ಭದ್ರಾ ಜಲಾಶಯದಿಂದ ನೀರು ರಿಲೀಸ್ ! ಜೊತೆಯಲ್ಲಿಯೇ 144 ಸೆಕ್ಷನ್ ಅಡಿಯಲ್ಲಿ ನಿಷೇದಾಜ್ಞೆ ಜಾರಿ! ಕಾರಣ

Water released from Bhadra reservoir Prohibitory orders under Section 144 have been imposed. Tungabhadra

ಭದ್ರಾ ಜಲಾಶಯದಿಂದ ನೀರು ರಿಲೀಸ್ ! ಜೊತೆಯಲ್ಲಿಯೇ 144 ಸೆಕ್ಷನ್ ಅಡಿಯಲ್ಲಿ ನಿಷೇದಾಜ್ಞೆ ಜಾರಿ! ಕಾರಣ
Tungabhadra, Bhadra reservoir, ಭದ್ರಾ ಜಲಾಶಯ, ಭದ್ರಾ ಡ್ಯಾಂ, ತುಂಗಭದ್ರಾ,

Shivamogga Feb 20, 2024  ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡಲಾಗುತ್ತಿದೆ. ಇದರ ನಡುವೆ ನದಿಪಾತ್ರದಲ್ಲಿ ನಿಷೇದಾಜ್ಞೆಯನ್ನು ಸಹ ಜಾರಿ ಮಾಡಲಾಗಿದ್ದು ಈ ಸಂಬಂಧ ಆದೇಶವನ್ನು ಜಾರಿ ಮಾಡಲಾಗಿದೆ.  ತುಂಗಭದ್ರಾ ನದಿ ಆಶ್ರಿತ ಕುಡಿಯುವ ನೀರಿನ ಯೋಜನೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ನದಿ ಮೂಲಕ ನೀರು ಹರಿಸುವ ಸಂಬಂಧ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ಮಲೆನಾಡು ಟುಡೆ ಮೈಲಾರಲಿಂಗೇಶ್ವರ ಕಾರ್ಣಿಕ | ಭದ್ರಾ ಡ್ಯಾಂ ನೀರು ರಿಲೀಸ್​ | ನದಿ ಪಾತ್ರದ ಜನರಿಗೆ ಎಚ್ಚರಿಕೆ| ಹಾವೇರಿ, ಗದಗ ವಿಜಯನಗರ ಜಿಲ್ಲೆಗೆ ನೋಟಿಸ್​ ! ಟೈಂ ಟೇಬಲ್​ ಇಲ್ಲಿದೆ ! ಹೆಸರಿನಡಿಯಲ್ಲಿ ವರದಿ ಮಾಡಿತ್ತು. ವಿವರ ಕ್ಲಿಕ್ ಮಾಡಿ ಓದಬಹುದಾಗಿದೆ. ಮುಂದುವರಿದಂತೆ, ಭದ್ರಾ ಜಲಾಶಯದಿಂದ ಹರಿಬಿಡಲಾಗುತ್ತಿರುವ ನೀರು ಹಾವೇರಿ ತಲುಪದ ಹಿನ್ನೆಲೆಯಲ್ಲಿ ಹೊಸದೊಂದು ಆದೇಶ ಹೊರಬಿದ್ದಿದೆ. ಅಲ್ಲದೆ 144 ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದೆ.  

ಉಲ್ಲೇಖ(1) ರ ಪತ್ರದನ್ವಯ ದಿ:05-02-2024 ರ ರಾತ್ರಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾವೇರಿ ಮತ್ತು ಗದಗ ಜಿಲ್ಲೆಯ ಪಟ್ಟಣಗಳಿಗೆ ಇದುವರೆಗೂ ಒಟ್ಟು 1.00 ಟಿ.ಎಂ.ಸಿ ನೀರನ್ನು ಭದ್ರಾ ಜಲಾಶಯದಿಂದ ಹರಿಸಲಾಗಿರುತ್ತದೆ. ಆದರೆ ಹಾವೇರಿ ಹಾಗೂ ಗದಗ ಜಿಲ್ಲಾಧಿಕಾರಿಗಳು, ದೂರವಾಣಿ ಕರೆ ಮಾಡಿ ಸದರಿ ಜಿಲ್ಲೆಗಳಿಗೆ ಭದ್ರಾ ಜಲಾಶಯದಿಂದ ಹರಿಸಲಾದ ನೀರು ಹಾವೇರಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಜಾಕ್‌ವೆಲ್ ಸ್ಥಳವನ್ನು ತಲುಪಿರುವುದಿಲ್ಲ ಎಂಬ ಮಾಹಿತಿಯನ್ನು ನೀಡಿರುತ್ತಾರೆ.

ಹಾವೇರಿ ತಲುಪದ ನೀರು

ನದಿಯ ಪಾತ್ರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ಅಳವಡಿಸಿ ಆಕ್ರಮವಾಗಿ ನೀರನ್ನೇತ್ತಿ ಬಳಸಿಕೊಳ್ಳುತ್ತಿರುವುದರಿಂದ ಹಾಗೂ ನದಿಯ ಪಾತ್ರದಲ್ಲಿ ಕೆಲವು ಗ್ರಾಮಗಳಲ್ಲಿ ನದಿಗೆ ಅಡಲಾಗಿ ಅನಧಿಕೃತ ಮಣ್ಣಿನ/ಮರಳಿನ ಏರಿಯನ್ನು ನಿರ್ಮಿಸಿ ನೀರನ್ನು ಎತ್ತುತ್ತಿರುವುದರಿಂದ ನಿಗದಿತ ಪ್ರದೇಶಕ್ಕೆ ಭದ್ರಾ ಜಲಾಶಯದ ನೀರು ತಲುಪಿರುವುದಿಲ್ಲ.

ಮುಂದುವರೆದು 2023-24ನೇ ಸಾಲಿಗೆ ಭದ್ರಾ ಕಾಲುವೆಯಲ್ಲಿ ಬೇಸಿಗೆ ಹಂಗಾಮಿಗೆ ನೀರನ್ನು ಹರಿಸಲಾಗುತ್ತಿದ್ದು, ಕಾಲುವೆಗಳಿಗೆ ಪಂಪ್‌ಸೆಟ್‌ಗಳನ್ನು ಅಳವಡಿಸಿ ಆಕ್ರಮವಾಗಿ ನೀರನ್ನು ಎತ್ತಿ ಬಳಸಿಕೊಳ್ಳುತ್ತಿರುವುದರಿಂದ ಅಚ್ಚುಕಟ್ಟು ಕೊನೆಯ ಭಾಗದವರಿಗೆ ನೀರನ್ನು ಹರಿಸುವುದು ಕಷ್ಟಕರವಾಗಿರುತ್ತದೆ. 

ಅಲ್ಲದೇ 2023-24ನೇ ಸಾಲಿನಲ್ಲಿ ಮಳೆಯ ಅಭಾವದಿಂದ ಕುಡಿಯುವ ನೀರನ್ನು ಪೂರೈಸಲು ಕಷ್ಟಕರವಾಗಿರುತ್ತದೆ. ಆದ ಕಾರಣ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ ಅಚ್ಚುಕಟ್ಟು ಕೊನೆಯ ಭಾಗದವರಿಗೆ ಹಾಗೂ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಭದ್ರಾ ನಾಲಾ ಮತ್ತು ನದಿಯ ಪಾತ್ರಗಳಲ್ಲಿ ಅಳವಡಿಸಿರುವ ಪಂಪ್‌ಸೆಟ್, ಡೀಸೆಲ್ ಪಂಪ್​ಸೆಟ್ ಮತ್ತು ಇತರೆ ಉಪಕರಣವನ್ನು ತೆರವುಗೊಳಿಸಲು ಹಾಗೂ ಭದ್ರಾ ನಾಲಾ ಮತ್ತು ನದಿಯ ಪಾತ್ರಗಳ ಸುತ್ತಮುತ್ತ ಪ್ರದೇಶ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಕಾಲಂ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡುವಂತೆ ಉಲ್ಲೇಖ(2) ರಂತೆ ಕೋರಿರುತ್ತಾರೆ. 

ಪ್ರಸ್ತುತ ರಾಜ್ಯ ಮತ್ತು ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು, ಕುಡಿಯುವ ನೀರಿಗೆ ತುಂಬಾ ಬೇಡಿಕೆ ಇದ್ದು ಭದ್ರಾನಾಲಾ ಕಾಲುವೆಯಿಂದ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ನೀಡಲಾಗುತ್ತಿರುತ್ತದೆ. ಭದ್ರಾನಾಲಾ ಕಾಲುವೆಗಳಲ್ಲಿ ನೀರು ಹರಿಸುತ್ತಿರುವುದರಿಂದ ಕಾಲುವೆಗಳ ಸುತ್ತಾ-ಮುತ್ತಲಿನ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಒದಗಿಸುವುದಕ್ಕಾಗಿ ಹಾಗೂ ಸದರಿ ಕಾಲುವೆಗಳ ಪ್ರದೇಶದಲ್ಲಿ ಅನಧಿಕೃತವಾಗಿ ರೈತರು ಹೊಲಗಳಿಗೆ ನೀರನ್ನು ಹರಿಸುವುದಾಗಲೀ ಅಥವಾ ಪಂಪ್ ಸೆಟ್ ಮತ್ತು ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದು ಸಂಪೂರ್ಣವಾಗಿ ನಿಷೇಧಿಸಿ ದಿನಾಂಕ: 19.02.2024 ರಿಂದ ದಿನಾಂಕ: 26.02.2024ರವರೆಗೆ ಭದ್ರಾ ನಾಲಾ ಮತ್ತು ನದಿಯ ಪಾತ್ರಗಳ ಪ್ರದೇಶದ ಸುತ್ತ-ಮುತ್ತಲು 100 ಮೀ ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ನಿಷೇದಾಜ್ಞೆ ಜಾರಿಗೊಳಿಸುವುದು ಅವಶ್ಯವಿರುವುದರಿಂದ ಈ ಕೆಳಕಂಡಂತೆ ಆದೇಶಿಸಿದೆ.

ಆದೇಶದಲ್ಲಿ ಏನಿದೆ

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ ಭಾರತೀಯಾ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗುರುದತ್ತ ಹೆಗಡೆ ಭಾ.ಆ.ಸೇ., ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ದಿನಾಂಕ: 19.02.2024 ರಿಂದ ದಿನಾಂಕ: 26.02.2024ರವರೆಗೆ ಭದ್ರಾ ನಾಲಾ ಮತ್ತು ನದಿಯ ಪಾತ್ರಗಳ ಪ್ರದೇಶದ ಸುತ್ತ-ಮುತ್ತಲು 100 ಮೀ ವ್ಯಾಪ್ತಿಯಲ್ಲಿ ಈ ಕೆಳಕಂಡ ನಿಬಂಧನೆಗಳನ್ನು ವಿಧಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿರುತ್ತೇನೆ.

ನಿಬಂಧನೆಗಳು:-

  • 1. ನದಿ ಮತ್ತು ಕಾಲುವೆಗಳ ಪ್ರದೇಶದಲ್ಲಿ ಅನಧಿಕೃತವಾಗಿ ರೈತರು ಹೊಲಗಳಿಗೆ ನೀರನ್ನು ಹರಿಸುವುದಾಗಲೀ ಅಥವಾ ಪಂಪ್ ಸೆಟ್ ಮತ್ತು ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದನ್ನು ನಿಷೇಧಿಸಿದೆ.

  • 2. ಐದು (05) ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದೆ.

  • 3. ನಿಷೇಧಾಜ್ಞೆ ಸಮಯದಲ್ಲಿ ಶಸ್ತ್ರ, ಬಡಿಗೆ,ಬರ್ಜಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಟಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದಂತಹ ಯಾವುದೇ ಮಾರಕಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ನಿಷೇಧಿಸಿದೆ