ಅಪಾಯಕಾರಿ ಮಟ್ಟದಲ್ಲಿ ತುಂಗಾನದಿ | ಸಿಟಿಯಲ್ಲಿ ನದಿ ಭಾಗದ ಜನರಿಗೆ ಎಚ್ಚರಿಕೆ |

Tunga River is overflowing and water has reached the edge of the Mantapa in Shivamogga city.

ಅಪಾಯಕಾರಿ ಮಟ್ಟದಲ್ಲಿ ತುಂಗಾನದಿ  | ಸಿಟಿಯಲ್ಲಿ ನದಿ ಭಾಗದ ಜನರಿಗೆ ಎಚ್ಚರಿಕೆ |
Mantapa in Shivamogga city,Tunga River

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ಶಿವಮೊಗ್ಗದಲ್ಲಿ ಮಳೆ ಮುಂದುವರಿದಿದ್ದು, ನಿನ್ನೆ ಗಾಜನೂರು ಜಲಾಶಯಕ್ಕೆ ಬರೋಬ್ಬರಿ ನಲವತ್ತು ಮೂರು ಸಾವಿರ ಕ್ಯೂಸೆಕ್ಸ್‌ ನೀರು ನಿರಂತರ ಒಳಹರಿವು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಷ್ಟೆ ಪ್ರಮಾಣದ ನೀರನ್ನ ನದಿಗೆ ಬಿಡಲಾಗುತ್ತಿದೆ. ಪರಿಣಾಮವಾಗಿ ತುಂಗಾ ನದಿಯು ಉಕ್ಕೇರಿ ಹರಿಯುತ್ತಿದ್ದು, ಶಿವಮೊಗ್ಗ ಸಿಟಿಯಲ್ಲಿ ಮಂಟಪದ ತುದಿಗೆ  ನೀರು ಹರಿಯುತ್ತಿದೆ. 

ಇನ್ನೂ ತುಂಗಾ ಜಲಾಶಯದಿಂದ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಇದ್ದು ಹೊಳೆ ಭಾಗದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ  ಬಿಬಿ ಸ್ಟ್ರೀಟ್, ಇಮಾಮ್ ಬಾಡಾ, ಸೀಗೆಹಟ್ಟಿ, ಕುಂಬಾರಗುಂಡಿಯಲ್ಲಿ ಆಟೋ ಮೂಲಕ ಜನರಿಗೆ ಮುನ್ನೆಚ್ಚರಿಕೆ ನೀಡಿದೆ. 

ನದಿಗೆ ಯವುದೇ ಸಮಯದಲ್ಲಿ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇರುವ ಕಾರಣಕ್ಕೆ ಜನರು ನದಿಗೆ ಇಳಿಯ ಬಾರದು , ಹೊಳೆಯ ಬದಿಯಲ್ಲಿ ಓಡಾಡಬಾರದು ಹಾಗು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. 

Heavy rainfall in Shivamogga has led to a significant increase in water inflow to the Gajanuru reservoir. As a result, the Tunga River is overflowing, and water has reached the edge of the Mantapa in Shivamogga city.