ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​

Shimoga SP surprised the entire state by entering the field himself. Hatsapp Lakshmiprasad

ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​  ಲಕ್ಷ್ಮೀಪ್ರಸಾದ್​
Shimoga SP surprised the entire state by entering the field himself. Hatsapp Lakshmiprasad

 Shimoga SP surprised / ಗುಪ್ತಚರ ಇಲಾಖೆಗೆ ಇರಲಿಲ್ಲ ಮಾಹಿತಿ, ಸಿಬ್ಬಂದಿಗೇ ಎನಂತನೇ ಗೊತ್ತಾಗ್ತಿರಲಿಲ್ಲ! ಅಷ್ಟರಲ್ಲೆ ಮುಗಿದಿದ್ದು ಆಪರೇಷನ್​! ಖುದ್ದು ಫಿಲ್ಡ್​ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್​ಪಿ ! ಹ್ಯಾಟ್ಸಾಪ್​ ಲಕ್ಷ್ಮೀಪ್ರಸಾದ್​ ಎನ್ನಲೇಬೇಕು!

ಶಿವಮೊಗ್ಗ ದೊಡ್ಡಪೇಟೆ ವ್ಯಾಪ್ತಿಯಲ್ಲಿ ಸಂಭವಿಸಬೇಕಿದ್ದ ಮರ್ಡರ್​ ವೊಂದನ್ನ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ತಪ್ಪಿಸಿದ್ದಾರೆ. ಈ ವಿಚಾರದಲ್ಲಿ ಅವರೇ ಒನ್​ ಆಂಡ್ ಓನ್ಲಿ ಹೀರೋ..

ಈ ಮಾತನ್ನ ಸುಮ್ಮನೇ ಹೇಳುತ್ತಿಲ್ಲ ಇದಕ್ಕೆ ಕಾರಣವಿದೆ. ಶಿವಮೊಗ್ಗ ಎಸ್​​ಪಿ ಲಕ್ಷ್ಮೀಪ್ರಸಾದ್​ಗೆ ಹೆಚ್ಚು ಒತ್ತಡವನ್ನು ಎದುರಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಇತ್ತೀಚೆಗೆ ಸಂಭವಿಸಿದ ಘಟನೆಗಳು, ಅವರಿಗೆ ಬೇಜಾನ್​ ಕೆಲಸ ಕೊಟ್ಟಿದ್ದವು. ಇದರ ನಡುವೆ ಅವರು ಇಡೀ ರಾಜ್ಯದ ಪೊಲೀಸ್​ ಇಲಾಖೆಯೇ ತಲ್ಲಣಗೊಳ್ಳುವಂತೆ ಮಾಡಿದ್ದಾರೆ. ರಾಜ್ಯ ರಾಜಕಾರಣ ವಲಯ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಅಷ್ಟೆಯೇಕೆ ಡಿಪಾರ್ಟ್​​ಮೆಂಟ್​ನ ವಲಯದಲ್ಲಿಯೇ ಮೈಕ್​ ಒನ್ ಇಷ್ಟೆಲ್ಲಾ ಮಾಡ್ತಾರೆ ಎಂದು ಹುಬ್ಬೇರಿಸುತ್ತಿದ್ದಾರೆ.

ಅಂದಹಾಗೆ ಎಸ್​ಪಿ ಎಂದರೆ, ಅವರ ಆಫೀಸ್​ನಲ್ಲಿ ಕುಳಿತು ತಮ್ಮ ಅಧೀನ ಅಧಿಕಾರಿಗಳಿಗೆ ಆದೇಶ ಕೊಡುತ್ತಾರೆ ಎಂದೇ ಎಲ್ಲರೂ ತಿಳಿಯುತ್ತಾರೆ. ಆದರೆ ಲಕ್ಷ್ಮೀಪ್ರಸಾದ್​ ಬೆಳಗ್ಗೆ 10 ಗಂಟೆಗೆ ಎಸ್​ಪಿ ಕಚೇರಿಗೆ ಬಂದರೆ ಸಂಜೆ ಏಳು ಗಂಟೆಯಾದರು ಕಚೇರಿಯಿಂದ ಹೊರಕ್ಕೆ ಹೋಗಲಾರರು. ಊಟದ ವಿರಾಮವನ್ನು ಪಡೆಯದ ಅವರ ಗಮನ ಈ ಮೊದಲು ಗಾಂಜಾ ಭೇಟೆಯ ಮೇಲಿತ್ತು. ಕಳ್ಳರ ಕಾಲ್​ಗಳನ್ನ ಟ್ರೇಸ್​ ಮಾಡ್ತಿದ್ದ ಅವರು ಖುದ್ದಾಗಿ ಆಂಧ್ರ ತೆಲಂಗಾಣ ಪೊಲೀಸರ ಸಂಪರ್ಕಿಸಿ ಅಲ್ಲಿಂದ ಶಿವಮೊಗ್ಗಕ್ಕೆ ಎಂಟ್ರಿಯಾಗುತ್ತಿದ್ದ ಗಾಂಜಾ ಮಾಲನ್ನ, ತಮ್ಮ ಟೀಂ ಮೂಲಕ ಹಿಡಿದುಹಾಕುತ್ತಿದ್ದರು. ಈ ಕಾರಣಕ್ಕೆ ಇತ್ತೀಚೆಗೆ ಶಿವಮೊಗ್ಗದಲ್ಲಿ ಅಕ್ರಮ ಗಾಂಜಾದ ದೊಡ್ಡ ಭೇಟೆಗಳು ಸುದ್ದಿಯಾಗುತ್ತಿದ್ದವು.

ಆದರೆ ಇತ್ತೀಚೆಗೆ ನಡೆದ ಕೋಮುಸಂಘರ್ಷದ ವಿಚಾರ, ಎಸ್​ಪಿಯವರಿಗೆ ಹೊಸ ಸವಾಲನ್ನ ತಂದೊಡ್ಡಿತ್ತು. ಅದರ ಬೆನ್ನಲ್ಲೆ ಎಸ್​ಪಿಯವರು ತಮ್ಮ ಇಲಾಖೆಯಲ್ಲಿಯೇ ಯಾರಿಗೂ ಗೊತ್ತಾಗದ ಹಾಗೆ ನಡೆಯಬಹುದಾಗಿದ್ದ ವ್ಯವಸ್ಥಿತ ಕೊಲೆಯ ಸಂಚನ್ನ ಬಯಲು ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸದ್ಯದಲ್ಲಿಯೇ ಸೀಗೆಹಟ್ಟಿ ಸುತ್ತಮುತ್ತವೊಂದು ಕೊಲೆ ನಡೆಯಬೇಕಿತ್ತು. ಆತನ ಕೊಲೆಗಾಗಿ ವ್ಯವಸ್ಥಿತವಾಗಿ ಟೀಂವೊಂದು ಕೆಲಸ ಮಾಡಿತ್ತು. ಆದರೆ ಎಸ್​ಪಿ ಖುದ್ದು ಫೀಲ್ಡ್​ಗೆ ಇಳಿದು ಇಡೀ ಟೀಂನಲ್ಲಿ ಹಲವರನ್ನ ಬಂಧಿಸಿದ್ದಾರೆ.

ಎಸ್​ಪಿ ಕಾರ್ಯಾಚರಣೆ ಹೇಗಿತ್ತು.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಯನ್ನ ನೇಮಿಸಲಾಗುತ್ತದೆ. ಆದರೆ, ತಮಗೆ ಬಂದ ಒಂದು ಸುದ್ದಿ ಕೇಳಿದ ಎಸ್​ಪಿ ಅದರ ಬಗ್ಗೆ ಯಾರಲ್ಲಿಯು ಮಾಹಿತಿ ಹಂಚಿಕೊಳ್ಳುವುದಿಲ್ಲ.ತಮ್ಮದೇ ಒಂದು ಟೀಂ ಸಿದ್ದಪಡಿಸಿಕೊಂಡು ಅವರಿಗೂ, ಆಯ್ದ ಹೆಸರುಗಳನ್ನ ಹೇಳಿ, ಅವರನ್ನ ಲಿಫ್ಟ್​ ಮಾಡುವಂತಷ್ಟೆ ಸೂಚಿಸುತ್ತಾರೆ.ಅದರಾಚೆಗೆ ಟೀಂನಲ್ಲಿಯು ಹೆಚ್ಚಿನ ಮಾಹಿತಿ ಇರೋದಿಲ್ಲ. ಇಷ್ಟೆಲ್ಲಾ ಆದರೂ ಗುಪ್ತಚರ ಇಲಾಖೆಗೆ ಯಾವೊಂದು ಮಾಹಿತಿ ಇದ್ದಿರಲಿಲ್ಲ.ಆಯಕಟ್ಟಿನ ಅಧಿಕಾರಿಗಳಿಗೂ ವಿಷಯ ಏನೂ ಅಂತಾ ಸ್ಪಷ್ಟವಿರಲಿಲ್ಲ.

ಇದೆಲ್ಲದರ ನಡುವೆ ಎಸ್​ಪಿ ಲಕ್ಷ್ಮೀಪ್ರಸಾದ್​ ಮಾತ್ರ ಒಬ್ಬೊಬ್ಬರೇ ಆರೋಪಿಗಳನ್ನ ಲಿಫ್ಟ್​ ಮಾಡುತ್ತಿದ್ದರು. ಕಾಮತ್ ಪೆಟ್ರೋಲ್​ ಬಂಕ್​, ಭಾಠತೀ ಕಾಲೋನಿ ಸೇರಿದಂತೆ ಹಲವೆಡೆ ರಾತೋರಾತ್ರಿ ಆರೋಪಿಗಳನ್ನ ಎತ್ತಾಕ್ಕಿಕೊಂಡು ಬರಲಾಗಿತ್ತು. ಅವರನ್ನೆಲ್ಲಾ ವಿಚಾರಿಸಿದಾಗ, ನಡೆಸಿದ ಷಡ್ಯಂತ್ರ ಬಯಲಾಗಿದೆ. ಆಗ ಸ್ವತಃ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಾಕ್​ ಆಗಿದ್ದಾರೆ. ಇದರ ನಡುವೆ, ಪ್ರಕರಣ ಹೊರಕ್ಕೆ ಹೋದರೆ ಅದರ ಮೇಲೆ ಸಾಕಷ್ಟು ಒತ್ತಡ ಎದುರಾಗುವ ಸಾದ್ಯತೆಯಿದ್ದರಿಂದ ತಕ್ಷಣ ಎಫ್​ಐಆರ್ ದಾಖಲಿಸಿ ಆರೋಪಿಗಳನ್ನ ಅರೆಸ್ಟ್ ತೋರುವಂತೆ ಮಾಡಿದ್ದಾರೆ.

ಇದರ ನಡುವೆಯು ಸುದ್ದಿ ಲೀಕ್​ ಆದ್ದರಿಂದ ಕೆಲವರು ತಪ್ಪಿಸಿಕೊಂಡಿದ್ದಾರೆ. ಒಟ್ಟಾರೆ ಅಕ್ರಮ ಕೂಟ ರಚಿಸಿ, ಕೊಲೆಗೆ ವ್ಯವಸ್ಥಿತ ಸಂಚು ರೂಪಿಸಿದ ಆರೋಪಿಗಳನ್ನ ಎಸ್​ಪಿ ಲಕ್ಷ್ಮೀಪ್ರಸಾದ್​ ಗುಪ್ತವಾಗಿಯೇ ಭೇದಿಸಿದ್ದಾರೆ. ಒಬ್ಬ ಎಸ್​ಪಿ ಈ ರೀತಿ ಕಾರ್ಯಾಚರಣೆ ನಡೆಸಿದ್ದು ರಾಜ್ಯದಲ್ಲಿ ಇದೇ ಮೊದಲು ಎನ್ನಲು ಅಡ್ಡಿಯಲ್ಲ. ಈ ಕಾರಣಕ್ಕೆ ಲಕ್ಷ್ಮೀಪ್ರಸಾದ್​ ಶ್ಲಾಘನಾರ್ಹರು.