ಪತ್ನಿಯನ್ನು ಭೂತ, ಪಿಶಾಚಿ ಎಂದರೆ ಕ್ರೌರ್ಯವಲ್ಲ ಎಂದು ಪಾಟ್ನಾ ಹೈಕೋರ್ಟ್‌

ಹಂಚಿಕೊಳ್ಳಿ
WhatsApp Facebook X Telegram
ಪತ್ನಿಯನ್ನು ಭೂತ, ಪಿಶಾಚಿ ಎಂದರೆ ಕ್ರೌರ್ಯವಲ್ಲ ಎಂದು ಪಾಟ್ನಾ ಹೈಕೋರ್ಟ್‌

ಸುದ್ದಿಯ ಸ್ಥಳ: Shivamogga district, Karnataka

Shivamogga Mar 31, 2024   ಪತ್ನಿಯನ್ನು ಭೂತ, ಪಿಶಾಚಿ ಎನ್ನುವುದು ಕ್ರೌರ್ಯವಲ್ಲ ಎಂದು ಪ್ರಕರಣವೊಂದರ ವಿಚಾರಣೆ ವೇಳೆ  ಪಾಟ್ನಾ ಹೈಕೋರ್ಟ್ ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.. 

ಪರಸ್ಪರ ದೂರವಾಗಿರುವ ದಂಪತಿ ಒಬ್ಬರನ್ನೊಬ್ಬರು ಭೂತ-ಪಿಶಾಚಿ ಎಂದು ಬೈದುಕೊಂಡರೆ ಅದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ  ಅಂತಾ ಪಾಟ್ನಾ ಹೈಕೋರ್ಟ್ ಹೇಳಿದೆ.

ಬಿಹಾರದ ನವಾಡ ಮೂಲದ ಮಹಿಳೆಯೊಬ್ಬರು ತಮ್ಮ ಪತಿ ಸಹದೇವ್, ಮಾವ ನರೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧಿಸಿದಂತೆ ಕೆಳ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಈ ತೀರ್ಪನ್ನ ಪ್ರಶ್ನಿಸಿ ಪತಿ ಹಾಗೂ ಮಾವ ಹೈಕೋರ್ಟ್ ಮೆಟ್ಟಲೇರಿದ್ದರು. 

ವಿಚಾರಣೆ ವೇಳೆ ತಮ್ಮ ಕಕ್ಷಿದಾರರಿಗೆ ಆಕೆಯ ಪತಿ ಮತ್ತು ಮಾವ ಭೂತ, ಪಿಶಾಚಿ ಎಂದು ನಿಂದಿಸಿರುವುದು ಆಕ್ಷೇಪಾರ್ಹ ಮತ್ತು ದೌರ್ಜನ್ಯ ಎಂದು ಮಹಿಳೆ ಪರ ವಕೀಲರು ವಾದಿಸಿದ್ದಾರೆ. ಈ ವೇಳೆ ನ್ಯಾಯಾಲಯವು, ಅಂಥ ಪದ ಬಳಕೆಯನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಮಲೆನಾಡು ಟುಡೆ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor