ಒತ್ತಿದರೆ ಅಕೌಂಟ್‌ ಖಾಲಿ | OTP ಇಲ್ಲದೇನೆ ದುಡ್ಡು ಮಾಯ | ಬ್ಯಾಂಕ್‌ ಹೆಸರಲ್ಲೇ ದೋಖಾ | ಮಲೆನಾಡು ಜೋಕೆ |

Shimoga: The police department has warned people not to click on fake bank app APK in Malnad.

ಒತ್ತಿದರೆ ಅಕೌಂಟ್‌ ಖಾಲಿ | OTP ಇಲ್ಲದೇನೆ ದುಡ್ಡು ಮಾಯ | ಬ್ಯಾಂಕ್‌ ಹೆಸರಲ್ಲೇ ದೋಖಾ | ಮಲೆನಾಡು ಜೋಕೆ  |
CSP , Customer Service Point, Fake Apk Mobile Application

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ನಿಮ್ಮ ಅಕೌಂಟ್‌ನಲ್ಲಿರುವ ಹಣದ ವರ್ಗಾವಣೆ, ನಿಮಗೆ ಗೊತ್ತಿಲ್ಲದೆ, ನಿಮ್ಮ ಮೊಬೈಲ್‌ಗೆ  ಓಟಿಪಿ ನಂಬರ್ ಕೂಡ ಬರದೆ ನಿಮ್ಮ ಅಕೌಂಟ್‌ನಿಂದ ಖಾಲಿಯಾದರೆ ಹೇಗಿರುತ್ತೆ.. ಸದ್ಯ ಅಂತಹದ್ದೊಂದು ಕೃತ್ಯಗಳು ಶಿವಮೊಗ್ಗದಲ್ಲಿಯೇ ನಡೆಯುತ್ತಿವೆ ಎಂಬ ಗುಮಾನಿ ವ್ಯಕ್ತವಾಗಿದೆ. ಅಂದಹಾಗೆ ಮೊಬೈಲ್‌ನಲ್ಲಿ ಹಣವನ್ನು ಟ್ರಾಂಜೆಕ್ಷನ್‌ ಮಾಡುತ್ತೀರಾ? ಹಾಗಾದರೆ ಈ ಸುದ್ದಿ ನಿಮಗಾಗಿಯೇ? ಆನ್‌ಲೈನ್‌ನಲ್ಲಿ ಇದೀಗ ಹೊಸದೊಂದು ಮೋಸದ ಜಾಲ ಹುಟ್ಟಿಕೊಂಡಿದೆ.

ನಿಮ್ಮ ಬ್ಯಾಂಕ್‌ ಅಕೌಂಟ್‌ನ ಲೋಗೋವನ್ನು ಬಳಸಿಕೊಂಡು ನಿಮಗೊಂದು ಲಿಂಕ್‌ ಕಳುಹಿಸುತ್ತಾರೆ. ವಾಟ್ಸಾಪ್‌ ಅಥವಾ ಮೆಸೆಜ್‌ ರೂಪದಲ್ಲಿ ಬರುವ ಈ ಲಿಂಕ್‌ನ್ನ ಕ್ಲಿಕ್‌ ಮಾಡಿ ನಿಮ್ಮ ಆನ್‌ಲೈನ್‌ ಅಕೌಂಟ್‌ APP  ಅಪ್‌ಡೇಟ್‌ ಆಗುತ್ತದೆ ಅಂಥಾನೋ? ಅಥವಾ ನಿಮ್ಮ ವೈಯಕ್ತಿಕ ವಿವರ ಡಿಟೇಲ್ಸ್‌ ಬೇಕಿದೆ ಅಂತಾನೋ? ನಿಮ್ಮ ಅಕೌಂಟ್‌ ಬ್ಲಾಕ್‌ ಆಗುತ್ತೆ ಅಂತಾನೋ ಹೇಳುವ ಮೆಸೇಜ್‌ ವೊಂದು ಲಿಂಕ್‌ನಲ್ಲಿ ಇರುತ್ತದೆ. ಅದನ್ನ ನೋಡಿ ನಂಬಿ ಕ್ಲಿಕ್‌ ಮಾಡಿದರೇ ನಿಮಗೆ ಬರುವ ಬ್ಯಾಂಕ್‌ ಓಟಿಪಿಯು ಬರದೆ ನಿಮ್ಮ ಅಕೌಂಟ್‌ನ ಹಣ ಪೂರ್ತಿ ಖಾಲಿಯಾಗುತ್ತದೆ. 

ಇತ್ತೀಚೆಗೆ ಇಂತಹದ್ದೊಂದು ದೊಡ್ಡ ಜಾಲ ಆನ್‌;ಲೈನ್‌ನಲ್ಲಿ ಸಕ್ರಿಯವಾಗಿದೆ.ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್‌ ಪ್ರಕಟಣೆಯೊಂದನ್ನ ಬಿಡುಗಡೆ ಮಾಡಿದೆ. ಅದರ ವಿವರ ಹೀಗಿದೆ. 

ಯಾವುದೇ ಬ್ಯಾಂಕಿಂಗ್ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡುವ ಮುನ್ನ ಎಚ್ಚರವಿರಲಿ.

ಕಳೆದ ಕೆಲವು ದಿನಗಳಿಂದ ಸೈಬರ್ ವಂಚಕರು ಕನರಾ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ ಗಳ ನೈಜವಾಗಿ ಕಾಣುವಂತಹ ಚಿಹ್ನೆ (Logo) ಗಳನ್ನು ಬಳಸಿಕೊಂಡು ವಾಟ್ಸ್ ಅಪ್, ಟಿಲಿಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ CSP (Customer Service Point)  ಎಂಬ  Fake Apk (Mobile Application) 5. Install KYC, PAN & SIM Card Number Update ತಿಳಿಸುತ್ತಿದ್ದು, ಒಂದು ವೇಳೆ ಯಾರಾದರೂ ಈ ರೀತಿಯ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿ Install ಮಾಡಿದ ನಂತರ, ಸೈಬರ್ ವಂಚಕರು ಸದರಿ ವ್ಯಕ್ತಿಯ ಬ್ಯಾಂಕಿನ ಮಾಹಿತಿಯನ್ನು ಪಡೆದುಕೊಂಡು ಹಣವನ್ನು ನೇರವಾಗಿ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿರುತ್ತಾರೆ,

ಒಂದು ವೇಳೆ ಸಾರ್ವಜನಿಕರು ಈ ರಿತಿಯ ಅಪಿಕೇಷನ್ ಗಳನ್ನು ಡೌನ್ ಲೋಡ್ ಮಾಡಿ Install ಮಾಡಿಕೊಂಡಿದ್ದ_ಲಿ.. ಮೊದಲು ನಿಮ್ಮ ಮೊಬೈಲ್ ನ ಇಂಟರ್ ನೆಟ್ ಆಫ್ ಮಾಡಿ, ನಂತರ Settings ನಲಿ.. app management / APPS ಮತ್ತು ಡೌನ್ಡ್ ಅನ್ನು ಪರಿಶೀಲಿಸಿ ಒಂದುವೇಳೆ ಯಾವುದೇ unknown file ಇದ್ದರೆ ಅದನ್ನು ಡಿಲಿಟ್ ಮಾಡಿರಿ ಮತ್ತು *#67# ನಂಬರನ್ನು ಡಯಲ್ ಮಾಡಿ ಇದರಲ್ಲಿ ನಿಮ್ಮ ಮೊಬೈಲ್ ನಂಬರ್ ಬೇರೆ ಯಾವ ಯಾವ ಸರ್ವಿಸ್ ಗಳಿಗೆ ಫಾರ್ವಡೆಡ್ ಇದೆ ಅಂತ ತಿಳಿಯಲಿದೆ. ಇದರಲಿ.. ಫಾರ್ವಡೆಡ್ ಆಗಿದ್ದರೆ ನಿಮ್ಮ OTP ಗಳು ಸೈಬರ್ ವಂಚಕರ ಹತ್ತಿರ ಹೋಗುತ್ತವೆ. ಆದ್ದರಿಂದ ಫಾರ್ವಡೆಡ್ ಇದ್ದವರು ಕೂಡಲೇ #002# ನಂಬರ್ ಅನ್ನು ಡಯಲ್ ಮಾಡಿದ್ದಲಿ.. ಎಲ್ಲಾ ಸರ್ವಿಸ್ ಗಳು ಡಿಸೇಬಲ್ ಆಗುತ್ತವೆ.

ಯಾವುದೇ ಬ್ಯಾಂಕ್ ನವರು ಫೋನ್ / ಅಪ್ಲಿಕೇಶನ್ ಗಳ ಮುಖಾಂತರ ತಮ್ಮ ವೈಯಕ್ತಿಕ ಮಾಹಿತಿ ಮತ್ತು ಅಕೌಂಟ್ ವಿವರಗಳನ್ನು ಕೇಳುವುದಿಲ್ಲ, ಆದ್ದರಿಂದ ಸಾರ್ವಜನಿಕರು ಯಾವುದೇ ಅನಾಮಧೇಯ ಅಪಿ..ಕೇಶನ್ ಗಳನ್ನು ಡೌನ್ ಲೋಡ್ ಮಾಡುವ ಮುನ್ನ ಅದರ ಸತ್ಯತೆಯ ಬಗ್ಗೆ ಪರಿಶೀಲಿಸಿದ ನಂತರವೇ ಬಳಸುವುದು ಎಂದು ಪ್ರಕಟಣೆಯಲ್ಲಿ ತಿಳಸಿಲಾಗಿದೆ. 

ಮಲೆನಾಡಿನ ಮಂದಿ ದುಡ್ಡು ಕಳೇದುಕೊ‍ಳ್ಳುವುದುಕ್ಕೂ ಈ ನ್ಯೂಸನ್ನ ಪ್ರತಿಯೊಬ್ಬರಿಗೂ ಫಾರವರ್ಡ್‌.. ಯಾವ ಕಾರಣಕ್ಕೆ ಕೆಲಸಕ್ಕೆ ಬಾರದ ಲಿಂಕ್‌ನ್ನ  ಕ್ಲಿಕ್‌ ಮಾಡಬೇಡಿ. ಅಗತ್ಯವಿದ್ದರೇ ನಿಮ್ಮ ಅಕೌಂಟ್‌ ಇರುವ ಬ್ಯಾಂಕ್‌ ಸಿಬ್ಬಂದಿಯ ಫೋನ್‌ ನಂಬರ್‌ ತೆಗೆದುಕೊಂಡಿರಿ, ಅವರನ್ನೇ ಸಂಪರ್ಕಿಸಿ ಬ್ಯಾಂಕ್‌ನ ಬಗ್ಗ ಅಪ್‌ಡೇಟ್‌ ಪಡೆಯಿರಿ, ಅಕೌಂಟ್‌ ನಂಬರ್‌ ವೈಯಕ್ತಿಕ ವಿವರಗಳನ್ನ ಯಾರಿಗೂ ಕೊಡಬೇಡಿ, ಖಾತರಿ ಇಲ್ಲದೆ ಬ್ಯಾಂಕ್‌ ಸಿಬ್ಬಂದಿಗೂ ಕೊಡದಿರಿ,  ಫಿಸಿಕಲ್‌ ವಹಿವಾಟಿನ ಬಗ್ಗೆ ಜಾಸ್ತಿ ಗಮನಕೊಡಿ ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ