ಚಿಕ್ಕಮಗಳೂರು ಆನೆ ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದಾಗ ನಡೀತು ಮನಕಲಕುವ ಈ ಘಟನೆ!

One such incident took place when an elephant captured in Chikkamagaluru district was brought to Sakrebail elephant camp

ಚಿಕ್ಕಮಗಳೂರು ಆನೆ ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದಾಗ ನಡೀತು ಮನಕಲಕುವ ಈ ಘಟನೆ!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

Shivamogga | Malnenadutoday.com |  ಆತ ಅಮಾನತ್ತುಗೊಂಡರೂ, ಆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಅಹೋರಾತ್ರಿ ಕೆಲಸ ಮಾಡಿದ…. ತನ್ನದಲ್ಲದ ತಪ್ಪಿಗೆ ಸಸ್ಪೆಂಡ್ ಆಗಿರುವ ಆತ,, ನಾನವನಲ್ಲ ನಾನಂತವನಲ್ಲ ಎಂದು ಹೇಳುವಾಗ ಆತನ ಕಣ್ಣಾಲಿಗಳು ಒದ್ದೆಯಾಗಿದ್ದವು.. 

ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರ (Shimoga Sakrebail Elephant Camp ) ನಡೆದ ಬಾನುಮತಿ ಆನೆ ಬಾಲ ಕಟ್​ ಮಾಡಿದ ಪ್ರಕರಣದಲ್ಲಿ ಮಲೆನಾಡು ಟುಡೆ ಎಕ್ಸ್​ಕ್ಲ್ಯೂಸಿವ್ ವರದಿ ಮಾಡಿದ್ದು ನಿಮಗೆ ಗೊತ್ತೆ ಇದೆ. ಈ ವಿಚಾರ ರಾಜ್ಯಮಟ್ಟದ ಸುದ್ದಿಯಾಗಿ, ಅಂತಿಮವಾಗಿ ಪ್ರಕರಣದಲ್ಲಿ ಅರಣ್ಯ ಇಲಾಖೆ ದಿಟ್ಟ ಕ್ರಮ ಎಂಬಂತೆ ಇಬ್ಬರನ್ನು ಸಸ್ಪೆಂಡ್ ಮಾಡಿತ್ತು. ಅದರ ವರದಿ ಇಲ್ಲಿದೆ BREAKING | ಬಾನುಮತಿ ಬಾಲ ಕಟ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್! ಏನದು!? ಓದಿ

ಆಗಿದ್ದೆ ಬೇರೆ? ಏನದು?

ಸರ್ಕಾರಿ ಹುದ್ದೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಹಂದಿಗೆ ಸಸ್ಪೆಂಡ್​  ಎಂಬುದು ಅವರ ನೆರಳಾಗಿಯೇ ಹಿಂಬಾಲಿಸುತ್ತದೆ. ಅಲ್ಲಿ ಪ್ರಾಮಾಣಿಕತೆ ಬದ್ಧತೆಗಿಂತಲೂ ಬಕೆಟ್​ ಹಿಡಿಯುವ ಅಧಿಕಾರಿ ಸಿಬ್ಬಂದಿಯೇ ಅತ್ಯಂತ ಸೇಫ್​ ಎಂಬುದಕ್ಕೆ ಇತ್ತೀಚಿನ ಹಲವು ಘಟನೆಗಳು ಸಾಕ್ಷಿಯಾಗಿದೆ. 

ವ್ಯವಸ್ಥೆಯ ಈ ಲೋಪದೋಷದ ನಡುವೆ ಇಲ್ಲಿಬ್ಬರು ಸಿಬ್ಬಂದಿಗಳು ತಮ್ಮದಲ್ಲದ ತಾವು ಮಾಡದ ತಪ್ಪಿಗೆ ಅಮಾನತ್ತಾಗಿದ್ದಾರೆ. ಸಕ್ರೆಬೈಲು ಆನೆ ಬಿಡಾರದ ಬಾನುಮತಿ ಆನೆ ಮಾವುತ ಮೊಹಮ್ಮದ್​ ಕಾವಾಡಿ ಸುದೀಪ್ ಅಮಾನತ್ತಾದ ಸಿಬ್ಬಂದಿ



READ : ಸಕ್ರೆಬೈಲ್ ಆನೆ ಬಿಡಾರ | ಹೆಣ್ಣು ಮರಿಗೆ ಜನ್ಮ ನೀಡಿದ ಬಾನುಮತಿ ಆನೆ | ಸುದ್ದಿ ಬಹಿರಂಗ ಪಡಿಸಲಿಲ್ಲವೇ ಅಧಿಕಾರಿಗಳು?

ಇಲ್ಲೊಂದು ಸಮಸ್ಯೆ ಇದೆ

ಹರಿತ ಆಯುಧದಿಂದ ಯಾರೋ ಕಿಡಿಗೇಡಿಗಳು ಬಾನುಮತಿ ಆನೆಯ ಬಾಲವನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಈ ಘಟನೆ ಸಕ್ರೆಬೈಲು ಕಾಡಿನ ಪರಿಸರದಲ್ಲಿ ನಡೆದಿತ್ತು. ಸುದ್ದಿ ಸ್ವಾರಸ್ಯದಲ್ಲಿ ಎಲ್ಲಿಂದಲೋ  ಫೋಟೋಗಳು ಮಾದ್ಯಮಗಳಿಗೆ ಸಿಕ್ಕಿ ದೊಡ್ಡ ಸುದ್ದಿಯಾಗಿತ್ತು. 

ಅಧಿಕಾರಿಗಳು ವಿಚಲಿತ

ಅಂದು ಮಾದ್ಯಮಗಳಿಗೆ ವಿಷಯ ಸೋರಿಕೆಯಾಗಿದ್ದರಿಂದ ವಿಚಲಿತರಾದ ಹಿರಿಯ ಅರಣ್ಯಾಧಿಕಾರಿಗಳು ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡ ಸನ್ನಿವೇಶ ಕೂಡ ನಡೆದು ಹೋಯ್ತು. ಸಕ್ರೆಬೈಲು ಕ್ರಾಲ್ ಆವರಣಕ್ಕೆ ಮಾದ್ಯಮದವರ ಪ್ರವೇಶಕ್ಕೂ ಕೂಡ ತಡೆಯೊಡ್ಡುವ ಬಗ್ಗೆ ಕೂಡ ಬಿಸಿ ಬಿಸಿ ಚರ್ಚೆಗಳು ನಡೆದವು.

ಚಿಕ್ಕಮಗಳೂರು ಆನೆ

ಹೀಗಿರುವಾಗಲೇ ಚಿಕ್ಕಮಗಳೂರಿನ ಕುಂದೂರು ಬಳಿ ಸೆರೆ ಸಿಕ್ಕ ಕಾಡಾನೆಯನ್ನು ಸಕ್ರೆಬೈಲು ಕ್ರಾಲ್ ಬಳಿ ತಂದಾಗ ರಾತ್ರಿಯಾಗಿತ್ತು. ಆ ಕತ್ತಲಲ್ಲಿಯು ನೂರಾರು ಮಂದಿ ಆ ಸ್ಥಳದಲ್ಲಿ ಜಮಾಯಿಸಿದ್ರು. ಮೊಬೈಲ್ ನಲ್ಲಿ ಚಿತ್ರಿಕರಣವನ್ನು ಕೂಡ ಮಾಡಿದ್ರು. ಅಲ್ಲಿನ ಸನ್ನಿವೇಶ ಸಾರ್ವಜನಿಕರಿಗೆ ಇರುವ ಈ ಪ್ರವೇಶ ಮಾದ್ಯಮಗಳಿಗೆ ಏಕಿಲ್ಲ ಎಂಬ ಪ್ರಶ್ನೆ  ಮೂಡುವಂತೆ ಮಾಡಿತ್ತು. 



READ : ಬಾನುಮತಿ ಆನೆ ಬಾಲ ಕಟ್ ಮಾಡಿದ್ದು ಯಾರು? ಸತ್ಯ ಹೊರಬಿತ್ತು! ಏನಿದು ರಿಪೋರ್ಟ್!

ಎಲ್ಲದರ ನಡುವೆ

ವಿಶೇಷ ಅಂದರೆ, ಆ ರಾತ್ರಿ ಕಾಡಾನೆಯನ್ನು ಲಾರಿಯಿಂದ ಕ್ರಾಲ್ ಗೆ ಹಾಕುವ ಸಂದರ್ಭದಲ್ಲಿ ಕತ್ತಲಲ್ಲಿ ಒಬ್ಬ ಮಾವುತ ಮೈ ಮರೆತು ಕೆಲಸ ಮಾಡುತ್ತಿದ್ದ. ತಾನು ಕಲಿತಿದ್ದದನ್ನ ಕೆಲಸಕ್ಕೆ ಬಳಸಿಕೊಂಡು ಸಕ್ರೆಬೈಲ್ ಬಿಡಾರಕ್ಕೆ ಬಂದಿಳಿದ ಹೊಸ ಅತಿಥಿಯನ್ನು  ಅದಕ್ಕೆಂದ ಸಿದ್ದವಾಗಿರಿಸಿದ್ದ ಕ್ರಾಲ್​ನೊಳಗೆ ಕಳಿಸಲು ನೆರವಾಗಿದ್ದ. 

ಆತ ಇನ್ಯಾರು ಅಲ್ಲ.. ಮೊಹಮ್ಮದ್..ಬಾನುಮತಿಯ ಮಾವುತ. ಆತ ಅಮಾನತ್ತುಗೊಂಡರೂ ಕಾಡಾನೆ ಕಾರ್ಯಾಚರಣೆಯಲ್ಲಿ ಆತನ ಕೆಲಸ ಅನಿವಾರ್ಯವಾಗಿತ್ತು. ನಾನು ಸಸ್ಪೆಂಡ್ ಆಗಿದ್ದೇನೆ ಬರುವುದಿಲ್ಲ ಎಂದು ಹೇಳಬಹುದಿತ್ತು ಆದರೆ ಕಲಿತಿರುವ ವಿದ್ಯೆಯನ್ನು ಅಹಂಕಾರದ ಕಾಲಿನಿಂದ ಒದೆಯಬಾರದೆಂಬ ಭಾವದಿಂದ ಆತ ಕಾರ್ಯಚರಣೆಯಲ್ಲಿ ಕಿರಿಯ ಸಿಬ್ಬಂದಿಗಳಿಗೆ ನೆರವಾಗಿ ನಿಂತಿದ್ದ. ಅಲ್ಲದೆ ನಾನವನಲ್ಲ..ನಾನಂತವನಲ್ಲ ಎಂದು ಆತ ತನ್ನ ತಂಬಿದ ಕಣ್ಣಗಳಲ್ಲಿಯೇ ಹೇಳುತ್ತಿದ್ದ. ಆನೆಯನ್ನು ಪ್ರೀತಿಸುವ ವ್ಯಕ್ತಿ ಆನೆಯ ಬಾಲ ಕಟ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಅಲ್ಲಿದ್ದವರಲ್ಲಿ ಮೂಡಿತ್ತು.