ಪೊಲಿಟಿಕಲ್‌ ಪ್ರೆಶರ್‌ ನಡುವೆ ಗೆದ್ದ ಪೊಲೀಸ್!‌ ಖಾಕಿ ಮೇಲೆ ಕೈ ಮಾಡಿದ್ದ ಓರ್ವ ಅರೆಸ್ಟ್‌ !

The police won amid political pressure! An arrest was made on khaki!

ಪೊಲಿಟಿಕಲ್‌ ಪ್ರೆಶರ್‌ ನಡುವೆ ಗೆದ್ದ ಪೊಲೀಸ್!‌  ಖಾಕಿ ಮೇಲೆ ಕೈ ಮಾಡಿದ್ದ ಓರ್ವ ಅರೆಸ್ಟ್‌ !
ಆನಂದಪುರ ಪೊಲೀಸ್‌ ಸ್ಟೇಷನ್‌,Anandpur Police Station,

Shivamogga Mar 31, 2024  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ಮಾರಿಕಾಂಬಾ ಜಾತ್ರೆ ವೇಳೆ ಶಾಸಕರೊಬ್ಬರ ಬೆಂಬಲಿಗರು ಹೇಳಿಕೊಂಡ ಗುಂಪು ಪೊಲೀಸ್‌ ಪೇದೆ ಮೇಲೆ ಹಲ್ಲೆ ಮಾಡಿತ್ತು. ಪೇದೆಯ ಸಮವಸ್ತ್ರ ಹರಿದದ್ದಷ್ಟೆ ಅಲ್ಲದೆ, ಅವರ ಕಪಾಳಕ್ಕೆ ಹೊಡೆದಿತ್ತು. ಈ ವಿಚಾರವಾಗಿ ಎಫ್‌ಐಆರ್‌ ಆಗದಂತೆ ಪ್ರಭಾವ ಹೇರಲು ರಾಜಕೀಯ ಮುಖಂಡರು ಮುಂದಾಗಿದ್ದರು. ಪೊಲಿಟಿಕಲ್‌ ಪ್ರೆಶರ್‌ ನಡುವೆಯು ಪೊಲೀಸ್‌ ಇಲಾಖೆ ಆರೋಪಿಯೊಬ್ಬನನ್ನ ಬಂಧಿಸಿ ಆತಿಥ್ಯ ನೀಡಿದೆ. 

ಆನಂದಪುರ ಸಮೀಪದ ಗೌತಮಪುರದಲ್ಲಿ ಕಳೆದ ಶುಕ್ರವಾರ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಮೇಲೆ ಯುವಕರು ಹಲ್ಲೆ ನಡೆಸಿದ್ದರು. ಈ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು, ಎಸ್ಕೇಪ್‌ ಆಗಿರುವ ಇನ್ನೊಬ್ಬನಿಗಾಗಿ ಹುಡುಕಾಟ ನಡೆಸ್ತಿದ್ದಾರೆ.