ಎರಡು ಬೈಕ್‌ಗಳ ನಡುವೆ ಡಿಕ್ಕಿ | ಫೇಮಸ್‌ ಫೋಟೋಗ್ರಾಫರ್‌ ಸಾವು | ಹೇಗಾಯ್ತು ಘಟನೆ

Collision between two bikes | Famous photographer passes away | How did the incident happen? Shimoga District Sagar Taluk News, Sagar News, Anandapura, Basavanahole, Bike Collision ...

ಎರಡು ಬೈಕ್‌ಗಳ ನಡುವೆ ಡಿಕ್ಕಿ | ಫೇಮಸ್‌ ಫೋಟೋಗ್ರಾಫರ್‌ ಸಾವು | ಹೇಗಾಯ್ತು ಘಟನೆ
Shimoga District Sagar Taluk News, Sagar News, Anandapura, Basavanahole, Bike Collision ...

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಬಸವಹೊಳೆ ಸಮೀಪ ನಿನ್ನೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಫೋಟೋಗ್ರಾಫರ್‌ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಅವರ ಹೆಸರು ಅರುಣ್‌ ವಯಸ್ಸು 30, ಆನಂದಪುರ ನಿವಾಸಿ.

ಸಾಗರ ತಾಲ್ಲೂಕು  ಬಸವನಹೊಳೆ ಸಮೀಪ  ನಿನ್ನೆ  ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸಾಗರ ದಿಂದ ಆನಂದಪುರ ಕಡೆ ತೆರಳುತ್ತಿದ್ದ ಅರುಣ್ ರವರ ಬೈಕು ಹಾಗೂ ಆನಂದಪುರದಿಂದ ಸಾಗರದ ಕಡೆ ತೆರಳುತ್ತಿದ್ದ ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. 

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅರುಣರನ್ನ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಅವರು ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ.ಘಟನೆಯಲ್ಲಿ ಗಾಯಗೊಂಡ ಇನ್ನೊಬ್ಬ ಬೈಕ್ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಈ ಬಗ್ಗೆ ಆನಂದಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.