ತುಂಬು ಗರ್ಭಿಣಿ ಭಾನುಮತಿ ಆನೆಯ ಬಾಲ ತುಂಡಾಗುವಂತೆ ಕತ್ತಿಯಿಂದ ಹಲ್ಲೆ ನಡೆಸಿವರು ಯಾರು | ಸಕ್ರೆಬೈಲ್​ ಆನೆ ಕ್ಯಾಂಪ್​ನಲ್ಲಿ ತಲ್ಲಣ ಮೂಡಿಸಿದ ಘಟನೆ ಬಗ್ಗೆ ನಡೆಯುವುದೇ ತನಿಖೆ

KARNATAKA NEWS/ ONLINE / Malenadu today/ Oct 17, 2023 SHIVAMOGGA NEWS

ತುಂಬು ಗರ್ಭಿಣಿ ಭಾನುಮತಿ ಆನೆಯ ಬಾಲ ತುಂಡಾಗುವಷ್ಟು ಕತ್ತಿಯಿಂದ ಹಲ್ಲೆ ನಡೆಸಿವರು ಯಾರು, ತಲ್ಲಣ ಮೂಡಿಸಿದ ಘಟನೆ ಬಗ್ಗೆ ನಡೆಯುವುದೇ ತನಿಖೆ

ಸಕ್ರೆಬೈಲು ಆನೆ ಬಿಡಾರದಲ್ಲಿ ಎಂದೂ ನಡೆಯದ ಘಟನೆಯೊಂದು ನಡೆದು ಹೋಗಿದೆ. ತುಂಬು ಗರ್ಭಿಣಿ ಭಾನುಮತಿ ಆನೆಯ ಬಾಲಕ್ಕೆ ಮಚ್ಚಿನಿಂದ ಹೊಡೆದು ಕಿಡಿಗೇಡಿಗಳು ಗಾಯಗೊಳಿಸಿದ್ದಾರೆ. ನೆನ್ನೆ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆಯ ಕಾವಾಡಿ ಮೊಹಮ್ಮದ್ ಹಾಗು ಸುದೀಪ್ ಭಾನುಮತಿ ಆನೆಯ ಜವಬ್ದಾರಿಯನ್ನು ಹೊತ್ತ ಸಿಬ್ಬಂದಿಗಳಾಗಿದ್ದಾರೆ. 

ತುಂಬು ಗರ್ಭಿಣಿಯಾಗಿರುವ ಭಾನುಮತಿ ಆನೆಯನ್ನು ಮೊನ್ನೆಯಷ್ಟೆ ಮಾವುತ ಕಾವಾಡಿಗಳು ಆರೈಕೆ ಮಾಡಿ ಆಹಾರ ನೀಡಿ ಬಂದಿದ್ದರು. ನೆನ್ನೆ ಬೆಳಿಗ್ಗೆ ಭಾನುಮತಿ ಆನೆಯನ್ನು ನೋಡಲು ಹೋದ ಸಿಬ್ಬಂದಿಗಳಿಗೆ ದಾರಿಯಲ್ಲಿ ಅಲ್ಲಲ್ಲಿ ರಕ್ತ ಬಿದ್ದಿರುವುದು ಕಂಡಿದೆ. ಆಗ ಸಿಬ್ಬಂದಿಗಳು ಸಹಜವಾಗಿಯೇ ಖುಷಿ ಪಟ್ಟಿದ್ದಾರೆ. ಭಾನುಮತಿ ಇಲ್ಲೆ ಎಲ್ಲೋ ಮರಿ ಹಾಕಿರಬೇಕು ಎಂದು ರಕ್ತದ ಜಾಡನ್ನ ಹಿಂಬಾಲಿಸಿದ್ದಾರೆ. ಆದರೆ ಭಾನುಮತಿ ನೋಡಿದಾಗ ಸಿಬ್ಬಂದಿಗಳಿಗೆ ಶಾಕ್ ಕಾದಿತ್ತು. 

ಭಾನುಮತಿ ಆನೆಯ ಬಾಲಕ್ಕೆ ಯಾರೋ ಕಿಡಿಗೇಡಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ರು. ಚರ್ಮ ಬಾಲಕ್ಕೆ ಅಂಟಿಕೊಂಡಿದ್ದು ಬಿಟ್ಟರೆ ಬಾಲ ಬಹುತೇಕ ಕಟ್ ಆಗಿತ್ತು. ಭಾನುಮತಿ ಆನೆಯ ಆರ್ತನಾದ ಅರಣ್ಯ ರೋಧನವಾಗಿತ್ತು. ತಕ್ಷಣ ಸಿಬ್ಬಂದಿಗಳು ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್ ಗೆ ಮಾಹಿತಿ ಮುಟ್ಟಿಸಿದ್ದಾರೆ.

ಸ್ಥಳಕ್ಕಾಗಮಿಸಿದ ವಿನಯ್ ಆನಯ ಬಾಲಕ್ಕೆ ಏಳು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದರು. ನಂತರ ಭಾನುಮತಿ ಚೇತರಿಕೆ ಕಂಡಿತು. ಷೆಡ್ಯುಲ್ ಒನ್ ಎನಿಮಲ್ ಆಗಿರುವ ಆನೆಗೆ ಗಾಯಗೊಳಿಸಿದವರ ವಿರುದ್ಧ ಅರಣ್ಯ ಕಾಯ್ದೆ ಪ್ರಕಾರ ವನ್ಯಜೀವಿ ಡಿಸಿಎಫ್ ಪ್ರಸನ್ನ ಪಟಕಾರ್ ರವರು ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸಬೇಕಿದೆ.

ಅಲ್ಲದೆ ಈ ಪ್ರಕರಣದ ತನಿಖೆಗೆ ಆದೇಶ ಮಾಡಬೇಕಿದೆ.  ಇದು ಹೊರಗಿನ ಕಿಡಿಗೇಡಿಗಳ ಕೃತ್ಯವೋ ಅಥವಾ ಬಿಡಾರದ ಕೆಲವು ಸಿಬ್ಬಂದಿಗಳ ನಡುವಿನ ವೈಯಕ್ತಿಕ ದ್ವೇಷವೋ ಎಂಬುದು ತನಿಖೆಯಿಂದ ಮಾತ್ರ ಹೊರಬೀಳಲಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

Leave a Comment