SHIVAMOGGA NEWS TODAY

ಡಿಸಿ ಕಚೇರಿಯಲ್ಲಿ ಪರಿಚಯಸ್ಥರಿದ್ದಾರೆ ಎಂದು ಹೇಳುತ್ತಾ 80 ಸಾವಿರ ವಂಚನೆ! ಸರ್ಕಾರಿ ಮನೆ ಮಂಜೂರಿನ ಕಥೆ

ajjimane ganesh ನವೀಕರಣ: 18 ಮೇ 2026, 6:03 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿರಾಳಕೊಪ್ಪ / ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ಲಿಮಿಟ್ಸ್​, ಸರ್ಕಾರಿ ಮನೆ ಮಂಜೂರು ಮಾಡಿಸಿಕೊಡುವುದಾಗಿ ಮೋಸ ಮಾಡಿರುವ ಆರೋಪ ಸಂಬಂಧ ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 318(4) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪ್ಲೆಂಟ್ ಆದ ಸರ್ಕಾರಿ ಮನೆ ಮಂಜೂರಿನ ಕಥೆ

ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡಾದ ನಿವಾಸಿ, 48 ವರ್ಷದ ರೈತ ಶಂಕರನಾಯ್ಕ ನೀಡಿದ ದೂರಿನನ್ವಯ ಈ ಕೇಸ್ ದಾಖಲಾಗಿದೆ. ಮಾಜಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ವ್ಯಕ್ತಿಯೊಬ್ಬರ ವಿರುದ್ಧ ಕೇಸ್ ದಾಖಲಾಗಿದೆ.

ಆರೋಪಿಯು ಶಂಕರ್​ ನಾಯ್ಕರಿಗೆ ಪರಿಚಯಸ್ಥನಾಗಿದ್ದು, ಈ ಪರಿಚಯದ ಮೇರೆಗೆ ಸರ್ಕಾರದಿಂದ ನಿಮ್ಮ ಹೆಸರಿಗೆ ಮನೆ ಮಂಜೂರಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದನಂತೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತನಗೆ ಪರಿಚಯಸ್ಥರಿದ್ದು, ಮೇಲಾಧಿಕಾರಿಗಳಿಗೆ ಹಣಕೊಟ್ಟು ಮನೆ ಮಂಜೂರು ಮಾಡಿಸುತ್ತೇನೆ ಎಂದಿದ್ದನಂತೆ.

ಈ ಮಾತುಗಳನ್ನ ನಂಬಿದ್ದ ಶಂಕರನಾಯ್ಕ ಅವರು, ಆರೋಪಿಗೆ ಫೋನ್‌ಪೇ ಹಾಗೂ ಬ್ಯಾಂಕ್ ಥ್ರೂ ಒಟ್ಟಾರೆ 81,000 ರೂಪಾಯಿಗಳನ್ನು ನೀಡಿದ್ದಾರೆ. ಆದರೆ ದುಡ್ಡು ಕೊಟ್ಟ ಬಳಿಕ ಮನೆ ಮಂಜೂರಾತಿಯ ಪ್ರಕ್ರಿಯೆಯ ಕುರಿತು ವಿಚಾರಿಸಿದಾಗ ಆರೋಪಿ ಬಗ್ಗೆ ಸಂಶಯ ಮೂಡಿದೆ. ಅಲ್ದೆ ಈ ಘಟನೆ ಬಳಿಕ ಆರೋಪಿ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದರ್ಜ್ ಮಾಡಿದ್ದಾರೆ. ಇದೀಗ ತನಿಖೆ ಮುಂದುವರಿದಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ