KARNATAKA NEWS/ ONLINE / Malenadu today/ Oct 17, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆಯಲ್ಲಿನ ಶಂಕಿತ ಚಟುವಟಿಕೆ ಸಂಬಂಧಿಸಿದಂತೆ NIA ತನಿಖೆ ಇನ್ನೂ ಸಹ ಮುಂದುವರಿದೆ. ಇತ್ತೀಚೆಗೆ ದೆಹಲಿಯಲ್ಲಿ ಅರೆಸ್ಟ್ ಮಾಡಿರುವ ಶಂಕಿತ ಅರಾಫತ್ ಅಲಿಗೆ ಸಂಬಂಧಿಸಿದಂತೆ ತೀರ್ಥಹಳ್ಳಿ ಮೂಲದ ನಾಲ್ವರಿಗೆ ಎನ್ಐಎ ನೋಟಿಸ್ ನೋಟಿಸ್ ನೀಡಿದೆ
ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಹಾಗೂ ದೇಶದ ತ್ರಿವರ್ಣ ಧ್ವಜ ಸುಟ್ಟ ಪ್ರಕರಣ ಮತ್ತು ತೀರ್ಥಹಳ್ಳಿಯ ಶಂಕಿತ ಉಗ್ರ ಅರಫತ್ ಅಲಿ ಬಂಧನದ ವಿಚಾರವಾಗಿ ನಾಲ್ವರು ಬೆಂಗಳೂರಿಗೆ ಬಂದು ವಿಚಾರಣೆ ಎದುರಿಸಬೇಕು ಎಂದು ಎನ್ಐಎ ತನ್ನ ನೋಟಿಸ್ ನಲ್ಲಿ ತಿಳಿಸಿದೆ.
ಈ ಸಂಬಂಧ ತೀರ್ಥಹಳ್ಳಿಗೆ ಎನ್ಐಎ ಅಧಿಕಾರಿ ಬಂದು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಬರುವ ಅಕ್ಟೋಬರ್ 19 ರ ಮಧ್ಯಾಹ್ನ 1 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.
ಅರಾಫತ್ ಅಲಿ ಹಾಗೂ ಇತರೇ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೊಂದಿರುವ ಮಾಹಿತಿ ಪಡೆಯಲು ಎನ್ಐಎ ಈ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ