ವರದಿಗಾರನ ವಿಚಿತ್ರ ಅನುಭವಕ್ಕೆ ಮುಕ್ತಿಕೊಟ್ಟ ಶಿವಮೊಗ್ಗದ ಆ ಗುರೂಜಿ! ಇದು ಎಲ್ಲೂ ತಿಳಿಯಲಾಗದ ಕಥೆ! ‘Today ಸತ್ಯ!’

ಪ್ರತಿದಿನ ಬೆಳಗ್ಗೆ 4 ಗಂಟೆಗೆ ಇಡೀ ದೇಹಕ್ಕೆ ಹೊಡೆಯುತ್ತಿತ್ತು ಶಾಕ್​! ದೆವ್ವ ಕಾಟವೆಂದುಕೊಂಡಾಗ ಕಾಣಿಸಿದ್ದು ದೈವ ಕ್ಷೇತ್ರ! ವರದಿಗಾರನ ವಿಚಿತ್ರ ಅನುಭವಕ್ಕೆ ಮುಕ್ತಿಕೊಟ್ಟ ಶಿವಮೊಗ್ಗ ಆ ಗುರೂಜಿ! ಇದು ಎಲ್ಲೂ ತಿಳಿಯಲಾಗದ ಕಥೆ! ‘Today ಸತ್ಯ!’

ಮಲೆನಾಡು ಟುಡೇ ತಂಡದಿಂದ ಹೊಸ ಪ್ರಯತ್ನ! ಇದು ಅನುಭವದ ಕಥೆ, ಆನುಭಾವದ ಕಥೆ, ಅಕೃತ್ರಿಮದ ಕಥೆ, ಅಪರೂಪದ ಅನೂಹ್ಯ ಕಥೆ, ಅನುಯೋಗದ ಕಥೆ…ಇಲ್ಲಿ ನಡೆದಿದ್ದು ಸತ್ಯ ಘಟನೆ

ಪ್ರತಿರಾತ್ರಿ ತನ್ನ ದೇಹದಲ್ಲಿ ವಿದ್ಯುತ್ ನ ಮಿಂಚಿನ ಸಂಚಾರವಾಗುತ್ತಿದ್ದಕ್ಕೆ ತತ್ತರಿಸಿಹೋಗಿದ್ದರು ಆ ವರದಿಗಾರ. ಆತ ಯಾರು? ಎಲ್ಲಿಯವರು? ಇದೆಲ್ಲವೂ ಸೂಕ್ಷ್ಮ ವಿಚಾರ..ಹೇಳುವಂತಿಲ್ಲ. ಕೇಳುವಂತಿಲ್ಲ.

ಅಸಲಿಗೆ ಅವರಿಗೆ ವಕ್ಕರಿಸಿದ್ದು ದೆವ್ವವೋ ಅಥವಾ ದೈವವೋ? ಎಂದು ಯೋಚಿಸುವಾಗಲೇ..ಆ ಗುರೂಜಿಯ ಬಳಿ ಸಿಕ್ಕಿತ್ತೊಂದು ಪರಿಹಾರ.

ಇದು ನೈಜ ಕಥೆಯ ರೋಚಕ ಪಯಣ..ಮಲೆನಾಡು ಟುಡೇ ತಂಡದಿಂದ ಹೊಸದೊಂದು ಪ್ರಯತ್ನ!

ದೈವ ಎಂಬುದು ನಂಬಿಕೆಯೋ ಅಥವಾ ಮಾನಸಿಕತೆಯೋ ಎಂದು ವಿಶ್ಲೇಷಿಸುವುದು ಕಷ್ಟಸಾಧ್ಯ.

ಆದರೆ ಪ್ರಕೃತಿಯಲ್ಲೊಂದು ಶಕ್ತಿಯಿದೆ. ಆ ಶಕ್ತಿ ನಮ್ಮನ್ನು ದೇವರಾಗಿ ಕಾಯುತ್ತಿದೆ ಎಂಬುದು ಮಾತ್ರ ನಿರ್ವಿವಾದ.

ಆಸ್ತಿಕರು ಮತ್ತು ನಾಸ್ತಿಕರು ಇದಕ್ಕೆ ತಮ್ಮದೆ ಆದ ವ್ಯಾಖ್ಯಾನ ನೀಡಿದ್ದಾರೆ. ಆದ್ರೆ ನಾವು ಹೇಳಲು ಹೊರಟಿರುವ ಸತ್ಯಕಥೆಯಲ್ಲಿ ಯಾವ ಸಂಪ್ರದಾಯಗಳನ್ನು ಆಚರಿಸಿದ, ಜ್ಯೋತಿಷ್ಯ ನಂಬದ, ಕೇವಲ ದೇವರ ಮೇಲೆ ಮಾತ್ರ ನಂಬಿಕೆ ಇಟ್ಟ ವರದಿಗಾರನ ಬಗ್ಗೆ.

ಹೌದು ಜೀವನದಲ್ಲಿ ಎಂದು ಆಗದ ಅನುಭವವೊಂದು ಆ ವರದಿಗಾರನಿಗೆ ಪ್ರತಿ ಬೆಳಗಿನ ಜಾವ ನಾಲ್ಕು ಗಂಟೆಯ ಹೊತ್ತಿಗೆ ಆಗುತ್ತಿತ್ತು..

ಬೆಳಗ್ಗೆ ನಾಲ್ಕು ಗಂಟೆಯ ಜಾವದಲ್ಲಿ ಮೈಯಲ್ಲಿ ಶಾಕ್​ !

ಕಾಲಿನ ತಳಭಾಗದಿಂದ ತಲೆಯ ಒಳಭಾಗದವರೆಗೂ ಬಿಸಿಗಾಳಿಯ ವಿದ್ಯುತ್ ಸಂಚರಿಸಿದ ಅನುಭವವಾಗುತ್ತಿತ್ತು.

ಆರಂಭದಲ್ಲಿ ಇದು ನರದ ವೀಕ್ ನೆಸ್ ಇರಬೇಕು..ಅಥವಾ ಕೆಟ್ಟ ಕನಸಿರಬೇಕೆಂದು ಆ ವರದಿಗಾರ ಕಡೆಗಣಿಸಿದ್ದ.

ಆದರೆ ದಿನಕಳೆದಂತೆ ಅದೇ ಬೆಳಗಿನ ಸಮಯಕ್ಕೆ ಮೈಮೇಲೆ ವಿದ್ಯುತ್ ಪ್ರವಹಸಿದಂತೆ ಆಗುತ್ತಿದ್ದ ಸನ್ನಿವೇಶ ಆತನನ್ನು ದಿಗ್ಬ್ರಾಂತಗೊಳಿಸಿತ್ತು.

ಒಮ್ಮೆ ಮದ್ಯವನ್ನು ಸಿಕ್ಕಾಪಟ್ಟೆ ಕುಡಿದು ಮಲಗಿದರೆ ಯಾವ ಅನುಭವವೂ ಆಗೋದಿರೋದಕ್ಕೆ ಸಾಧ್ಯಾನ ನೋಡೋಣ ಅಂತಾ ಅಂದು ರಾತ್ರಿ ಕಂಠಪೂರ್ತಿ ಕುಡಿದು ಮಲಗಿದಾಗಲೂ, ಅದೇ ಸಮಯದಲ್ಲಿ ಮತ್ತೆ ದೇಹದಲ್ಲಾದ ವಿದ್ಯುತ್ ಸಂಚಾರ ಆತನನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿತು.

ತನ್ನ ಇತರೆ ಸ್ನೇಹಿತ ಪತ್ರಕರ್ತರೊಂದಿಗೆ ವಿಷಯ ಹಂಚಿಕೊಳ್ಳಲು ಆತನಿಗೆ ಮುಜುಗರವಾಯ್ತು. ಮೊದಲೇ ಪತ್ರಕರ್ತರಲ್ಲಿ ಹಲವು ಮಂದಿ ದೇವರು ದೆವ್ವಾ ಅನ್ನೋದನ್ನ ನಂಬೋದಿಲ್ಲ.

ವಾಸ್ತವಕ್ಕೆ ಹತ್ತಿರ ಇರುವ ವಿಷಯಗಳಿಗೆ ಮಾತ್ರ ಅಲ್ಲಿ ಅವಕಾಶ ಎಂಬಂತ ವಾತಾವರಣ ಇರುತ್ತೆ. ಅಂತದ್ರಲ್ಲೂ ಈ ವರದಿಗಾರ ತನ್ನ ಪತ್ರಕರ್ತ ಗೆಳೆಯನೊಬ್ಬನ ಬಳಿ ತನಗಾಗುತ್ತಿರುವ ಸಮಸ್ಯೆಯನ್ನು ಹೇಳಿಕೊಳ್ಳುತ್ತಾನೆ.

ಅದಕ್ಕೆ ಆತ ಕೂಡ ಅಚ್ಚರಿ ವ್ಯಕ್ತಪಡಿಸುತ್ತಾನೆ. ಇದು ದೆವ್ವವೋ ಅಥವಾ ದೈವವೋ ಎಂಬುದನ್ನು ಅರಿಯಬೇಕಿದ್ರೆ..ಯಾರಾದ್ರು ಗುರುಗಳ ಬಳಿ ಹೋಗಿ ಸಮಸ್ಯೆ ಬಗ್ಗೆ ಕೇಳಬೇಕು ಎಂದಾಗ ಆ ವರದಿಗಾರ ಅದಕ್ಕೆ ಸುತಾರಾಂ ಒಪ್ಪೋದಿಲ್ಲ.

ವರದಿಗಾರನಿಗೆ ಸಿಕ್ಕಿತ್ತು ಶಿವಮೊಗ್ಗದ ಗುರೂಜಿಯೊಬ್ಬರ ನಂಬರ್​

ಯಾವುದಕ್ಕೂ ಒಮ್ಮೆ ಶಿವರಾಂ ಕೃಷ್ಣ ಡಾಕ್ಟರ್ ಬಳಿ ಇಲ್ಲವೇ ಮಾನಸ ನರ್ಸಿಂಗ್ ಹೋಂ ಗೆ ತೋರಿಸಿ ಚಿಕಿತ್ಸೆ ಪಡೆಯೋದು ಒಳ್ಳೆಯದು ಎಂದು ಅನ್ನಿಸುತ್ತದೆ ಎಂದು ತನ್ನ ಸ್ನೇಹಿತನಿಗೆ ಹೇಳಿದ.

ಅದಕ್ಕೆ ಆ ಪತ್ರಕರ್ತ ಮಿತ್ರ, ಒಮ್ಮೆ ನಾ ಹೇಳುವ ಗುರೂಜಿಯವರಿಗೆ ಫೋನ್ ನಲ್ಲಿ ಮಾತಾಡು ಸಾಕು, ಸಮಸ್ಯೆ ಪರಿಹಾರ ಸಿಕ್ಕರೆ ಓಕೆ ಇಲ್ಲವಾದ್ರೆ ನೀನು ವೈದ್ಯರ ಬಳಿ ಸಮಸ್ಯೆ ಹೇಳಿಕೋ ಎಂದು ಸಲಹೆ ನೀಡಿ, ಗುರೂಜಿಯೊಬ್ಬರ ನಂಬರ್ ನೀಡಿದ.

ಮೊದಲು ಆ ಶ್ರೀಗಳಿಗೆ ಆ ವರದಿಗಾರ ಫೋನಾಯಿಸಿದಾಗ, ಗುರೂಜಿಯವರು ಸ್ವೀಕರಿಸಲಿಲ್ಲ. ಪತ್ರಕರ್ತ ಮಿತ್ರನ ರೆಫರೆನ್ಸ್ ಹೇಳಿ ಮೆಸೇಜ್​ ಮಾಡಿದ.

ಬೆಳಿಗ್ಗೆ ಮದ್ಯಾಹ್ನ ಸಂಜೆ ಹತ್ತುಹಲವು ಬಾರಿ ಫೋನ್ ಮಾಡಿದ್ರು ಪ್ರಯೋಜನವಾಗಲಿಲ್ಲ. ಇವತ್ತು ಕೂಡ ಅದೇ ಕಾಟ ಅನ್ಕೊಂಡು ವರದಿಗಾರ, ನಾಳೆ ವೈದ್ಯರ ಬಳಿ ಹೋದ್ರಾಯಿತು. ದೇವರು ಇಟ್ಟ ಹಾಗೆ ಆಗುತ್ತೆ ಅಂತಾ ಅಂದು ನಿದ್ರೆಗೆ ಜಾರಿದ ಅಷ್ಟೆ.

ರಾತ್ರಿ 11 ಗಂಟೆಗೆ ಮೊಬೈಲ್ ರಿಂಗ್ ಆಯಿತು. ಫೋನ್ ಸ್ವೀಕರಿಸಿದ ವರದಿಗಾರನಿಗೆ ನಾನು ಗುರೂಜಿ ಮಾತನಾಡ್ತಿರೋದು..ನೀವು ಫೋನ್ ಮಾಡಿದ್ರಿ. ನಾನು ಬೇರೆ ನಂಬರ್ ನಿಂದ ಕಾಲ್ ಮಾಡ್ತೀದಿನಿ..ಏನ್ ವಿಷಯ ಅಂತಾ ಕೇಳಿದರು.

ಪ್ರತಿದಿನ ಆಗುವ ಅನುಭವಕ್ಕೆ ಒಂದೇ ರಾತ್ರಿ ಬ್ರೇಕ್​ ಬಿತ್ತು

ಆಗ ಆ ವರದಿಗಾರ ತನಗಾಗುತ್ತಿರುವ ಸಮಸ್ಯೆ ಹೇಳಿಕೊಂಡ. ತಕ್ಷಣ ಯೋಗೇಂದ್ರ ಗುರುಗಳು, ಇಂದು ರಾತ್ರಿ ನೆಮ್ಮದಿಯಿಂದ ಮಲಗಿಕೊಳ್ಳಿ..ನಿಮಗೆ ಯಾವ ಅನುಭವ ಆಗದು, ಆ ಸಮಸ್ಯೆ ಏನೆಂದು ನಾನು ಪ್ರಾರ್ಥನೆ ಕೂರುವ ಸಂದರ್ಭದಲ್ಲಿ ಅರಿಯುತ್ತೇನೆ.

ನಿಮ್ಮ ಮೈಮೇಲೆ ಯಾವ ದೆವ್ವ ಭೂತನೂ ಬರುತ್ತಿಲ್ಲ. ನಾಳೆ ಹೇಳ್ತಿನಿ..ನಿಮಗೆ ಬೆಳಗಿನ ಜಾವದ ಅನುಭವ ಇನ್ನು ಮುಂದೆ ಆಗುವುದಿಲ್ಲ ಎಂದು ಹೇಳಿದ್ರು.

ಅಂದು ರಾತ್ರಿ ಆ ವರದಿಗಾರ ನಿದ್ರೆಗೆ ಜಾರಿದ. ಅಚ್ಚರಿಯೆಂದರೆ ಬೆಳಿಗ್ಗೆ ನಾಲ್ಕು ಗಂಟೆಗೆ ಆಗುತ್ತಿದ್ದ ಅನುಭವ ಅಂದು ಆಗಲೇ ಇಲ್ಲ. ಒಂದು ತಿಂಗಳು ಎಡೆಬಿಡದೆ ಅದೇ ಬೆಳಗಿನ ಸಮಯಕ್ಕೆ ಆಗುತ್ತಿದ್ದ ಕೆಟ್ಟ ಅನುಭವ ಅಂದು ಆಗದೇ ಇರುವುದಕ್ಕೆ ಆಚ್ಚರಿಪಟ್ಟ. ಇದ್ಯಾವ ಶಕ್ತಿ ನನ್ನನ್ನು ಬಂಧಮುಕ್ತಗೊಳಿಸಿತು ಎಂದು ಚಕಿತನಾದ.

ವರದಿಗಾರನ ಬದುಕಿನ ವೃತ್ತಾಂತ್ತವನ್ನ ಫೋನ್​ನಲ್ಲಿಯೇ ಬಿಚ್ಚಿಟ್ಟ ಗುರೂಜಿ

ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಪುನಃ ಗುರುಗಳೇ ಖುದ್ದು ವರದಿಗಾರನಿಗೆ ಕರೆಮಾಡಿ, ನಿಮಗೆ ಇಂದು ಬೆಳಗಿನ ಜಾವ ಮತ್ತೆ ಆ ಕೆಟ್ಟ ಅನುಭವ ಆಯ್ತಾ ಅಂತಾ ಕೇಳಿದ್ರು. ಅದಕ್ಕೆ ವರದಿಗಾರ ಇಲ್ಲ ಗುರುಗಳೇ ಎಂದು ಹೇಳಿದ.

ನನಗೆ ಗೊತ್ತು ನೀವು ಜ್ಯೋತಿಷ್ಯ, ಗೊಡ್ಡು ಸಂಪ್ರದಾಯ ಇದ್ಯಾವುದನ್ನು ನೀವು ನಂಬುವುದಿಲ್ಲ ಎಂದು, ನೀವು ಅಮಾವಾಸ್ಯೆಗೆ ತಾಳಿ ಕಟ್ಟಿದವರು ಹೌದಾ, ನೀವು ಯಾವ ಜ್ಯೋತಿಷಿಗಳಿಗೂ ಕೇಳದೆ ನಿಮ್ಮ ಮಕ್ಕಳಿಗೆ ನಿಮ್ಮ ಇಷ್ಟದ ಹೆಸರಿಟ್ಟೀದ್ದೀರಿ, ರಾಹುಕಾದಲ್ಲೂ ಕೂಡ ಇಷ್ಟಪಟ್ಟೇ ಕೆಲಸ ಮಾಡುತ್ತೀರಿ. ಅದಕ್ಕೆ ಕಾರಣ ನೀವು ದೇವರಲ್ಲಿ ಇಟ್ಟಿರುವ ಅಪಾರ ನಂಬಿಕೆ ಎಂದಾಗ ವರದಿಗಾರ ಹೌಹಾರಿದ.

ಆತ ತಾಳಿ ಕಟ್ಟಿದ್ದು ಕೂಡ ರಾಹುಕಾಲವೂ ಕೂಡ ಒಳ್ಳೆಯದೆಂಬುದೇ ಆತನ ಉದ್ದೇಶವಾಗಿತ್ತು. ದೇವರು ಕೊಟ್ಟ ಪ್ರತಿಕ್ಷಣವೂ ಜಗತ್ತಿನಲ್ಲಿ ಒಳ್ಳೆಯದೇ ಎಂದು ಭಾವಿಸಿದ್ದ. ಗುರೂಜಿಯವರು ಹೇಳಿದ ಮಾತಿನಿಂದ ಮತ್ತಷ್ಟು ಅಚ್ಚರಿಗೊಳಗಾದ ಆ ವರದಿಗಾರ.

ಜನ ಮರೆತ ಚೌಡಿ ಗುಡಿಯ ರಹಸ್ಯ ಹೇಳಿದ ಗುರೂಜಿ

ಹಾಗಾದ್ರೆ ಗುರುಗಳೇ ನನ್ನ ಮೈಮೇಲೆ ಆಗುತ್ತಿದ್ದ ಆ ಅನುಭವ ಯಾವುದು ಎಂದು ಪ್ರಶ್ನಿಸಿದ. ಅದಕ್ಕೆ ಗುರೂಜಿಯವರು, ನಿಮಗೆ ಆ ರೀತಿಯ ಅನುಭವವಾಗುತ್ತಿರುವುದು ದೆವ್ವದಿಂದಲ್ಲ. ನೀವು ಮಲಗುವ ಕೋಣೆ ಚೌಡಿಯ ಸಂಚಾರವಿರುವ ಪ್ರದೇಶವಾಗಿದೆ.

ನಿಮ್ಮ ಮನೆ ಪೂರ್ವದಲ್ಲಿ ಒಂದು ಚೌಡಿಯ ಸಣ್ಣ ಗುಡಿಯೊಂದಿದೆ. ಅದಕ್ಕೆ ಪೂಜೆ ನೆರವೇರಿಸದೆ ಐದು ವರ್ಷವಾಗಿದೆ. ಬಡಾವಣೆಯ ಜನರೂ ಕೂಡ ಮರೆತಿದ್ದಾರೆ ಆ ಪ್ರದೇಶದಲ್ಲಿ ಇತ್ತಿಚ್ಚಿಗೆ ಯಾವ ಶುಭ ಕಾರ್ಯಗಳು ನಡೆಯುತ್ತಿಲ್ಲ.

ಮದುವೆ ಕಾರ್ಯಗಳು ಆಗುತ್ತಿಲ್ಲ. ಹೀಗಾಗಿ ಚೌಡೇಶ್ವರಿ ನಿಮಗೆ ಆ ಅನುಭವ ನೀಡುವ ಮೂಲಕ, ನನ್ನ ಬಾಯಿಂದ ಮಾತನಾಡಿಸಿದ್ದಾಳೆ ಅಷ್ಟೆ, ಅಲ್ಲಿ ಚೌಡಿಯ ಜಾತ್ರೆ ಪೂಜೆ ಸಮಾರಂಭ ಐದು ವರ್ಷದಿಂದ ನಡೆಯುತ್ತಿದಿಯೋ ಇಲ್ಲವೋ ಎಂಬುದನ್ನು ನಿಮ್ಮ ಸ್ನೇಹಿತರಿಗೆ ಕೇಳಿ ನೋಡಿ ಎಂದು ಗುರುಗಳು ಹೇಳಿದಾಗ ವರದಿಗಾರನಿಗೆ ಸಹಜವಾಗಿಯೇ ಮತ್ತೆ ಅನುಮಾನ ಮೂಡಿತು.

ಯಾಕೆಂದ್ರೆ ಆತನಿಗೆ ಅಲ್ಲಿಯವರೆಗೂ ಚೌಡಿ ಗುಡಿ ಆ ಏರಿಯದಲ್ಲಿ ಎಲ್ಲಿತ್ತು ಎಂಬುದು ಗೊತ್ತಿರಲಿಲ್ಲ. ಆದ್ರೂ ಕೂಡ ಆಯ್ತು ಗುರೂಜಿ ನಾನು ಜನರಲ್ಲಿ ಕೇಳ್ತಿನಿ..ಆದ್ರೆ ಅದಕ್ಕೆ ಪರಿಹಾರ ಏನು ಅಂತಾ ಜನ ಕೇಳಿದಾಗ ನಾನು ಏನ್ ಹೇಳಬೇಕು ಎಂದು ವರದಿಗಾರ ಕೇಳಿದಾಗ, ಗುರೂಜಿಯವರು ಅಲ್ಲಿ ಮತ್ತೆ ಪೂಜಾ ಕೈಂಕರ್ಯಗಳು ಜಾತ್ರೆ ಮಹೋತ್ಸವ ನಡೆಯಬೇಕು ಅದು ನಿಮ್ಮಿಂದಲೇ ಚಾಲನೆಯಾಗಬೇಕು ಎಂದು ಹೇಳಿದ್ರು.

ಗುರೂಜಿ ಹೇಳಿದ್ದನ್ನೇ ಬಡಾವಣೆಯ ಜನರೂ ಹೇಳಿದ್ರು

ತಕ್ಷಣ ಆ ವರದಿಗಾರ ತನ್ನ ಬಡಾವಣೆಯಲ್ಲಿರುವ ಸ್ನೇಹಿತರಿಗೆ ಚೌಡಿ ಗುಡಿ ಇಲ್ಲಿ ಎಲ್ಲಿದೆ ಎಂದು ಕೇಳಿದಾಗ,ಅದು ಮಟ್ಟಿ ಮೇಲಿದೆ ಅಣ್ಣಾ ಅಂತ ಹೇಳ್ತಾರೆ. ಆ ಚೌಡಿ ಗುಡಿಗೆ ಎಷ್ಟು ವರ್ಷದಿಂದ ಜಾತ್ರೆ ನಿಲ್ಲಿಸಿದ್ದಿರಾ ಅಂತಾ ಕೇಳಿದಾಗ ಸ್ನೇಹಿತರು ಐದಾರು ವರ್ಷವಾಯ್ತು. ಅಂತಾ ಹೇಳ್ತಾರೆ.

ಈ ಏರಿಯಾದಲ್ಲಿ ಶುಭ ಕಾರ್ಯ ಯಾವಾದ್ರೂ ನಿಂತು ಹೋಗಿದವಾ ಅಂತಾ ಕೇಳಿದಾಗ ಸ್ನೇಹಿತರು, ಏರಿಯಾಗೆ ಗರಬಡಿದಂತಾಗಿದೆ ಅಣ್ಣಾ ಯಾರ ಮನೆಯಲ್ಲೂ ಶುಭ ಕಾರ್ಯ ನಡೆಯುತ್ತಿಲ್ಲ ಎಂದು ಹೇಳ್ತಾರೆ. ತಕ್ಷಣ ವರದಿಗಾರನಿಗೆ ಗುರುಜಿ ಹೇಳಿದ ಮಾತುಗಳು ಸತ್ಯ ಎನಿಸಿದೆ.

ಕೇವಲ ಬೆಂಗಳೂರಿನ ಮೂಲೆಯೊಂದರಲ್ಲಿ ಕೂತು, ವರದಿಗಾರನ ಜಾತಕ ಕೇಳದೆ, ಕಾಲಜ್ಞಾನಿಯಂತೆ ಸಮಸ್ಯೆಗೆ ಪರಿಹಾರ ಹೇಳಿದ ಗುರೂಜಿಯ ಶಕ್ತಿಗೆ ಅಂದೇ ಆ ವರದಿಗಾರ ಫಿದಾ ಆಗಿಬಿಟ್ಟ. ತನ್ನ ಏರಿಯಾ ಹುಡುಗ್ರನ್ನು ಒಟ್ಟು ಮಾಡಿ ಎಲ್ಲರೂ ಸೇರಿ ಈ ಬಾರಿ ಚೌಡೇಶ್ವರಿಯ ಜಾತ್ರೆ ಮಾಡೋಣ, ಇನ್ನು ಪ್ರತಿವರ್ಷ ಈ ಜಾತ್ರೆ ಮುಂದುವರೆಯಲಿ ಎಂದು ಮೊದಲು ಧನಸಹಾಯ ಮಾಡಿದ.

ಬಡಾವಣೆಯ ಜನರೆಲ್ಲರೂ ಜಾತಿಧರ್ಮ ಮೀರಿ ದೇಣಿಗೆ ನೀಡಿದ್ರು, ಆ ವರ್ಷ ಜಾತ್ರೆ ಅದ್ದೂರಿಯಾಗಿ ನಡೆಯಿತು. ಮನೆ ಮನೆಗಳಲ್ಲಿ ನಿಂತ ಶುಭಕಾರ್ಯಗಳಿಗೆ ಚಾಲನೆ ಸಿಕ್ತು. ಬಡಾವಣೆಯ ಜನರು ಕೂಡ ಯೋಗೇಂದ್ರ ಗುರೂಜಿಯವರ ಶಕ್ತಿಗೆ ಮಾರುಹೋದ್ರು. ಅಂದಿನಿಂದ ಆ ವರದಿಗಾರ ಮೈಮೇಲೆ ಆಗುತ್ತಿದ್ದ ವಿದ್ಯುತ್ ಸಂಚಾರದ ಅನುಭವ ನಿಂತು ಹೋಯ್ತು.

ಕೆಲವು ಸಂದರ್ಭಗಳಲ್ಲಿ ಎದುರಾಗುವ ಭಯಾನಕ ಅನುಭವಗಳು ಶುಭದ ಸಂಕೇತ ಕೂಡ ಆಗಿರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ದೂರದೂರಿನಲ್ಲಿ ಕೂತು ಅಂಜನ ಹಾಕಿದಂತೆ, ಹರಳ ಹುರಿದಂಗೆ ಸಮಸ್ಯೆಗೆ ಪರಿಹಾರ ನೀಡಿದ ಆ ಗುರುಗಳು ಯಾರು ಗೊತ್ತಾ.? ಅವರು ಶಿವಮೊಗ್ಗದವರು. ನಮ್ಮ ನಿಮ್ಮ ನಡುವೆ ಇರುವವರು. ಪುನೀತ್ ರಾಜಕುಮಾರ್​ರವರ ಜೀವಕ್ಕೆ ಅಪಾಯವಿದೆ ಎಂಬ ಶಕುನ ಹೇಳಿದವರು. ಸತ್ತೆ ಹೋದ ಎಂಬ ವ್ಯಕ್ತಿಯನ್ನ ಪ್ರಾರ್ಥನೆಯಿಂದ ಬದುಕಿಸಿ ಕರೆತರುತ್ತೇನೆ ಎಂದವರು! ಅವರ್ಯಾರು? ಯಾರವರು? ಎಂಬ ಕುತೂಹಲಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ನೀಡುತ್ತೇವೆ ?

ಚಿತ್ರದುರ್ಗ ಅಸ್ಥಿ ಪಂಜರ ನೆನಪಿಸಿದ ಘಟನೆ | 15-20 ದಿನದ ನಂತರ ಲಾರಿಯಲ್ಲಿ ವ್ಯಕ್ತಿಯ ಶವ ಪತ್ತೆ! ಶಿವಮೊಗ್ಗ ವೀರಭದ್ರ ಟಾಕೀಸ್​ ಬಳಿ ಘಟನೆ

ಇಷ್ಟಕ್ಕೂ ಕೇವಲ ಫೋನ್​ ಕರೆಯಲ್ಲಿಯೇ ಸಮಸ್ಯೆ ನಿವಾರಿಸಿದ ಗುರೂಜಿ ಯಾರು ಗೊತ್ತಾ?

ಬದುಕಿನ ನಂಬಿಕೆ ಕುರಿತಾದ ಇಂತಹ ಅನೇಕ ಘಟನೆಗಳಿವೆ ಅದನ್ನ ನಿಮ್ಮ ಮುಂದಿಡುವ ಪ್ರಯತ್ನವಿದು. ಈ ಪ್ರಯತ್ನ ನಿಮಗೆ ಇಷ್ಟವಾದಲ್ಲಿ ಮಲೆನಾಡು ಟುಡೆಯನ್ನು ಬೆಂಬಲಿಸಿ, ನಿಮಗೆ ಬರುವ ನೋಟಿಫಿಕೇಷನ್​ ಸಬ್​ಸ್ಕ್ರೈಬ್​ ಮಾಡಿ, ವಾಟ್ಸ್ಯಾಪ್​ ಗ್ರೂಪ್​ಗೆ ಸೇರಿ ಥಮ್ಸ್​ಪ್​ ನೀಡಿ.. ನಿಮ್ಮ ವಾಟ್ಸ್​ಪ್​ ಗ್ರೂಪ್​ಗಳಿಗೆ ನಮ್ಮನ್ನೂ ಆಡ್​ ಮಾಡಿ. ಇದೆಲ್ಲವೂ ಉಚಿತವಾದುದ್ದು, ಅಭಿಮಾನದಿಂದ ಕೂಡಿದ್ದು, ಇದಕ್ಕೆ ಫ್ರತಿಫಲವಾಗಿ ಮಲೆನಾಡಿನ ವಿಶೇಷತೆಗಳನ್ನ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತೇವೆ ..

Leave a Comment