ಶಿವಮೊಗ್ಗದಲ್ಲಿ ಮಹತ್ವದ ಸಭೆ ನಡೆಸಿ ಆರು ಸೂಚನೆಗಳನ್ನು ನೀಡಿದ ಎಸ್​ಪಿ ಮಿಥುನ್ ಕುಮಾರ್

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jun 24, 2023 SHIVAMOGGA NEWS

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್ ಸಾಲು ಸಾಲು ಸಭೆಗಳನ್ನು ನಡೆಸ್ತಿದ್ಧಾರೆ. ಭದ್ರಾವತಿಯಲ್ಲಿ ಶಾಂತಿ ಸಭೆ ನಡೆಸಿದ್ದ ಎಸ್​ಪಿ , ಇದೀಗ ಶಿವಮೊಗ್ಗದಲ್ಲಿಯು ಶಾಂತಿ ಸಭೆ ನಡೆಸಿದ್ದಾರೆ.  23-06-2023  ರಂದು ಸಂಜೆ  ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಶಾಂತಿ ಸಮಿತಿ ಸಭೆಯನ್ನು ನಡೆಸಿ ಈ ಕೆಳಕಂಡ ಸೂಚನೆಗಳನ್ನು ನೀಡಿದ್ದಾರೆ. 

1) ಸಮಾಜದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿಯು ಪೊಲೀಸ್ ಇಲಾಖೆಯ ಜೊತೆಗೆ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿರುತ್ತದೆ. ಪೊಲೀಸ್ ಇಲಾಖೆಯು ಸಮಾಜದ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತದೆ ಎಂಬ ಮನೋಭಾವ ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. 

2) ಸಮಾಜದಲ್ಲಿ ಎಲ್ಲಾ ಧರ್ಮದ ಹಬ್ಬ ಮತ್ತು ಆಚರಣೆಗಳಿಗೆ ಅದರದೇ ಆದ ಪ್ರಾಮುಖ್ಯತೆ ಇದ್ದು, ಅದನ್ನು ತಿಳಿದುಕೊಂಡು ಅರ್ಥಪೂರ್ಣವಾಗಿ, ಶಾಂತಿಯುತವಾಗಿ ಮತ್ತು ಸಮನ್ವಯತೆಯಿಂದ ಹಬ್ಬವನ್ನು ಆಚರಣೆ ಮಾಡುವುದು. 

3) ಸಾಮಾಜಿಕ ಜಾಲ ತಾಣಗಳಲ್ಲಿ ಯಾವುದೇ ಆಕ್ಷೇಪಾರ್ಹ ವೀಡಿಯೋ / ಫೋಟೋಗಳನ್ನು ಅಪ್ ಲೋಡ್ ಮಾಡುವುದು, ಹರಿಬಿಡುವುದು ಶಿಕ್ಷಾರ್ಹ  ಅಪರಾಧವಾಗಿದ್ದು, ಈ ರೀತಿಯ ಕೃತ್ಯಗಳನ್ನು ಎಸಗುವವರ ವಿರುದ್ದ ಕ್ರಮ ಜರುಗಿಸಲಾಗುವುದು.

4) ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮುಖಾಂತರ ಸೌಹಾರ್ದತೆಗೆ ಭಂಗತಂದು ಸಮಸ್ಯೆಗಳನ್ನುಂಟು ಮಾಡುವಂತಹ ಯಾವುದೇ ಘಟನೆಗಳು ಕಂಡುಬಂದಲ್ಲಿ, ಕೂಡಲೇ ಹತ್ತಿರದ ಪೊಲೀಸ್ ಠಾಣೆ /  ತುರ್ತು ಸಹಾಯವಾಣಿ –ERSS – 112 ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳುವುದು.  

5) ಸಮಾಜದಲ್ಲಿ ಶಾಂತಿ ಕಾಪಾಡುವುದೇ ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯವಾಗಿದ್ದು, ಸಮಾಜದ ಸ್ವಾಸ್ಥ್ಯ ಮತ್ತು ಸೌಹಾರ್ದತೆಗೆ ಭಂಗ ತರುವಂತಹ ಯಾವುದೇ ಕೃತ್ಯವೆಸಗುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. 

6) ಹಬ್ಬದ ಆಚರಣೆ ಮತ್ತು ಪ್ರಾರ್ಥನೆಯ ಸಂದರ್ಭದಲ್ಲಿ  ಪೊಲೀಸ್ ಇಲಾಖಾ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಿದ್ದು, ಎಲ್ಲರೂ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡುವಂತೆ ಸೂಚಿಸಿದರು.


Shivamogga accident/  ಬೆಳಗಾವಿಯಿಂದ ಚಿಕ್ಕಮಗಳೂರಿಗೆ ಹೋಗ್ತಿದ್ದ ಬಸ್​ ಮತ್ತು ಬೈಕ್​ ನಡುವೆ ಡಿಕ್ಕಿ! ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಸವಾರ 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಹೊಳೆಹಟ್ಟಿಯಲ್ಲಿ ಬಸ್ ಹಾಗೂ ಬೈಕ್​ಗೆ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬಗ್ಗೆ ವರದಿಯಾಗಿದೆ. ಬೈಕ್ ಹಾಗು KSRTC ಬಸ್ಸ್ ನಡುವೆ ಅಪಘಾತವಾಗಿದ್ದು  ಘಟನೆಯಲ್ಲಿ ಹಸೂಡಿ ಗ್ರಾಮದ ಮಂಜುನಾಥ (45) ಸಾವನ್ನಪ್ಪಿದ್ಧಾರೆ.  ಬೆಳಗಾವಿಯಿಂದ ಚಿಕ್ಕಮಗಳೂರಿಗೆ ಬಸ್ ತೆರಳುತ್ತಿತ್ತು. ಇನ್ನೂ  ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ. 


ಶ್ರೀ ಭಗೀರಥ ಸಹಕಾರ ಸಂಘದ ಪ್ರಥಮ ಸರ್ವ ಸದಸ್ಯರ ಮಹಾಸಭೆಗೆ ಆಹ್ವಾನ

ಶಿವಮೊಗ್ಗದ  ಶ್ರೀ ಭಗೀರಥ ಸಹಕಾರ ಸಂಘ ನಿ. ಶಿವಮೊಗ್ಗ ತಿಲಕ್ ನಗರ ಇದರ  ಪ್ರಥಮ ಸರ್ವ ಸದಸ್ಯರ ಮಹಾಸಭೆ ಇವತ್ತು ನಡೆಯಲಿದೆ. ಈ ಸಂಬಂದ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ. ದಿನಾಂಕ: 24.06.2023ರ ಶನಿವಾರ ಪತ್ರಿಕಾ ಭವನ, ಆರ್.ಟಿ.ಒ ರಸ್ತೆ, ಶಿವಮೊಗ್ಗ ಇಲ್ಲಿ ಸಂಘದ ಮುಖ್ಯ ಪ್ರವರ್ತಕರಾದ ಎನ್.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿದೆ. ಸರ್ವಸದಸ್ಯರು ಸಕಾಲಕ್ಕೆ ಸಭೆಗೆ ಆಗಮಿಸಿ ಪ್ರಥಮ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಡಲು ಕೋರಲಾಗಿದೆ.

ಸ್ಥಳ : ಪತ್ರಿಕಾ ಭವನ ಆರ್.ಟಿ.ಓ.ಆಫೀಸ್ ರಸ್ತೆ ಶಿವಮೊಗ್ಗ

ದಿನಾಂಕ:24-6-2023 ಸಮಯ : ಬೆಳಗ್ಗೆ 11ಕ್ಕೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor