ಹೊಳೆಹೊನ್ನೂರು : ಹೊಳೆಹೊನ್ನೂರಿನ ಭಾಗ್ಯಶ್ರೀ ಕಂಪ್ಯೂಟರ್ಸ್‌ ಕಿಯೋನಿಕ್ಸ್ ಗೆ ರಾಜ್ಯಮಟ್ಟದ ‘ಬೆಸ್ಟ್ ಪರ್ಫಾರ್ಮರ್ ಅವಾರ್ಡ್

ಹಂಚಿಕೊಳ್ಳಿ
WhatsApp Facebook X Telegram
ಭಾಗ್ಯಶ್ರೀ ಕಂಪ್ಯೂಟರ್ಸ್_ ಕಿಯೋನಿಕ್ಸ್ ಗೆ ರಾಜ್ಯಮಟ್ಟದ ಬೆಸ್ಟ್ ಪರ್ಫಾರ್ಮರ್ ಅವಾರ್ಡ್
ಭಾಗ್ಯಶ್ರೀ ಕಂಪ್ಯೂಟರ್ಸ್_ ಕಿಯೋನಿಕ್ಸ್ ಗೆ ರಾಜ್ಯಮಟ್ಟದ ಬೆಸ್ಟ್ ಪರ್ಫಾರ್ಮರ್ ಅವಾರ್ಡ್

ಹೊಳೆಹೊನ್ನೂರು : ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್‌ ನ  ಗ್ರ್ಯಾಂಡ್ ಬಾಲ್ ರೂಮ್‌ನಲ್ಲಿ ನಡೆದ ಕಿಯೋನಿಕ್ಸ್ ಸಂಸ್ಥೆಯ 50ನೇ ಗೋಲ್ಡನ್ ಜುಬಿಲಿ ಸಂಭ್ರಮಾಚರಣೆಯಲ್ಲಿ, ಹೊಳೆಹೊನ್ನೂರಿನ ಭಾಗ್ಯಶ್ರೀ ಕಂಪ್ಯೂಟರ್ಸ್ – ಕಿಯೋನಿಕ್ಸ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ ರಾಜ್ಯಮಟ್ಟದ ಕಂಪ್ಯೂಟರ್ ತರಬೇತಿ ಕೇಂದ್ರಗಳ ವಿಭಾಗದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಪ್ರತಿಷ್ಠಿತ ಬೆಸ್ಟ್ ಪರ್ಫಾರ್ಮರ್ ಅವಾರ್ಡ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ, ಐಟಿ ಮತ್ತು ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ  ಪ್ರಿಯಾಂಕ್ ಖರ್ಗೆ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಹೊಳೆಹೊನ್ನೂರಿನ ಭಾಗ್ಯಶ್ರೀ ಕಂಪ್ಯೂಟರ್ಸ್‌ಗೆ ದೊರೆತಿರುವ ಈ ರಾಜ್ಯಮಟ್ಟದ ಗೌರವವು ಸಂಸ್ಥೆಯ ಹೆಮ್ಮೆಯ ಮೈಲಿಗಲ್ಲಾಗಿದೆ. ಗುಣಮಟ್ಟದ ಕಂಪ್ಯೂಟರ್ ಶಿಕ್ಷಣ, ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿಗೆ ಸಂಸ್ಥೆ ನೀಡುತ್ತಿರುವ ನಿರಂತರ ಬದ್ಧತೆಗೆ ಈ ಪ್ರಶಸ್ತಿ ದೊರೆತಿರುವ ಪ್ರತಿಷ್ಠಿತ ಮಾನ್ಯತೆಯಾಗಿದೆ ಎಂದು ಈ ಸಂಸ್ಥೆಯ ವ್ಯವಸ್ಥಾಪಕರಾದ ಜಯಂತ್ ರವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ ಶರತ್ ಬಚ್ಚೇಗೌಡ, ಕಿಯೋನಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ಡಾಕ್ಟರ್ ಅವಿನಾಶ್  ಮೆನನ್ ರಾಜೇಂದ್ರನ್ ಐ ಎ ಎಸ್ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor