ಕುವೆಂಪು ವಿವಿಯಲ್ಲಿ ಪಿಜಿ, ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿ ಬಯಸುವವರಿಗೆ ಗುಡ್ ನ್ಯೂಸ್

ಹಂಚಿಕೊಳ್ಳಿ
WhatsApp Facebook X Telegram
Kuvempu University 35th Convocation May 6
Kuvempu University 35th Convocation May 6

Kuvempu University / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಲಾಗಿದ್ದು, ಅದರ ವಿವರ ಹೀಗಿದೆ.

ಸ್ನಾತಕ ಪದವಿಯ ರಿಪೀಟರ್ಸ್ ಪರೀಕ್ಷಾ ಫಲಿತಾಂಶಗಳು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷಾ ಫಲಿತಾಂಶ ಪ್ರಕಟಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುಲಪತಿಗಳ ಅನುಮೋದನೆ ಪಡೆದು ಅರ್ಜಿ ಸಲ್ಲಿಕೆಯ ವೇಳಾಪಟ್ಟಿಯನ್ನು ಮರು ನಿಗದಿಪಡಿಸಲಾಗಿದೆ.

ಅವಧಿ ವಿಸ್ತರಣೆಯ ವಿವರ

  1. ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಮೆರಿಟ್ ಪಟ್ಟಿ ಪ್ರಕಟಣೆ: ಆಗಸ್ಟ್ 10
  2. ಪ್ರವೇಶಾತಿ ಕೌನ್ಸಿಲಿಂಗ್ (ಮೆರಿಟ್ & ವಿಶೇಷ ವರ್ಗ): ಆಗಸ್ಟ್ 13
  3. ಪ್ರವೇಶಾತಿ ಕೌನ್ಸಿಲಿಂಗ್ (ಮೆರಿಟ್ ಕಮ್ ಪೇಮೆಂಟ್):ಆಗಸ್ಟ್ 14 ಆಗಿರುತ್ತದೆ

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor