ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಕದ್ದಿದ್ದ ಆರೋಪಿ! 24 ಗಂಟೆಯಲ್ಲಿ ಅರೆಸ್ಟ್ !
Bhadravathi Newtown police have arrested the accused who stole Mangalya Sara ಮಾಂಗಲ್ಯ ಸರ ಕದ್ದಿದ್ದ ಆರೋಪಿಯನ್ನ ಭದ್ರಾವತಿ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ ಮಹಿಳೆಯ ಕುತ್ತಿಗೆಗೆ ಬಿಗಿದು ಆಕೆಯ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ. ಈ ಸಂಬಂಧ ಮಹಿಳೆಯು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು
KARNATAKA NEWS/ ONLINE / Malenadu today/ Nov 9, 2023 SHIVAMOGGA NEWS
Bhadravati | ಚಿಕ್ಕಮ್ಮನ ಕೊರಳಿಗೆ ಟವಲ್ ಬಿಗಿದು ಮಾಂಗಲ್ಯ ಸರ ಕದ್ದಿದ್ದ ಆರೋಪಿಯನ್ನ ಕೇವಲ 24ಗಂಟೆಯೊಳಗೆ ಬಂಧಿಸುವಲ್ಲಿ ನ್ಯೂಟೌನ್ ಪೊಲೀಸರುಯಶಸ್ವಿಯಾಗಿದ್ದಾರೆ.ಆತನಿಂದ 4,50,000/- ರು. ಮೌಲ್ಯದ 88 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಕಳೇದ ನವೆಂಬರ್ 6 ರಂದು ಬೆಳಗ್ಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕಡದಕಟ್ಟೆಯ ಮಹಿಳೆಯೊಬ್ಬರ ಮನೆಗೆ ಆಕೆಯ ಗಂಡನ ಅಣ್ಣನ ಮಗ ನಾಗರಾಜ ಎಂಬಾತ ಬಂದಿದ್ದ.
READ : ಕೇರಳದಲ್ಲಿ ಮಲೆನಾಡ ನಕ್ಸಲ್ಸ್ ಅರೆಸ್ಟ್! ಸಿಕ್ಕಿಬಿದ್ದ ಶ್ರೀಮತಿ , ಚಂದ್ರು! ಗುಂಡಿನ ಚಕಮಕಿ ನಡೆದಿದ್ದೇಕೆ?
ಆ ವೇಳೆ ಟವಲ್ ತೆಗೆದುಕೊಂಡು ಮಹಿಳೆಯ ಕುತ್ತಿಗೆಗೆ ಬೀಗಿದು ಆಕೆಯ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ. ಈ ಸಂಬಂಧ ಮಹಿಳೆಯು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಆರೋಪಿಯ ಮಾಹಿತಿ ಸಿಕ್ಕ ಪೊಲೀಸರು ಆತನನ್ನ ಟ್ರೇಸ್ ಮಾಡಲು ಆರಂಭಿಸಿದ್ದರು. ಪರಿಣಾಮ ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಆರೋಪಿ ನ್ಯೂಟೌನ್ ಪೊಲೀಸ್ ಸ್ಟೇಷನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಳವಳ್ಳಿ ತಾಲ್ಲೂಕಿನ ಕುರುಬನಪುರ ಗ್ರಾಮದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು ಆತನನ್ನ ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ. .