SHIVAMOGGA Mar 1, 2024 ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ಅಚ್ಚರಿಯ ಘಟನೆಯೊಂದು ಘಟನೆ ನಡೆದಿದೆ. ಮೇಲ್ನೋಟಕ್ಕೆ ಘಟನೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೃತಪಟ್ಟವರು ರಫೀಕ್ ಎಂದು ಗೊತ್ತಾಗಿದೆ. ವಯಸ್ಸು 38, ಮೂಲತ ಆನವಟ್ಟಿಯವರು. ಅವರನ್ನ ಕಾರಿನಲ್ಲಿ ಕರೆತಂದು ಆನಂದಪುರದ ಸಮೀಪ ನೆದರವಳ್ಳಿ ಬಳಿ ಕೆಳಕ್ಕೆ ಬೀಳಿಸಿ ಆನಂತರ ಕಾರು ಹತ್ತಿಸಲಾಗಿದೆ ಎಂದು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ಮಲೆನಾಡು ಟುಡೆ ತನಿಖಾ ವರದಿಗಾಗಿ ಜೆಪಿ ಪ್ರಕರಣದ ಹಿಂದೆ ‘ಬಿದ್ದ ಬೆನ್ನಲ್ಲೆ ಘಟನೆಯ ಹಿನ್ನೆಲೆಯ ಬಹುತೇಕ ಗೊತ್ತಾಗಿದೆ. ಪ್ರಕರಣದಲ್ಲಿ ಮೃತನಾದ ರಫೀಕ್ ಎಂಬಾತ ಕೇವಲ ಮೂರು ತಿಂಗಳ ಹಿಂದಷ್ಟೆ ಜೈಲಿನಿಂದ ಬಂದಿದ್ದ. ಜೈಲಿಗೆ ಹೋಗಲು ಕಾರಣವಾಗಿದ್ದ ತಮ್ಮನ ಕೊಲೆ. ಹೌದು ತನ್ನ ಸ್ವಂತ ತಮ್ಮನನ್ನ ಕೊಲೆ ಮಾಡಿದ್ದ ರಫೀಕ್ ಅದೇ ವಿಚಾರವಾಗಿ ಜೈಲಿಗೆ ಹೋಗಿ, ಕಳೆದ ಮೂರು ತಿಂಗಳ ಹಿಂದೆ ಹೊರಬಂದಿದ್ದ.
ಆದಾಗ್ಯು ಆಸ್ತಿ ವಿವಾದ ಕುಟುಂಬದಲ್ಲಿ ಮುಂದುವರಿದಿತ್ತು. ರಫೀಕ್ ಹಿರಿಯುವನಾಗಿದ್ದರೇ , ಆತನಿಂದ ನಿಂದ ಕೊಲೆಯಾಗಿದ್ದವನು ಎರಡನೇಯನಾಗಿದ್ದ. ಇದೀಗ ಆಸ್ತಿ ವಿಚಾರಕ್ಕೆ ರಫೀಕ್ನ ಮೂರನೇ ತಮ್ಮ ಇದಾಯತ್ ಜೊತೆ ಜಗಳವಾಗಿದೆ. ರಫೀಕ್ನನ್ನ ಕಾರಿನಲ್ಲಿ ತುಂಬಿಕೊಂಡು ಬಂದಿದ್ದ ಇದಾಯತ್ ಹಾಗೂ ಆತನ ಸಹಚರರು, ರಫೀಕ್ಗೆ ಆಸ್ತಿ ವಿಚಾರದಲ್ಲಿ ಎಂಟ್ರಿ ಕೊಡದಂತೆ ಎಚ್ಚರಿಕೆ ನೀಡಿದ್ದಾರೆ ಅಲ್ಲದೆ ಹಲ್ಲೆ ಮಾಡಿದ್ದಾರೆ.
ಆನಂದಪುರದ ಸಮೀಪ ಬರುವಾಗ ಆತನನ್ನ ಕೆಳಕ್ಕೆ ತಳಿದ್ದಾರೆ. ಅಲ್ಲದೆ ಆತನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಲ್ಲಿ ತಿಳಿದುಬಂದಿದೆ. ಅಷ್ಟೆಅಲ್ಲದೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಇದ್ದು, ಈವರೆಗೂ ಅಧಿಕೃತವಾಗಿ ಮಾಹಿತಿ ದೊರಕ್ಕಿಲ್ಲ.