KARNATAKA NEWS/ ONLINE / Malenadu today/ Nov 9, 2023 SHIVAMOGGA NEWS
Shivamogga | ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರದಲ್ಲಿದ್ದ ಬಾನುಮತಿ ಆನೆಯ ಬಾಲ ಕತ್ತರಿಸಿದ ಸುದ್ದಿ ಮಲೆನಾಡು ಟುಡೆ.ಕಾಂ (malenadutoday.com) ನ ಎಕ್ಸ್ಕ್ಲ್ಯೂಸಿವ್ ವರದಿಯಾಗಿತ್ತು.ತುಂಬು ಗರ್ಭಿಣಿಯ ಬಾಲಕ್ಕೆ ಕತ್ತಿ ತಾಗಿಸಿದ್ದನ್ನ ತನಿಖಾ ರೂಪದಲ್ಲಿ ಮಲೆನಾಡು ಟುಡೆ ಬಿತ್ತರಿಸಿತ್ತು…
ಈ ವರದಿಯನ್ನ ಟುಡೆ ಓದುಗರು ಮನಸ್ಸಿಗೆ ತೆಗೆದುಕೊಂಡಿದ್ದರು. ಆನೆಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದರು. ಆಕ್ರೋಶ ಹೊರಹಾಕಿದ್ದರು. ಇದೆಲ್ಲದರ ಪರಿಣಾಮವಾಗಿ ಅರಣ್ಯ ಇಲಾಖೆ ಆನೆ ಬಾಲಕ್ಕೆ ಕತ್ತಿ ಹಾಕಿದವರು ಯಾರು ಎಂದು ತನಿಖಾ ವರದಿ ತಯಾರಿಸಲು ಸೂಚಿಸಿತ್ತು.
READ : ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಕದ್ದಿದ್ದ ಆರೋಪಿ! 24 ಗಂಟೆಯಲ್ಲಿ ಅರೆಸ್ಟ್ !
ಸದ್ಯ ಈ ವರದಿಯು ಇಲಾಖೆಯ ಕೈ ಸೇರಿದ್ದು, ಗರ್ಭಿಣಿ ಭಾನುಮತಿ ಆನೆಯ ಬಾಲಕ್ಕೆ ಕತ್ತಿ ಹಾಕಿದ್ದು ಬಿಡಾರದ ಸಿಬ್ಬಂದಿಯೇ ಆಗಿದ್ದಾರೆ ಎಂಬುದು ಇಲಾಖಾ ಅಧಿಕಾರಿಗಳಿಗೆ ಗೊತ್ತಾಗಿದೆ. ಅಚಾತುರ್ಯದಿಂದ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮರದ ಕೊಂಬೆ, ಗಿಡಗಳನ್ನು ಕಡಿಯಲು ಕತ್ತಿ, ಇತರೆ ವಸ್ತುಗಳನ್ನು ಆನೆಗಳನ್ನು ಕಾಡಿಗೆ ಬಿಡುವ ಸಂದರ್ಭದಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಈ ಸಂದರ್ಭದಲ್ಲಿ ಅಚಾರ್ತುಯದಿಂದ ಆನೆ ಬಾಲಕ್ಕೆ ಕತ್ತಿ ಏಟು ಬಿದ್ದಿದೆ ಎಂದು ಉಲ್ಲೇಖವಾಗಿದೆ.
ಸದ್ಯಕ್ಕಿಷ್ಟು ಮಾಹಿತಿ ಲಭ್ಯವಾಗಿದೆ. ಆದಾಗ್ಯು ಕೆಲವು ಪ್ರಶ್ನೆಗಳು ಹಾಗೆ ಉಳಿದುಕೊಂಡಿದೆ. ಭವಿಷ್ಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲದಕ್ಕೂ ಉತ್ತರ ನೀಡುವ ನಿರೀಕ್ಷೆಯಿದೆ.
