ಒಟಿಪಿ ಬಂದಿಲ್ಲ, Apk ಕ್ಲಿಕ್ ಮಾಡಿಲ್ಲ! ವಕೀಲರ ಖಾತೆಯಿಂದ 1 ಲಕ್ಷ ಮಾಯ! ಹೇಗಾಯ್ತು ಘಟನೆ

ಹಂಚಿಕೊಳ್ಳಿ
WhatsApp Facebook X Telegram
shimoga chikkamagaluru malnad crime news Annanagar Wife Conspires to Murder Husband in Shivamogga
shimoga chikkamagaluru Wife chikkamagaluru Conspires to Murder Husband in Shivamogga

ಮಲೆನಾಡು ಟುಡೆ ಸುದ್ದಿ /ಚಿಕ್ಕಮಗಳೂರು  ಸುದ್ದಿ /  ಓಟಿಪಿ ಕೊಟ್ಟು ಕೆಡಬೇಡರಿ ಎಂಬುದು ಸೈಬರ್​ ಯುಗದ ಹೊಸ ಗಾದೆ. ಆದರೆ ಇಲ್ಲೊಂದು ಪ್ರಕರಣದಲಲ್ಲಿ ಒಟಿಪಿ ಇಲ್ಲದೆ ವ್ಯಕೀಲರೊಬ್ಬರ ಅಕೌಂಟ್​ನಿಂದ ಹಣ ಕಂಡವರ ಅಕೌಂಟ್​ಗೆ ಹೋಗಿದೆ. ಹೌದು, ಚಿಕ್ಕಮಗಳೂರು ನಗರದ ಖಾಸಗಿ ಬ್ಯಾಂಕ್‌ನಲ್ಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಸಾಲ ಪಡೆದಿದ್ದ ವಕೀಲರೊಬ್ಬರ ಬ್ಯಾಂಕ್ ಖಾತೆಯಿಂದ ಯಾವುದೇ ಒಟಿಪಿ ಅಥವಾ ಲಿಂಕ್‌ಗಳಿಲ್ಲದೆ ಲಕ್ಷಾಂತರ ರೂಪಾಯಿ ಹಣವನ್ನು ಸೈಬರ್ ವಂಚಕರು ದೋಚಿದ್ದಾರೆ.

ಚಿಕ್ಕಮಗಳೂರು ಸುದ್ದಿ /ವಕೀಲರ ಖಾತೆಯಿಂದ 1 ಲಕ್ಷ ಮಾಯ!

ಇಲ್ಲಿನ ವಕೀಲರೊಬ್ಬರು ಪ್ರೈವೇಟ್ ಬ್ಯಾಂಕ್​ನಲ್ಲಿ ಚಿನ್ನ ಅಡವಿಟ್ಟು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್‌ನ ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ ಅಡಮಾನವಿಟ್ಟ ಚಿನ್ನಕ್ಕೆ ಪ್ರತಿಯಾಗಿ 4,14,000 ರೂಪಾಯಿ ವಕೀಲರ ಬ್ಯಾಂಕ್ ಅಕೌಂಟ್​ಗೆ ಜಮೆಯಾಗಿತ್ತು. ಆದರೆ, ಬ್ಯಾಂಕ್ ಖಾತೆಗೆ ಹಣ ಬಂದು ಬಿದ್ದ ಕೆಲವೇ ಕ್ಷಣಗಳಲ್ಲಿ ಅಮೇಜಾನ್ ಪೇ ಮೂಲಕ 99,584 ರೂಪಾಯಿ ಹಣ ಡೆಬಿಟ್ ಆಗಿದೆ. ಯಾವೊಂದು ಟ್ರಾಂಜೆಕ್ಷನ್ ಇಲ್ಲದೇನೆ, ಇಷ್ಟೊಂದು ದೊಡ್ಡ ಮೊತ್ತ ಟ್ರಾನ್ಸಫರ್ ಆಗಿರುವುದನ್ನ ಕಂಡ ವಕೀಲರು ತಕ್ಷಣವೇ ಬ್ಯಾಂಕ್​ನ್ನ ಸಂಪರ್ಕಿಸಿದ್ದಾರೆ. 

ಗಮನಾರ್ಹ ವಿಷಯವೆಂದರೆ, ಹಣ ವರ್ಗಾವಣೆಯಾಗುವ ಮುನ್ನ ವಕೀಲರ ಮೊಬೈಲ್ ಸಂಖ್ಯೆಗೆ ಯಾವುದೇ ರೀತಿಯ ಒಟಿಪಿ ಬಂದಿರಲಿಲ್ಲ. ಜೊತೆಗೆ, ಅವರು ಯಾವುದೇ ಅಪರಿಚಿತ ಎಪಿಕೆ ಲಿಂಕ್‌ಗಳನ್ನು ಕೂಡ ಒತ್ತಿರಲಿಲ್ಲ. ಯಾವುದೇ ರೀತಿಯ ದೃಢೀಕರಣದ ಸಂದೇಶಗಳಿಲ್ಲದೆ ತಂತ್ರಜ್ಞಾನದ ದುರ್ಬಳಕೆಯಿಂದಲೇ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ. ಸದ್ಯ ಈ ಸಂಬಂಧ  ಸೈಬರ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಎನ್​ಕ್ವೈರಿ ಆರಂಭಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

 ಒಟಿಪಿ ಬಂದಿಲ್ಲ, Apk ಕ್ಲಿಕ್ ಮಾಡಿಲ್ಲ!  ವಕೀಲರ ಖಾತೆಯಿಂದ 1 ಲಕ್ಷ ಮಾಯ! ಹೇಗಾಯ್ತು ಘಟನೆ Chikkamagaluru Cyber Fraud: Rs 1 Lakh Stolen from Lawyer's Bank Account Without OTP
 ಒಟಿಪಿ ಬಂದಿಲ್ಲ, Apk ಕ್ಲಿಕ್ ಮಾಡಿಲ್ಲ! ವಕೀಲರ ಖಾತೆಯಿಂದ 1 ಲಕ್ಷ ಮಾಯ! ಹೇಗಾಯ್ತು ಘಟನೆ Chikkamagaluru Cyber Fraud: Rs 1 Lakh Stolen from Lawyer’s Bank Account Without OTP

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor