Shivamogga crime news today ಹರಿಗೆ ಮತ್ತು ತೀರ್ಥಹಳ್ಳಿಯಲ್ಲಿ ಅನುಮಾಸ್ಪದ ಯುವಕರು ಅರೆಸ್ಟ್! ಸಾಗರದಲ್ಲಿ ಅಂಗಿ ಜೇಬಿನಲ್ಲಿ ಬೀಗದ ಕೀ ಇಟ್ಟು ಕೆಲಸಕ್ಕೆ ಹೋದವರಿಗೆ ಕಾದಿತ್ತು ಶಾಕ್! ವಿನೋಬನಗರದಲ್ಲಿ ಎನಾಯ್ತು ಗೊತ್ತಾ

Suspected youths arrested in Harige and Thirthahalli Burglary at a house in Sagar taluka Do you know what happened in Vinobanagar?Shivamogga crime news today, Recent crime in Shivamogga,Crime in Shivamogga

Shivamogga crime news today ಹರಿಗೆ ಮತ್ತು ತೀರ್ಥಹಳ್ಳಿಯಲ್ಲಿ ಅನುಮಾಸ್ಪದ ಯುವಕರು ಅರೆಸ್ಟ್! ಸಾಗರದಲ್ಲಿ ಅಂಗಿ ಜೇಬಿನಲ್ಲಿ ಬೀಗದ ಕೀ ಇಟ್ಟು ಕೆಲಸಕ್ಕೆ ಹೋದವರಿಗೆ ಕಾದಿತ್ತು ಶಾಕ್! ವಿನೋಬನಗರದಲ್ಲಿ ಎನಾಯ್ತು ಗೊತ್ತಾ
Shivamogga crime news today, Recent crime in Shivamogga,Crime in Shivamogga

Shivamogga Mar 9, 2024   ಶಿವಮೊಗ್ಗದಲ್ಲಿ ನಡೆದ ವಿವಿದ ಕ್ರೈಂ ಪ್ರಕರಣಗಳ ಬಗ್ಗೆ ನೋಡುವುದಾದರೆ  ಶಿವಮೊಗ್ಗ ಸಿಇಎನ್ ಪೊಲೀಸರು ನಿನ್ನೆ  ಹರಿಗೆ ಬಸ್​ ನಿಲ್ದಾಣದ ಬಳಿ ಓರ್ವವನನ್ನ ಅನುಮಾನಸ್ಪದವಾಗಿ ಗಮನಿಸಿ ಅರೆಸ್ಟ್ ಮಾಡಿದ್ದಾರೆ ಅದರ ವಿವರ ಇಲ್ಲಿದೆ 

1) Shivamogga CEN Crime PS  Cr NO:0029/2024 NARCOTIC DRUGS AND PSYCHOTROPIC SUBSTANCES ACT, 1985 (U/s-27(b))

ಹರಿಗೆ ಬಸ್ ಸ್ಟಾಪ್ ಹತ್ತಿರ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿರುವುದು ಕಂಡು ಬಂದಿದ್ದರಿಂದ ಆತನನ್ನ ಹಿಡಿದು ಪೊಲೀಸರು ವಿಚಾರಿಸಿದ್ದಾರೆ. ಈ ವೇಳೆ ಆತ ಭದ್ರಾವತಿ ತಾಲ್ಲೂಕುನವನು ಎಂಬುದು ಗೊತ್ತಾಗಿದೆ. ಅಲ್ಲದೆ ಗಾಂಜಾ ಸೇವನೆ ಮಾಡಿರುತ್ತೇನೆಂದು ಹೇಳಿದ್ದು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಕರ್ತವ್ಯ ನಿರತ ವೈಧ್ಯಾಧಿಕಾರಿಗಳು ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿರುವುದಾಗಿ ನೀಡಿದ ಪಾಸಿಟಿವ್ ವರದಿಯೊಂದಿಗೆ ಸ್ವ ದೂರನ್ನು ತಯಾರಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. 

 

2) Sagar Rural PS Cr NO:0041/2024  U/s-454,380 IPC

ಸಾಗರ ತಾಲ್ಲೂಕು ನಲ್ಲಿ ಬೆಳಗ್ಗೆ ಕೆಲಸಕ್ಕೆ ಹೋಗಿ ವಾಪಸ್ ಬರುವಷ್ಟರಲ್ಲಿ ಮನೆಯಲ್ಲಿ ಕಳ್ಳತನ ನಡೆದ ಘಟನೆ ನಡೆದಿದೆ. ಮನೆಗೆ ಬೀಗವನ್ನು ಹಾಕಿ ಬೀಗವನ್ನು ಮನೆಯ ಪಕ್ಕದ ಅಂಗಿ ಜೇಬಿನಲ್ಲಿ ಇಟ್ಟು ಕೆಲಸಕ್ಕೆ ಹೋಗಿದ್ದರು.  ಮಧ್ಯಾಹ್ನ 01-30 ಗಂಟೆಗೆ ವಾಪಸ್​ ಆದಾಗ ಬೆಡ್ ರೂಂನಲ್ಲಿನ ಗಾಡ್ರೇಜ್ ಲಾಕ್ ಓಪನ್​ ಆಗಿದ್ದು ಕಂಡು ಬಂದಿದೆ. ಅದರಲ್ಲಿದ್ದ  87000/- ರೂ ಗಳ ಬಂಗಾರದ ಒಡವೆಗಳನ್ನು ಹಾಗೂ 4000/- ರೂಗಳ ಬೆಳ್ಳಿ ಒಡವೆಗಳನ್ನು ಕಳುವುವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.  

 

3) Vinobanagara PS Cr NO:0032/2024   KARNATAKA POLICE ACT, 1963 (U/s-78(3))

ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ಬೊಮ್ಮನಕಟ್ಟೆಯಲ್ಲಿ  ಬೀಡಾಸ್ಟಾಲ್ ಒಂದರಲ್ಲಿ ಓಸಿ ಬರೆಯುತ್ತಿರುವುದನ್ನ ಗಮನಿಸಿದ ಪೊಲೀಶರು ದಾಳಿ ನಡೆಸ ಪ್ರಕರಣ ದಾಖಲಿಸಿದ್ದಾರೆ

 

4) Thirthahalli PS Cr NO:0054/2024 NARCOTIC DRUGS & PSYCHOTROPIC SUBSTANCES ACT, 1985 (U/s-27(B))

ತೀರ್ಥಹಳ್ಳಿ ಕುರುವಳ್ಳಿಯ ಪುತ್ತಿಗೆ ಮಠ ರಸ್ತೆಯಲ್ಲಿ ಯುವಕನೊಬ್ಬ  ಜೋರಾಗಿ ಕೂಗಾಡುತ್ತಾ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿರುವ ಬಗ್ಗೆ ಪೊಲೀಸರಿಗೆ ದೂರು ಬಂದಿದೆ. ಆತನನ್ನ ವಿಚಾರಿಸಿದಾಗ  ಬುಕ್ಲಾಪುರದವನು ಎಂದು ತಿಳಿದುಬಂದಿದ್ದು,  ಆತನನ್ನ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯ  ಲ್ಲಿ  ಪರೀಕ್ಷೆಗೆ ಒಳಪಡಿಸಿದ್ದಾರೆ. ವರದಿ ಪಾಸಿಟಿವ್ ಹಿನ್ನಲೆ ಕೇಸ್ ದಾಖಲಿಸಲಾಗಿದೆ.