SHIVAMOGGA | Dec 30, 2023 | ಚಿತ್ರದುರ್ಗದಲ್ಲಿ ಅಸ್ಥಿಪಂಜರ ಸಿಕ್ಕ ಪ್ರಕರಣ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದರ ನಡುವೆ ಶಿವಮೊಗ್ಗದಲ್ಲಿ ಸರಿ ಸುಮಾರು ಅದೇ ರೀತಿಯ ಕೇಸ್ವೊಂದು ಪತ್ತೆಯಾಗಿದೆ.
ಶಿವಮೊಗ್ಗ ಸಿಟಿಯಲ್ಲಿ ನಿಂತಿದ್ದ ಲಾರಿಯೊಂದರಲ್ಲಿ ಮಲಗಿದ್ದ ವ್ಯಕ್ತಿಯು ಅಲ್ಲೆ ಸಾವನ್ನಪ್ಪಿದ್ದಾನೆ. ಅಲ್ಲದೆ ಈ ವಿಚಾರ 15-20 ನಂತರ ಬೆಳಕಿಗೆ ಬಂದಿದೆ. ಪೂರ್ಣ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಸದ್ಯ ಆತನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ನಗರದ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಂತಿರುವ ವೀರಭದ್ರೇಶ್ವರ ಟಾಕೀಸ್ ಬಳಿಯ ಜಾಗದಲ್ಲಿ ಲಾರಿಯೊಂದನ್ನ ನಿಲ್ಲಿಸಲಾಗಿತ್ತು. ಅಲ್ಲಿ ನಿನ್ನೆ ಸುಮಾರು 30-40 ವಯಸ್ಸಿನ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಶವವೂ ಪೂರ್ಣ ಸ್ಥಿತಿಯಲ್ಲಿ ಕೊಳೆತಿದ್ದು ಹುಳ ತುಂಬಿದೆ.
READ : ಸ್ಕಾಟ್ಲ್ಯಾಂಡ್ ಟೀಂನಲ್ಲಿ ಶಿವಮೊಗ್ಗದ ಹುಡುಗ! ಈತನ ಬಗ್ಗೆ ನಿಮಗೆ ಗೊತ್ತಾ?
ವಿಪರೀತ ವಾಸನೆ ಬಂದ ಹಿನ್ನೆಲೆಯಲ್ಲಿ ಜನರು ಲಾರಿಯ ಬಳಿಯಲ್ಲಿ ಚೆಕ್ ಮಾಡಿದ್ದಾರೆ. ಈ ವೇಳೆ ಲಾರಿಯಲ್ಲಿ ಶವ ಇರುವುದು ಗೊತ್ತಾಗಿದೆ. ಹಲವು ದಿನಗಳಿಂದ ಲಾರಿ ಅಲ್ಲಿಯೆ ನಿಂತಿತ್ತು ಎನ್ನಲಾಗಿದೆ. ಇನ್ನೂ ಈ ಸಂಬಂಧ ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಮೃತದೇಹ ಗುರುತು ಸಂಬಂಧ ಪ್ರಕಟಣೆ ನೀಡಿದ್ದಾರೆ.
ಸುಮಾರು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಾಕಿಯಂತೆ ಪೂರ್ಣ ದೇಹ ಕೊಳೆತಿದ್ದು, ಚಹರೆ, ಮುಖ ಗುರುತಾಗುವುದಿಲ್ಲ. ಮೈಮೇಲೆ ಮಾಸಲು ಬಣ್ಣದ ಟೀ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ ಎಂದು ಕೋಟೆ ಠಾಣೆ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಅಪರಿಚಿತ ವ್ಯಕ್ತಿಯ ವಾರಸ್ಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆ ದೂ.ಸಂ.: 08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
