ಪತ್ನಿಯನ್ನು ಭೂತ, ಪಿಶಾಚಿ ಎಂದರೆ ಕ್ರೌರ್ಯವಲ್ಲ ಎಂದು ಪಾಟ್ನಾ ಹೈಕೋರ್ಟ್
Calling wife a ghost, devil is not cruelty: Patna HIGH Court

Shivamogga Mar 31, 2024 ಪತ್ನಿಯನ್ನು ಭೂತ, ಪಿಶಾಚಿ ಎನ್ನುವುದು ಕ್ರೌರ್ಯವಲ್ಲ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಪಾಟ್ನಾ ಹೈಕೋರ್ಟ್ ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ..
ಪರಸ್ಪರ ದೂರವಾಗಿರುವ ದಂಪತಿ ಒಬ್ಬರನ್ನೊಬ್ಬರು ಭೂತ-ಪಿಶಾಚಿ ಎಂದು ಬೈದುಕೊಂಡರೆ ಅದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಅಂತಾ ಪಾಟ್ನಾ ಹೈಕೋರ್ಟ್ ಹೇಳಿದೆ.
ಬಿಹಾರದ ನವಾಡ ಮೂಲದ ಮಹಿಳೆಯೊಬ್ಬರು ತಮ್ಮ ಪತಿ ಸಹದೇವ್, ಮಾವ ನರೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧಿಸಿದಂತೆ ಕೆಳ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಈ ತೀರ್ಪನ್ನ ಪ್ರಶ್ನಿಸಿ ಪತಿ ಹಾಗೂ ಮಾವ ಹೈಕೋರ್ಟ್ ಮೆಟ್ಟಲೇರಿದ್ದರು.
ವಿಚಾರಣೆ ವೇಳೆ ತಮ್ಮ ಕಕ್ಷಿದಾರರಿಗೆ ಆಕೆಯ ಪತಿ ಮತ್ತು ಮಾವ ಭೂತ, ಪಿಶಾಚಿ ಎಂದು ನಿಂದಿಸಿರುವುದು ಆಕ್ಷೇಪಾರ್ಹ ಮತ್ತು ದೌರ್ಜನ್ಯ ಎಂದು ಮಹಿಳೆ ಪರ ವಕೀಲರು ವಾದಿಸಿದ್ದಾರೆ. ಈ ವೇಳೆ ನ್ಯಾಯಾಲಯವು, ಅಂಥ ಪದ ಬಳಕೆಯನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.