ಕುಂಸಿ ಪ್ರವೀಣ್​ ಕೊ@ಲೆ ಕೇಸ್! 2 ಕಾರಣ?ಎಸ್​ಪಿ ನಿಖಿಲ್ ಬಿ ಸ್ಟೇಟ್ಮೆಂಟ್​ !

ಹಂಚಿಕೊಳ್ಳಿ
WhatsApp Facebook X Telegram
suttukote Praveen Murder Case SP Nikhil B statement

SP Nikhil B statement / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕುಂಸಿ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಸುತ್ತುಕೋಟೆಯಲ್ಲಿ ರಾತ್ರಿ ಮಲಗಿದ್ದ ಯುವಕ ಬೆಳಗ್ಗೆ ನೋಡುವಷ್ಟರಲ್ಲಿ ಕೊಲೆಯಾಗಿದ್ದ. ಈ ಬಗ್ಗೆ ಮಲೆನಾಡು ಟುಡೆ ಜೂನ್​ 20 ರಂದು ಶಿವಮೊಗ್ಗ: ಮಲಗಿದ್ದಲ್ಲಿಯೇ ಯುವಕನ ಭೀಕರ ಕೊಲೆ; ಪ್ರಕರಣ ದಾಖಲು ಹೆಸರಿನಲ್ಲಿ ವರದಿ ಮಾಡಿತ್ತು. ಈ ಕೊಲೆ ಪ್ರಕರಣ ಸಂಬಂಧ ಇದೀಗ ಎಸ್​ಪಿ ನಿಖಿಲ್ ಬಿ ಮಾತನಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಎಸ್​ಪಿ ನಿಖಿಲ್ ಬಿ, ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸುತ್ತುಕೋಟೆ ಎಂಬಲ್ಲಿ ಪ್ರವೀಣ್ ಎಂಬ ಯುವಕನನ್ನ, ಆತ ಮಲಗಿದ್ದ ಸ್ಥಳದಲ್ಲಿಯೇ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದಿದ್ದಾರೆ.

ಅಲ್ಲದೆ, ಲಭ್ಯ ಮಾಹಿತಿ ಪ್ರಕಾರ, ಕೊಲೆಯಾದ ಯುವಕ ಪ್ರವೀಣ್ ಮಲಗಿದ್ದಾಗ ಆತನ ತಲೆಗೆ ಬಲವಾಗಿ ಹೊಡೆದು, ತದನಂತರ ಚೂಪಾದ ಆಯುಧದಿಂದ ಕುತ್ತಿಗೆಗೆ ಇರಿದು ಹತ್ಯೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಪ್ರಾಥಮಿಕ ತನಿಖೆ ಹಾಗೂ ಪರಿಶೀಲನೆ ವೇಳೆ ಎರಡು ಅಥವಾ ಮೂರು ಕಾರಣಗಳು ಮೇಲ್ನೋಟಕ್ಕೆ ಕಂಡುಬಂದಿವೆ. ಯಾವುದೋ ವಸ್ತುವಿನ ವಿಚಾರಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯ ಈ ಕೊಲೆಗೆ ಕಾರಣವಾಗಿರಬಹುದು ಅಥವಾ ಯಾವುದೋ ಸಂಬಂಧದ ವಿಚಾರದಲ್ಲಿನ ವೈಷಮ್ಯ ಈ ಕೃತ್ಯಕ್ಕೆ ದಾರಿಮಾಡಿಕೊಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ ಪ್ರಕರಣದ ತನಿಖೆ ಪ್ರಗತಿಯಲ್ಲಿರುವ ಕಾರಣ, ಹೆಚ್ಚಿನ ಮಾಹಿತಿಯನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎಸ್​ಪಿ ನಿಖಿಲ್ ಬಿ ತಿಳಿಸಿದ್ದಾರೆ.

ತನಿಖಾ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಆದಷ್ಟು ಬೇಗ ಕೊಲೆ ಆರೋಪಿಗಳನ್ನು ಬಂಧಿಸಿ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor