ಶಿವಮೊಗ್ಗ | ಬಿಸಿಲು ಇರುತ್ತೆ | ಮಳೆಯು ಬರುತ್ತೆ | ಹವಾಮಾನ ಇಲಾಖೆಯ ಮನ್ಸೂಚನೆಯಲ್ಲಿ ಏನಿದೆ ?

Shimoga | It will be sunny The rain will come What is in the Indian Meteorological Department's forecast? Malenadu Today Weather Report, Shimoga Weather Report, KSDMC, IMD Bangalore

ಶಿವಮೊಗ್ಗ  | ಬಿಸಿಲು ಇರುತ್ತೆ | ಮಳೆಯು ಬರುತ್ತೆ | ಹವಾಮಾನ ಇಲಾಖೆಯ ಮನ್ಸೂಚನೆಯಲ್ಲಿ ಏನಿದೆ ?
ndian Meteorological Department forecast, Malenadu Today Weather Report, Shimoga Weather Report, KSDMC, IMD Bangalore

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಮಲೆನಾಡಲ್ಲಿ ಇವತ್ತು ಕೂಡ ಮಳೆ ಮುಂದುವರಿಯಲಿದೆ ಐಎಂಡಿ ಬೆಂಗಳೂರು ನೀಡುವ ಜಿಲ್ಲಾವಾರು ವರದಿ ಪ್ರಕಾರ, ಶಿವಮೊಗ್ಗದಲ್ಲಿಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಯಲ್ಲೋ ಅಲರ್ಟ್‌ ನಮೂದಿಸಿದೆ. ಗುಡುಗು, ಸಿಡಿಲು, ಗಾಳಿ ಮಳೆಯ ಸೂಚನೆ ನೀಡಲಾಗಿದೆ. 

ಇನ್ನೊಂದೆಡೆ  ಕರ್ನಾಟಕದ ಕರಾವಳಿಯಲ್ಲಿ ದಟ್ಟವಾದ ಮೋಡಗಳು ಹರಿದಾಡುತ್ತಿದ್ದು, ಅವುಗಳು ಕೇರಳ ಮತ್ತು ತಮಿಳುನಾಡು ಕಡೆಗಳತ್ತ ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳೂರು ಉಡುಪಿ-ಕೊಡಗು-ಚಿಕ್ಕಮಗಳೂರು ಶಿವಮೊಗ್ಗ-ಚಾಮರಾಜನಗರ ಮೈಸೂರು ಜಿಲ್ಲೆಗಳಲ್ಲಿ ಇಂದು ಸಂಜೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಇತ್ತ ಐಎಂಡಿಯ ಆಪ್‌ನ ಮಾಹಿತಿ ಪ್ರಕಾರ, ಇವತ್ತು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಶಿವಮೊಗ್ಗದಲ್ಲಿ ಬಿಸಿಲು ಇರಲಿದೆ. ಗರಿಷ್ಟ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ನವರೆಗೂ ತಲುಪಲಿದೆ.  ಒಂದು ಗಂಟೆ ಸುಮಾರಿಗೆ ಮಳೆಯಾಗುವ ಮನ್ಸೂಚನೆ ಇದೆ. ಆನಂತರ ಬಿಸಿಲು ಮುಂದುವರಿಯಲಿದ್ದು, ಗರಿಷ್ಟ ತಾಪಮಾನ32.90 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ ಎಂದು ತಿಳಿಸಲಾಗಿದೆ. ಇನ್ನೂ ಸಂಜೆ ಐದು ಗಂಟೆಯ ನಂತರ ಮಳೆಯಾಗುವ ಸೂಚನೆ ನೀಡಲಾಗಿದೆ

Tags : ndian Meteorological Department forecast,  Malenadu Today Weather Report, Shimoga Weather Report, KSDMC, IMD Bangalore