ಪಂಪ್ ಸೆಟ್ ಬಳಸಿ ಭದ್ರಾ ನೀರಿಗೆ ಕನ್ನ! ಅಧಿಕಾರಿಗಳ ರೇಡ್!
Use the pump set to collect Bhadra water! Officials raid!
Shivamogga Mar 31, 2024 ಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಯೋಜನೆಗೆ ನೀರು ಹರಿಸಲಾಗುತ್ತಿದೆ. ಇದರ ನಡುವೆ ಭದ್ರಾ ನಾಲೆಯಲ್ಲಿ ಅನಧಿಕೃತವಾಗಿ ಪಂಪ್ ಸೆಟ್ ಬಳಸಿ ತೋಟಗಳಿಗೆ ನೀರು ಹರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಭದ್ರಾ ನಾಲೆಯಲ್ಲಿ ಹಾಕಲಾಗಿದ್ದ ಎಲ್ಲಾ ಪಂಪ್‌ಸೆಟ್ ಗಳನ್ನು ತೆರವುಗೊಳಿಸಬೇಕು, ಒಂದು ವೇಳೆ ಒಪ್ಪದಿದ್ದರೆ ಅಂಥವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಪರಿಣಾಮ ಬೆಸ್ಕಾಂ, ಪೊಲೀಸ್ ಅಧಿಕಾರಿಗಳು ಹಾಗೂ ಭದ್ರಾ ನಾಲಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರು ಜಂಟಿ ಕಾರಾಚರಣೆ ನಡೆಸಿ ಹುಣಸಘಟ್ಟ ಬಳಿ ಭದ್ರಾ ಚಾನಲ್‌ಗೆ ಅನಧಿಕೃತವಾಗಿ ಹಾಕಿದ್ದ ಪಂಪ್‌ಸೆಟ್‌ಗಳನ್ನು ತೆರವು ಮಾಡಿಸಿದರು.
ಕೆಲವರು ಭದ್ರಾ ನೆಲೆಯಲ್ಲಿ ಪಂಪ್‌ಸೆಟ್ ಇಟ್ಟು ನೀರನ್ನು ತಮ್ಮ ಜಮೀನುಗಳಿಗೆ ನೀರನ್ನು ಅನಧಿಕೃತವಾಗಿ ಹರಿಸಿದ್ದರಿಂದ ಕೊನೆ ಭಾಗದ ಸಾಸ್ಸೇಹಳ್ಳಿ, ಬೆನಕನಹಳ್ಳಿ, ಹುಣಸೆಹಳ್ಳಿ, ಕಮ್ಮಾರಗಟ್ಟೆ ತಕ್ಕನಹಳ್ಳಿ ಮೊದಲಾದ ಗ್ರಾಮಗಳ ರೈತರಿಗೆ ಭದ್ರಾ ನಾಲೆಯಿಂದ ನೀರು ಸಿಗುತ್ತಿಲ್ಲ ಎಂಬ ರೈತರ ದೂರಿನ ಮೇರೆಗೆ ಉಪವಿಭಾಗಾಧಿಕಾರಿ ಅಭಿಷೇಕ್ ಅವರು ತುರ್ತು ಸಭೆ ನಡೆಸಿ ಎಲ್ಲಾ ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವು ಮಾಡಿಸಬೇಕೆಂದು ಆದೇಶಿಸಿದ್ದರು.
ಹುಣಸಘಟ್ಟ, ಚನ್ನಮುಂಬಾಪುರ, ಕ್ಯಾಸಿನಕೆರೆ, ಕುಳಗಟ್ಟೆ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹಾದು ಹೋಗಿರುವ ಭದ್ರಾ ಚಾನಲ್‌ನಲ್ಲಿ ಅನಧಿಕೃತವಾಗಿ ಹಾಕಿದ್ದ 200ಕ್ಕೂ ಹೆಚ್ಚುಪಂಪ್‌ಸೆಟ್‌ಗಳನ್ನು ರೈತರ ಮನವೊಲಿಸಿ ತೆರವುಗೊಳಿಸಲಾಯಿತು. ಉಪವಿಭಾಗಾಧಿಕಾರಿ ಅಭಿಷೇಕ್, ತಹಶೀಲ್ದಾರ್ ಪುರಂದರ ಹೆಗ್ಡೆ ಬೆಸ್ಕಾಂ ಎಇಇ ಜಯಪ್ಪ ನೀರಾವರಿ ಇಲಾಖೆ ఎఇఇ ರಾಜಕುಮಾರ್, ಮುದ್ದುರಾಜು, ಎಎಸ್‌ಐ ಹರೀಶ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.