ಸ್ಕಾಟ್ಲ್ಯಾಂಡ್​ ಟೀಂನಲ್ಲಿ ಶಿವಮೊಗ್ಗದ ಹುಡುಗ! ಈತನ ಬಗ್ಗೆ ನಿಮಗೆ ಗೊತ್ತಾ?

SHIVAMOGGA  |  Dec 30, 2023  |  ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯೋದಕ್ಕೆ ಅಂತಾನೇ ಲಕ್ಷಾಂತರ ಯುವಕರು ಕ್ರಿಕೆಟ್ ಮೈದಾನದಲ್ಲಿ ಬೆವರು ಹರಿಸುತ್ತಾರೆ. ಅಷ್ಟೆಅಲ್ಲದೆ ರೆಕಾರ್ಡ್ ಮೇಲೆ ರೆಕಾರ್ಡ್ ಬ್ರೇಕ್ ಮಾಡುತ್ತಾರೆ. ಆದರೆ ಅಂತಿಮವಾಗಿ ಕೆಲವೇ ಮಂದಿಗೆ ಬ್ಲೂ ಜೆರ್ಸಿ ತೊಡುವ ಅದೃಷ್ಟ ಸಿಗುತ್ತದೆ.

READ : ಚೆಕ್​ ಬೌನ್ಸ್ ಪ್ರಕರಣ | ಕೋರ್ಟ್ ಆದೇಶದ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? ಇಲ್ಲಿದೆ ವಿವರ

ಇದರ ನಡುವೆ ಬೇರೆ ದೇಶದ ನ್ಯಾಷನಲ್ ಟೀಂನಲ್ಲಿ ಆಡುವ ಅವಕಾಶವನ್ನು ಅನಿವಾಸಿ ಭಾರತೀಯರು ತಮ್ಮದಾಗಿಸಿಕೊಳ್ತಿದ್ದಾರೆ. ಆ ಪೈಕಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಹರೀಶಿ ಮೂಲದ ದಂಪತಿಗಳ ಆದಿ ಹೆಗ್ಡೆ ಎಂಬವರು ಸ್ಕಾಟ್ಲ್ಯಾಂಡ್​ ಮೂಲದ ಅಂಡರ್ 19 ಟೀಂಗೆ ಸೆಲೆಕ್ಟ್​ ಆಗಿದ್ದಾರೆ. 

Shivamogga Malenadu Today

ಆದಿ ಹೆಗ್ಡೆ ಸನ್​ ಆಫ್​ ಡಾ.ವಿಜಯ್​ ಹಾಗೂ ಶುಭಾ. ಸದ್ಯ ಸ್ಕಾಟ್ಲ್ಯಾಂಡ್​ನಲ್ಲಿ ವೈದ್ಯರಾಗಿರವ ಡಾ.ವಿಜಯ್​ ದಂಪತಿಯ ಮಗ ಸದ್ಯ  ಐಸಿಸಿಯು-19 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಲೆಫ್ಟ್ ಹ್ಯಾಂಡ್ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ ಬೌಲರ್ ಆಗಿರುವ ಆದಿ ಹೆಗ್ಡೆ ಆಲ್​ರೌಂಡರ್​ ಆಗಿ  ಪ್ರದರ್ಶನ ನೀಡಲಿದ್ದಾರೆ. 

ಶಿವಮೊಗ್ಗದದ ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯ  ನಾಗರಾಜ್​ ರವರ ಬಳ ಕ್ರಿಕೆಟ್​ನ ವಿದ್ಯೆ ಹೇಳಿಸಿಕೊಂಡಿರುವ ಆದಿ ಬೆಂಗಳೂರು ನ ಜಸ್ಟ್​ ಕ್ರಿಕೆಟ್​ ಅಕಾಡೆಮಿಯಲ್ಲಿಯು ತರಬೇತಿ ಪಡೆದಿದ್ದಾರೆ. ಇವರ ತಾಯಿಯ ತವರು ಶಿವಮೊಗ್ಗವಾಗಿದ್ದು ಆದಿಗೂ ಶಿವಮೊಗ್ಗದ ಬಗ್ಗೆ ವಿಶೇಷ ಒಲವಿದೆ. 

Leave a Comment