ಶಿವಮೊಗ್ಗ | ಮೇ 23 ರಂದು ಸಿಟಿಯಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧ |

Shimoga | Sale of meat, slaughter of animals banned in city on May 23 | Meat Sale Ban, Shimoga Mahanagara Palike

ಶಿವಮೊಗ್ಗ | ಮೇ 23 ರಂದು ಸಿಟಿಯಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧ |
Meat Sale Ban, Shimoga Mahanagara Palike

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಇದೇ ಮೇ 23 ರಂದು ಅಂದರೆ ನಾಳೆ ಬುದ್ದ ಪೂರ್ಣಿಮೆ ಆಚರಣೆ ನಡೆಯಲಿದೆ ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಈ ಸಂಬಂಧ ನೀಡಲಾಗಿರುವ ಪ್ರಕಟಣೆಯ ವಿವರ ಹೀಗಿದೆ. 

ಮೇ 23ಕ್ಕೆ ಮಾಂಸ ಮಾರಾಟ ನಿಷೇಧ

ಶಿವಮೊಗ್ಗ: ಮೇ 23ರಂದು ಬುದ್ಧ ಪೂರ್ಣಿಮೆ ಅಂಗವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಮಾಂಸ ಮಾರಾಟಗಾರರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

TAGS : Meat Sale Ban, Shimoga Mahanagara Palike