ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸದ ಈ ದಿನ ಸಪ್ತಮಿ ತಿಥಿಯು ಇಂದು ಸಂಜೆ 6.00 ಗಂಟೆಯವರೆಗೆ ಇರಲಿದೆ, ತದನಂತರ ಅಷ್ಟಮಿ ಆರಂಭವಾಗಲಿದೆ. ಪೂರ್ವಾಷಾಢ ನಕ್ಷತ್ರ ಇರಲಿದೆ. ಅಮೃತ ಗಳಿಗೆ ರಾತ್ರಿ 3.11 ರಿಂದ 4.56 ರವರೆಗೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರಲಿದೆ. ಇವತ್ತಿನ ಸಂಪೂರ್ಣ ದಿನ ಭವಿಷ್ಯ ವಿವರ ಹೀಗಿದೆ
ಸಂಪೂರ್ಣ ದಿನ ಭವಿಷ್ಯ ವಿವರ
ಮೇಷ / ಸಾಲ ನೀಡಿದವರ ಒತ್ತಡ ಹೆಚ್ಚಾಗಲಿದೆ. ಆಧ್ಯಾತ್ಮಿಕ ಚಿಂತನೆಗಳಲ್ಲಿ ಪಾಲ್ಗೊಳ್ಳುವಿರಿ. ದೈನಂದಿನ ವ್ಯವಹಾರಗಳಲ್ಲಿ ಕಿರಿಕಿರಿ . ಆಲೋಚನೆಗಳು ನಿರೀಕ್ಷಿತ ಫಲ ನೀಡುವುದಿಲ್ಲ. ಜವಾಬ್ದಾರಿಗಳ ಹೊರೆ ಹೆಚ್ಚಾಗಲಿದ್ದು, ಅನಾರೋಗ್ಯ ಬಾಧಿಸುವ ಲಕ್ಷಣಗಳಿವೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಅನಗತ್ಯ ಸಮಸ್ಯೆಗಳು ಎದುರಾಗಲಿವೆ.
ವೃಷಭ / ಅಂದುಕೊಂಡ ಕಾರ್ಯಗಳು ನಿರೀಕ್ಷಿತ ವೇಗದಲ್ಲಿ ಸಾಗುವುದಿಲ್ಲ. ಆರ್ಥಿಕ ವಹಿವಾಟು ಅಷ್ಟಾಗಿ ಕೈಗೂಡುವುದಿಲ್ಲ. ಆಸ್ತಿ ವಿವಾದ ತಲೆದೋರಬಹುದು. ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ಅತ್ಯಗತ್ಯ.. ವ್ಯಾಪಾರ ಮತ್ತು ಉದ್ಯೋಗದ ಸ್ಥಳಗಳಲ್ಲಿ ಹೊಸ ವಿವಾದ ಸೃಷ್ಟಿಯಾಗಬಹುದು.
ಮಿಥುನ / ಹೊಸ ಕೆಲಸ ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸುವರು. ಶುಭ ವಾರ್ತೆಗಳನ್ನು ಆಲಿಸುವಿರಿ. ಆರ್ಥಿಕ ಪ್ರಗತಿ , ಹೊಸ ವಿಚಾರಗಳನ್ನು ಕಲಿಯುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರಲಿದೆ.
ಕರ್ಕಾಟಕ / ಹಳೆಯ ಬಾಕಿ ಹಣ ಕೈಸೇರಲಿದೆ. ಪ್ರಮುಖ ಮಾಹಿತಿ ಲಭ್ಯವಾಗಲಿದೆ. ಸಮಾಜದಲ್ಲಿ ಮನ್ನಣೆ ದೊರೆಯಲಿದ್ದು, ಸೂಕ್ತ ಸಹಾಯ ಸಿಗಲಿದೆ. ಹೊಸ ಗುತ್ತಿಗೆ ಒಲಿಯಲಿವೆ. ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಲಿವೆ.
ಸಿಂಹ / ಬಂಧುಗಳೊಂದಿಗೆ ಅಕಾರಣವಾಗಿ ಭಿನ್ನಾಭಿಪ್ರಾಯ ಉಂಟಾಗಬಹುದು. ಹಠಾತ್ ಪ್ರಯಾಣ . ಕೌಟುಂಬಿಕ ವಲಯದಲ್ಲಿ ಒತ್ತಡ ಹೆಚ್ಚಾಗಲಿವೆ. ಆಧ್ಯಾತ್ಮಿಕ ವಿಚಾರಗಳತ್ತ ಒಲವು . ಉದ್ಯೋಗ ಹಾಗೂ ವ್ಯಾಪಾರದಲ್ಲಿ ನಿರಾಸೆ ಮೂಡುವ ಸಂಭವವಿದೆ.
ಕನ್ಯಾ / ದೈನಂದಿನ ವ್ಯವಹಾರ ನಿರಾಸೆ ತರಿಸಬಹುದು. ಕೆಲಸದ ಒತ್ತಡ ಮತ್ತು ಶ್ರಮ ಹೆಚ್ಚಾಗಲಿದೆ. ಬಂಧು ಮತ್ತು ಮಿತ್ರರೊಂದಿಗೆ ಮನಸ್ತಾಪ . ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಕೆಲವೊಂದು ಅಡೆತಡೆಗಳು ಎದುರಾಗಲಿವೆ.
ತುಲಾ / ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಶುಭ ಕಾರ್ಯ. ವಾಹನ ಖರೀದಿ. ಪ್ರಮುಖ ಚರ್ಚೆ. ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕಾದಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರೋತ್ಸಾಹದಾಯಕ ವಾತಾವರಣ ನಿರ್ಮಾಣವಾಗಲಿದೆ.
ವೃಶ್ಚಿಕ / ಆಲೋಚನೆಗಳಲ್ಲಿ ಅಸ್ಥಿರತೆ . ಕುಟುಂಬ ಸದಸ್ಯರೊಂದಿಗೆ ವಾಗ್ವಾದ ನಡೆಯಬಹುದು. ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಕೈಗೊಂಡ ಕಾರ್ಯಗಳಲ್ಲಿ ವಿಘ್ನ ಎದುರಾಗಲಿದ್ದು, ದೂರ ಪ್ರಯಾಣ ಮಾಡಬೇಕಾಗಬಹುದು. ಉದ್ಯೋಗ ಮತ್ತು ವೃತ್ತಿಯಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಇರಲಿವೆ.
ಸಂಪೂರ್ಣ ದಿನ ಭವಿಷ್ಯ ವಿವರ
ಧನುಸ್ಸು / ಯಶಸ್ಸು ಲಭಿಸಲಿದೆ. ಗಣ್ಯ ವ್ಯಕ್ತಿಗಳ ಒಡನಾಟ ಬೆಳೆಯಲಿದೆ. ಆರ್ಥಿಕ ವಿಚಾರ ತೃಪ್ತಿದಾಯಕವಾಗಿರಲಿವೆ. ಶುಭ ಕಾರ್ಯ. ವಸ್ತು ಲಾಭದ . ಉದ್ಯೋಗ ವ್ಯಾಪಾರದಲ್ಲಿ ಇದ್ದ ಒತ್ತಡಗಳು ನಿವಾರಣೆಯಾಗಲಿವೆ.
ಮಕರ ರಾಶಿಯವರ ಪ್ರಮುಖ ವ್ಯವಹಾರಗಳಲ್ಲಿ ಮಂದಗತಿ ಇರಲಿದೆ. ಆಸ್ತಿ ಸಂಬಂಧಿತ ವಿವಾದಗಳು ಎದುರಾಗಬಹುದು. ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳು ಮೂಡಲಿವೆ. ಆರೋಗ್ಯದಲ್ಲಿ ಕೊಂಚ ಮಟ್ಟಿನ ತೊಂದರೆ ಕಾಣಿಸಿಕೊಳ್ಳಬಹುದು. ಹಠಾತ್ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗಲಿವೆ.
ಕುಂಭ / ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸುವರು. ಸಮಾಜದಲ್ಲಿ ಗೌರವ ಮತ್ತು ಆದರ ಹೆಚ್ಚಾಗಲಿವೆ. ಆಸ್ತಿ ಲಾಭದ ಮುನ್ಸೂಚನೆಗಳಿವೆ. ವ್ಯಾಪಾರವು ವಿಸ್ತರಣೆಯಾಗಲಿದ್ದು, ಉದ್ಯೋಗದ ಸ್ಥಳದಲ್ಲಿ ಅನುಕೂಲಕರ ವಾತಾವರಣವಿರಲಿದೆ.
ಮೀನ / ಹಳೆಯ ಸ್ನೇಹಿತರ ಭೇಟಿಯಾಗಲಿದ್ದಾರೆ. ಔತಣಕೂಟದಲ್ಲಿ ಭಾಗವಹಿಸುವಿರಿ. ಕಾರ್ಯಸಿದ್ದಿಯಾಗಲಿದ್ದು, ವಾಹನ ಯೋಗವಿದೆ. ಭೂಮಿಗೆ ಸಂಬಂಧಿಸಿದ ವಿವಾದ ಬಗೆಹರಿಯಲಿವೆ. ಪುಣ್ಯಕ್ಷೇತ್ರಗಳಿಗೆ ಭೇಟಿ . ವ್ಯಾಪಾರದಲ್ಲಿನ ಅಡೆತಡೆಗಳನ್ನು ಮೀರಿ ನಿಲ್ಲುವಿರಿ ಹಾಗೂ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆಗಳಿವೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
