ಬೆಂಗಳೂರು ಸೆಂಟ್ರಲ್​ ಜೈಲಿನಿಂದ ಹೆಬ್ಬೆಟ್ಟು ಮಂಜನಿಂದ ಕರೆ ಕೇವಲ ಸ್ಯಾಂಪಲ್​ ಅಷ್ಟೆ! ಇದು ಎಚ್ಚರಿಕೆಯ ಸಂದೇಶ!

hebbet manja rowdy sheeter

ಬೆಂಗಳೂರು ಸೆಂಟ್ರಲ್​ ಜೈಲಿನಿಂದ ಹೆಬ್ಬೆಟ್ಟು ಮಂಜನಿಂದ ಕರೆ ಕೇವಲ ಸ್ಯಾಂಪಲ್​ ಅಷ್ಟೆ! ಇದು ಎಚ್ಚರಿಕೆಯ ಸಂದೇಶ!
hebbet manja rowdy sheeter

hebbet manja rowdy sheeter ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಬೆಂಗಳೂರು ಸೆಂಟ್ರಲ್​ ಜೈಲಿನಿಂದ ಕರೆಮಾಡಿ ಬೆದರಿಕೆ ಹಾಕಿದ್ದಾರೆ ಎನ್ನುವ ದೂರಿನ ಆಧಾರದಲ್ಲಿ ಸೈಬರ್​ ಕ್ರೈಂ ವಿಭಾಗದಲ್ಲಿ ದೂರೊಂದು ದಾಖಲಾಗಿದೆ.

ಹೆಬ್ಬೆಟ್​ ಮಂಜನ ಹೆಸರಲ್ಲಿ ನಾಗ ಎಂಬಾತ ಕರೆ ಮಾಡಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಸಂಬಂಧ ಒಂದೆರಡು ಸಲ ಹಣ ಕೊಟ್ಟಿರುವ ಉದ್ಯಮಿ ಬಳಿಕ ಕಾಟ ತಡೆಯಲಾಗದೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಕೇಸ್​ ತನಿಖೆ ಆರಂಭಿಸಿರುವ ಇನ್​ಸ್ಪೆಕ್ಟರ್​ ಗುರುರಾಜ್​ ಪರಪ್ಪನ ಅಗ್ರಹಾರವನ್ನು ಕೇಂದ್ರಿಕರಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹಾಗೆ ನೋಡಿದರೆ ಶಿವಮೊಗ್ಗಕ್ಕೆ ಪರಪ್ಪನ ಅಗ್ರಹಾರದಿಂದ ಬೆದರಿಕೆ ಕರೆಗಳು ಬರುತ್ತಿರುವುದು ಇದೇ ಮೊದಲಲ್ಲ ಈ ಹಿಂದೆ ಬಚ್ಚನ್​ ಎಂಬಾತ ಮಾಡಿದ್ದ ಬೆದರಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇನ್ನೂ ಇಂತಹ ಬೆದರಿಕೆ ಹಾಗೂ ವಸೂಲಿ ಪ್ರಕರಣಗಳು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿನ ರೌಡಿ ಅತಿಥಿಗಳು ಮಾಡುತ್ತಿದ್ದಾರೆ ಅನ್ನುವ ಆರೋಪವೂ ದಟ್ಟವಾಗಿದೆ.

ಬಂಕ್​ ಬಾಲು ಕೇಸ್​ನಲ್ಲಿ ಅಂದರ್​ ಆಗಿದ್ದವರು, ಟೀನೇಜ್​ ಹುಡುಗರನ್ನು ಬಳಸಿಕೊಂಡು ತಮ್ಮ ಪರವಾಗಿ ಹೊರಗಡೆ ಹವಾ ಮೇಂಟೇನ್​ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಳೇ ಶಿವಮೊಗ್ಗದ ಕೆಲ ಪ್ರದೇಶಗಳಲ್ಲಿ ಒಟ್ಟುಗೂಡುವ ಹುಡುಗರು, ಜೈಲಿನಲ್ಲಿನ ಖಾಯಂ ಅತಿಥಿಗಳು ಹೇಳಿದಂತೆ ನಡೆಯುತ್ತಿದ್ದಾರೆ. ಬುಲೆಟ್​ ಕೊಡಿಸ್ತೀನಿ, ಅಂಗಡಿ ಇಟ್ಟುಕೊಡ್ತೀನಿ, ಲವ್​ ಕೇಸ್​ ಸಕ್ಸಸ್​ ಮಾಡಿಕೊಡ್ತೀನಿ, ಎಂಬಿತ್ಯಾದಿ ಆಮೀಷಗಳನ್ನ ಒಡ್ಡಿ ಟೀನೇಜ್​ ಹುಡುಗರಿಂದ ವಸೂಲಿ ಮಾಡುವಂತಹ ಕೆಲಸಗಳು ನಡೆಯುತ್ತಿವೆ. ತಮ್ಮ ಕೇಸ್​ನ ಖರ್ಚಿಗಾಗಿ, ಎಲ್ಲೆಲ್ಲಿ ಯಾರ ಬಳಿಯಲ್ಲಿ ಎಷ್ಟು ಹಣ ವಸೂಲಿ ಮಾಡಬೇಕು ಎನ್ನುವುದನ್ನ ಆರೋಪಿಗಳು ತಮ್ಮದೆ ಮೂಲಗಳ ಮೂಲಕ, ತಮ್ಮ ಶಿಷ್ಯರಿಗೆ ತಿಳಿಸುತ್ತಿದ್ದಾರೆ.

ಜನರಲ್ಲಿ ಮೂಡುವ ಭಯ ಹಾಗೂ ಖರ್ಚಿಗೆ ಸಿಗುವ ಹಣ ಎಳೆ ವಯಸ್ಸಿನ ಹುಡುಗರನ್ನ ಪಾತಕ ಜಗತ್ತಿನತ್ತ ಸೆಳೆಯುತ್ತಿದೆ. ಬೀಟ್​ ಪೊಲೀಸರಿಗೆ ಈ ಮಾಹಿತಿ ತಿಳಿಯದೇ ಇಲ್ಲ. ಅದರಲ್ಲೂ ಅನುಭವಸ್ಥ ಸಿಬ್ಬಂದಿಗಳಿಗೆ ಅವರ ಕಣ್ಗಾವಲಿನಲ್ಲಿರುವ ಏರಿಯಾದಲ್ಲಿ ಗುಂಪುಗೂಡುವ ಯುವಕರ ಪಡೆಯ ಮಾಹಿತಿ ಇದ್ದೆ ಇದೆ. ಆದರೆ ಕ್ರೈಂ ದಾಖಲಾಗದ ಹೊರತು ಯಾವೊಂದು ಪ್ರಕರಣಗಳು ಹೊರಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಹುಡುಗರು, ಜೈಲಲ್ಲಿರುವ ಆರೋಪಿಗಳನ್ನ ನಮ್​ ಬಾಸ್​ ಎಂದುಕೊಂಡು ಓಡಾಡುತ್ತಿದ್ದಾರೆ.

ನಗರದಲ್ಲಿ ಬೀದಿ ಬೀದಿಯಲ್ಲಿ ನಡೆಯುವ ರಾತ್ರಿ ಬರ್ತ್​ಡೇಗಳನ್ನು ನೋಡಿದರೆ, ಸದ್ದಿಲ್ಲದೇ ಶಿವಮೊಗ್ಗದಲ್ಲಿ ಹೊಸದೊಂದು ತಲೆಮಾರಿನ ರೌಡಿಸಂ ಜಾರಿಗೆ ಬರುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಬೀಟ್​ ವ್ಯವಸ್ಥೆಯಲ್ಲಿನ ಪೊಲೀಸರು ಇಂತಹ ಗುಂಪುಗೂಡುವಿಕೆಯನ್ನು ತಡೆದು, ಸಣ್ಣ ಪುಟ್ಟ ಗಲಾಟೆಯಲ್ಲಿಯೇ, ಟೀನೇಜ್​ ಹುಡುಗರ ಆಟಾಟೋಪಗಳನ್ನ ನಿಯಂತ್ರಿಸಬೇಕಿದೆ. ಆಗಲಷ್ಟೆ ಯಾರದ್ದೋ ಹಿತಾಸಕ್ತಿ ತಮ್ಮ ಜೀವನವನ್ನ ಕ್ರೈಂ ಶೀಟ್​ನಲ್ಲಿ ದಾಖಲಿಸುವಂತಹ ಪ್ರಮೇಯವನ್ನು ತಡೆಯಬಹುದು.