SHIVAMOGGA | Dec 24, 2023 | ಮದುವೆಯಲ್ಲಿ ಯಶಸ್ಸು ಕಂಡ ಪ್ರೇಮಕಥೆಗೆ ಹೆಗಲು ಕೊಟ್ಟ ಯುವಕ ಮಂಡೆ ಒಡೆದ ಪ್ರಕರಣವೊಂದು ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಪುರಲೆ ವೃತ್ತದಲ್ಲಿ ನಡೆದ ಘಟನೆಯಿದು. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಯುವಕ ಯುವತಿ ಇಬ್ಬರು ಪ್ರೇಮಿಸಿದ್ದರು ಅವರ ಮದುವೆಗೆ ಶ್ರೀನಿವಾಸ್ ಎಂಬವರು ಬೆಂಬಲವಾಗಿ ನಿಂತಿದ್ದರು.
ಈ ವಿಚಾರದಲ್ಲಿ ಸಂತೋಷ್ ಎಂಬಾತ ಅಸಮಾಧಾನ ಹೊಂದಿದ್ದ. ಇದೇ ಕಾರಣಕ್ಕೆ ಯುವಕ ಯುವತಿ ಬದಲು ಶ್ರೀನಿವಾಸ್ ಮೇಲೆ ತನ್ನ ಸಹಚರ ಜೊತೆಗೆ ಸೇರಿಕೊಂಡು ಹಲ್ಲೆ ಮಾಡಿದ್ದಾನೆ. ಶ್ರೀನಿವಾಸ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಸದ್ಯ ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾನೆ. ಇನ್ನೂ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.