ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ದೈನಂದಿನ ಫಲಾಫಲ

ಹಂಚಿಕೊಳ್ಳಿ
WhatsApp Facebook X Telegram
ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs
Panchanga and Daily Horoscope February 25, 2026 | February 25, 2026 ರ ಇಂದಿನ ಪಂಚಾಂಗ, ರಾಹುಕಾಲ, ಶುಭ ಮುಹೂರ್ತ ಮತ್ತು 12 ರಾಶಿಗಳ ಸಂಪೂರ್ಣ ದಿನ ಭವಿಷ್ಯ Daily Horoscope

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ ಪಂಚಮಿ ಪೂರ್ಣ ತಿಥಿ ಇರಲಿದೆ. ಮಧ್ಯಾಹ್ನ 1.16 ರವರೆಗೆ ಮೂಲ ನಕ್ಷತ್ರವಿದ್ದು, ತದನಂತರ ಪೂರ್ವಾಷಾಢ ನಕ್ಷತ್ರ ಇರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದ್ದು, ಯಮಗಂಡ ಕಾಲ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ದೈನಂದಿನ ಫಲಾಫಲ

ಮೇಷ /ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಗಳಿವೆ. ಆರ್ಥಿಕ ಪರಿಸ್ಥಿತಿ ಚೇತರಿಕೆ, ಅಧಿಕ ಶ್ರಮ, ಒತ್ತಡದ ಸನ್ನಿವೇಶ ಎದುರಾಗಲಿವೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಕೊಂಚ ಗೊಂದಲದ ವಾತಾವರಣ ನೆಲೆಸಲಿದೆ.

ವೃಷಭ / ದೈನಂದಿನ ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗಲಿವೆ. ಅನಾರೋಗ್ಯ , ಪ್ರಯಾಣ ಮುಂದೂಡಲ್ಪಡಲಿವೆ. ಒತ್ತಡ ಎದುರಾಗಬಹುದು. ಆಧ್ಯಾತ್ಮಿಕ ಚಿಂತನೆ, ನಿರ್ಧಾರ ಬದಲಾಯಿಸುವ ಸಂದರ್ಭ ಒದಗಿಬರಲಿವೆ. ವ್ಯಾಪಾರ ಹಾಗೂ ಉದ್ಯೋಗದ ಸ್ಥಳಗಳಲ್ಲಿ ತೊಂದರೆ.

ಮಿಥುನ / ಶುಭ ಕಾರ್ಯ, ಆರ್ಥಿಕ ಸ್ಥಿತಿಗತಿ ಸುಧಾರಣೆ, ಆಪ್ತರೊಂದಿಗೆ ಉತ್ತಮ ಬಾಂಧವ್ಯ , ಔತಣಕೂಟ ಹಾಗೂ ಮನರಂಜನಾ ಕಾರ್ಯಕ್ರಮ, ಕೈಗೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಎದುರಾಗಿದ್ದ ಸಮಸ್ಯೆ ಬಗೆಹರಿಯಲಿವೆ.

ಕರ್ಕಾಟಕ / ಸ್ನೇಹಿತರೊಂದಿಗೆ ಸಮಯ ಕಳೆಯಲಿದ್ದಾರೆ. ನಿರೀಕ್ಷಿತ ಗುರಿ ಈಡೇರಲಿದ್ದು, ಹಿತೈಷಿಗಳ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಲಿದ್ದೀರಿ. ಕೈಗೊಂಡ ಕೆಲಸಗಳಲ್ಲಿ ಪ್ರಗತಿ , ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.

ಸಿಂಹ / ಕೆಲಸದಲ್ಲಿ ವಿಳಂಬ , ಆರ್ಥಿಕ ಪರಿಸ್ಥಿತಿಯು ಕೊಂಚ ನಿರಾಸೆ ತರಿಸಲಿದ್ದು, ಕೆಲಸದಲ್ಲಿ ಅಧಿಕ ಶ್ರಮವಹಿಸಬೇಕಾಗುತ್ತದೆ. ಸಂಬಂಧಿಕರೊಂದಿಗೆ ಮನಸ್ತಾಪ ಉಂಟಾಗಬಹುದು. ಆರೋಗ್ಯದ ಕಡೆಗೆ ಗಮನ ಹರಿಸುವುದು ಸೂಕ್ತ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಸಮಸ್ಯೆ ಎದುರಾಗುವ ಲಕ್ಷಣಗಳಿವೆ.

ಕನ್ಯಾ / ಒತ್ತಡ ಹೆಚ್ಚಾಗಲಿವೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ , ದೈನಂದಿನ ವ್ಯವಹಾರಗಳಲ್ಲಿ ಅಡೆತಡೆ ಉಂಟಾಗಲಿದ್ದು, ಅನಾರೋಗ್ಯ, ಉದ್ಯೋಗಾವಕಾಶಗಳಿಗಾಗಿ ಪ್ರಯತ್ನಿಸುತ್ತಿರುವವರಿಗೆ ಹಿನ್ನಡೆಯಾಗಬಹುದು. ವ್ಯಾಪಾರ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಗೊಂದಲ ಇರಲಿದೆ.

ತುಲಾ / ಸ್ನೇಹಿತರ ಭೇಟಿಯಾಗುವ ಯೋಗವಿದೆ. ದೀರ್ಘಕಾಲದ ಭೂ ವಿವಾದ ಬಗೆಹರಿಯಲಿವೆ ಹಾಗೂ ಶುಭ ಸಮಾರಂಭ . ಕೈಗೆತ್ತಿಕೊಂಡ ಕೆಲಸ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿವೆ. ದೇವಸ್ಥಾನಗಳಿಗೆ ಭೇಟಿ, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಹೊಸ ನಿರೀಕ್ಷೆ ಮೂಡಲಿವೆ.

ವೃಶ್ಚಿಕ ರಾಶಿಯಿಂದ ಮೀನ ರಾಶಿಯವರೆಗಿನ ದೈನಂದಿನ ಫಲಾಫಲ

ವೃಶ್ಚಿಕ / ಕೆಲಸ ಮುಂದೂಡುವ ಸಾಧ್ಯತೆಗಳಿವೆ. ದೂರದ ಪ್ರಯಾಣ, ವೈಮನಸ್ಸು ಉಂಟಾಗುವ ಲಕ್ಷಣಗಳಿವೆ. ವ್ಯಾಪಾರ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಾಗಲಿವೆ.

ಧನುಸ್ಸು / ಸಂತೋಷದಿಂದ ಸಮಯ ಕಳೆಯಲಿದ್ದಾರೆ. ಅನಿರೀಕ್ಷಿತ ಆಹ್ವಾನ, ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ಹೊಸ ವ್ಯವಹಾರ ಯಾವುದೇ ಅಡೆತಡೆಯಿಲ್ಲದೆ ಸಾಗಲಿವೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅತ್ಯಂತ ಸಾಕಾರಾತ್ಮಕ ವಾತಾವರಣ ಇರಲಿದೆ.

ಮಕರ / ಅಚ್ಚರಿ ಮೂಡಿಸುವ ಸಂಗತಿ ನಿಮ್ಮ ಗಮನಕ್ಕೆ ಬರಲಿವೆ. ದೈನಂದಿನ ಕೆಲಸಗಳಲ್ಲಿ ವಿಘ್ನ ಎದುರಾಗಲಿದ್ದು, ಬಂಧು-ಮಿತ್ರರೊಂದಿಗೆ ಭಿನ್ನಾಭಿಪ್ರಾಯ ಮೂಡಲಿವೆ. ಮನಸ್ಸಿನ ಆಲೋಚನೆ ಅಸ್ಥಿರವಾಗಿರಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ.

ಕುಂಭ / ಮನ್ನಣೆ ದೊರೆಯಲಿದೆ. ಗಣ್ಯ ವ್ಯಕ್ತಿಗಳಿಂದ ವಿಶೇಷ ಆಹ್ವಾನ ಬರಲಿವೆ. ಇಲ್ಲಿಯವರೆಗೆ ಕಾಡುತ್ತಿದ್ದ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಲಿದ್ದು, ಹಿತೈಷಿಗಳ ಸಲಹೆ ಸ್ವೀಕರಿಸಲಿದ್ದೀರಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಿದ್ದೀರಿ.

ಮೀನ / ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಒಪ್ಪಂದ ಏರ್ಪಡಲಿದ್ದು, ಹಣ ಹಾಗೂ ವಸ್ತು ರೂಪದ ಲಾಭ ಒದಗಿಬರಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಎದುರಾಗಿದ್ದ ಸವಾಲು ಯಶಸ್ವಿಯಾಗಿ ಮೆಟ್ಟಿ ನಿಲ್ಲಲಿದ್ದೀರಿ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Todays Panchangam and Horoscope: Daily Astrology Predictions for All Zodiac ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ದೈನಂದಿನ ಫಲಾಫಲದ ಸಂಪೂರ್ಣ ಮಾಹಿತಿ ಇಲ್ಲಿದೆ.
Todays Panchangam and Horoscope: Daily Astrology Predictions for All Zodiac ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ದೈನಂದಿನ ಫಲಾಫಲದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor