ಬರುವ ವೆಂಕಟೇಶ್ ನಗರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗ ಸಿಟಿಯಲ್ಲಿ ಪೊಲೀಸ್ ಅಲರ್ಟ್​ ಆಗಿದ್ದರೂ, ಹಗಲು ಹೊತ್ತಿನಲ್ಲಿಯೇ ಘಟನೆಯೊಂದು ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. 

ಮೇ ನಾಲ್ಕನೇ ತಾರೀಖು, ವೆಂಕಟೇಶ್ ನಗರ  4ನೇ ಕ್ರಾಸ್‌ನ ಮಾತಾ ಪಿತೃ ಕೃಪಾ ನಿಲಯದ ನಿವಾಸಿ, ಪ್ರಶಾಂತ್ ಎಂಬವರು ಎಂದಿನಂತೆ ತಮ್ಮ ವಹಿವಾಟಿಗಾಗಿ ಟೈಲರಿಂಗ್​ ಅಂಗಡಿಗೆ ತೆರಳಿದ್ದು. ಇವರ ಪತ್ನಿ ಮಧ್ಯಾಹ್ನ 12-25 ಗಂಟೆಗೆ ಮನೆಗೆ ಬೀಗ ಜಡಿದು ಬ್ಯೂಟಿ ಪಾರ್ಲರ್‌ಗೆ ತೆರಳಿದ್ದರು. ಬಳಿಕ ಮಧ್ಯಾಹ್ನ 2-00 ಗಂಟೆಯ ಹೊತ್ತಿಗೆ ವಾಪಸ್​ ಆಗಿದ್ದಾರೆ. ಅಷ್ಟೊತ್ತಿಗೆ ಮನೆಯಲ್ಲಿ ಕಳ್ಳತನ ನಡೆದಿದೆ. 

ವೆಂಕಟೇಶ್ ನಗರದಲ್ಲಿ ನಡೆದಿರುವ ಕಳ್ಳತನ

ಪ್ರಶಾಂತ್ ರವರ ಪತ್ನಿ ಮನೆಗೆ ಹಿಂದಿರುಗಿದಾಗ, ಮನೆಯ ಮುಂಬಾಗಿಲು ತೆರದಿತ್ತು. ಮಲಗುವ ಕೋಣೆಯಲ್ಲಿದ್ದ ವಾರ್ಡ್ರೋಬ್ ಮತ್ತು ಗೋದ್ರೇಜ್ ಬೀರುಗಳ ಬಾಗಿಲು ಓಪನ್ ಆಗಿದ್ದವು. ಅದರೊಳಗಿದ್ದ ವಸ್ತುಗಳೆಲ್ಲವೂ ಹಾಸಿಗೆಯ ಮೇಲೆ ಚೆಲ್ಲಾಪಿಲ್ಲಿಯಾಗಿದ್ದವು. ಇದನ್ನ ಕಂಡ ಅವರು ತಮ್ಮ ಪತಿಗೆ  ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.  ಮನೆಗೆ ಧಾವಿಸಿದ ಪ್ರಶಾಂತ್ ಬಾಬು ಅವರು ಪರಿಶೀಲನೆ ನಡೆಸಿದಾಗ, ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಕಳ್ಳರು ಒಳಕ್ಕೆ ಬಂದಿರುವುದು ಗೊತ್ತಾಗಿದೆ. ನಂತರ ಈ ಸಂಬಂಧ ಜಯನಗರ ಪೊಲೀಸ್ ಸ್ಟೇಷನ್​ಗೆ ಸಿಬ್ಬಂದಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 

ಇನ್ನೂ ಪ್ರಶಾಂತ್​ರವರ ಮನೆಯಲ್ಲಿ ಕಳ್ಳರು ವಾರ್ಡ್ರೋಬ್ ಬೀರುವಿನಲ್ಲಿರಿಸಿದ್ದ 4,00,000 ಕ್ಯಾಶ್​, 1,68,000 ರೂಪಾಯಿ ಮೌಲ್ಯದ 14 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟ್, 1,20,000 ರೂಪಾಯಿ ಬೆಲೆಯ 10 ಗ್ರಾಂ ಚಿನ್ನದ ಚೈನ್, 1,80,000 ರೂಪಾಯಿ ಮೌಲ್ಯದ 15 ಗ್ರಾಂ ಚಿನ್ನದ ಚೈನ್, 60,000 ರೂಪಾಯಿ ಬೆಲೆಯ 5 ಗ್ರಾಂ ಚಿನ್ನದ ಚೈನ್ ಹಾಗೂ ಮತ್ತೊಂದು 1,20,000 ರೂಪಾಯಿ ಮೌಲ್ಯದ 10 ಗ್ರಾಂ ಚಿನ್ನದ ಚೈನ್ 1,20,000 ರೂಪಾಯಿ ಮೌಲ್ಯದ 10 ಗ್ರಾಂ ತೂಕದ ಚಿನ್ನದ ಉಂಗುರ, 60,000 ರೂಪಾಯಿ ಬೆಲೆಯ 5 ಗ್ರಾಂ ಚಿನ್ನದ ಉಂಗುರ, 24,000 ರೂಪಾಯಿ ಮೌಲ್ಯದ 2 ಗ್ರಾಂ ಚಿನ್ನದ ಉಂಗುರ  ಸೇರಿದಂತೆ ಒಟ್ಟು 15,12,000 ರೂಪಾಯಿ ಮೌಲ್ಯದ 126 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದೆ.. 

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಶಿವಮೊಗ್ಗ: ವೆಂಕಟೇಶ್ ನಗರದಲ್ಲಿ ಕಳ್ಳತನ, 19 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿದ ಕಳ್ಳರುShivamogga News Massive Theft in Venkatesh Nagara, Valuables Worth 19 Lakhs Stolen
Shivamogga Lodge Attack Guest Assaults Staff

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ