ಶಿವಮೊಗ್ಗ-ಯಶವಂತಪುರ ರೈಲಿನ ಮಹಿಳಾ ಬೋಗಿಯಲ್ಲಿಯೇ ನಡೆಯಿತೆ ದರೋಡೆ& ಕೊ? ಅನ್ನಪೂರ್ಣ ಕೇಸ್ಲ್ಲಿ ನಡೆದಿದ್ದೇನು?
Did the robbery take place in the women's compartment of Shivamogga-Yeshwantpur train? What happened in Annapurna's case? Passengers, beware!
Shivamogga | Feb 2, 2024 | ತುಮಕೂರು ಸಮೀಪ ಶಿವಮೊಗ್ಗ-ಯಶವಂತಪುರ ಟ್ರೈನ್ನಿಂದ ಬಿದ್ದ ಸರ್ಕಾರಿ ಉದ್ಯೋಗಿ ಮಹಿಳೆಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಟ್ರೈನ್ನಲ್ಲಿ ಅವರನ್ನ ದರೋಡೆ ಮಾಡಲಾಗಿದೆ ಎಂಬ ಆರೋಪ ಸ್ಪಷ್ಟವಾಗಿ ಕೇಳಿಬಂದಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಕಳೆದ ಮಂಗಳವಾರ ರಾತ್ರಿ ರೈಲಿನಲ್ಲಿ ಮಾಡುತ್ತಿದ್ದ ಭದ್ರಾವತಿ ಮೂಲದ ಅನ್ನಪೂರ್ಣರವರ ಸಾವಿನ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿದೆ. ಈ ವರದಿಯ ಲಿಂಕ್ ಇಲ್ಲಿದೆ ಓದಿ ಶಿವಮೊಗ್ಗ-ಬೆಂಗಳೂರು ಟ್ರೈನ್ ನಿಂದ ಕೆಳಕ್ಕೆ ಬಿದ್ದು ಸರ್ಕಾರಿ ಉದ್ಯೋಗಿ ಮಹಿಳೆ ಸಾವು! ಕೊಲೆ ಶಂಕೆ!
ರೈಲಿನಲ್ಲಿಯೇ ನಡೆಯಿತೆ ದರೋಡೆ?
ಇನ್ನೂ ಇದೀಗ ಅವರನ್ನ ರೈಲಿನಲ್ಲಿಯೇ ದರೋಡೆ ಮಾಡಲಾಯ್ತಾ? ಎಂಬ ಪ್ರಶ್ನೆಯೊಂದು ಮೂಡಿದೆ. ಏಕೆಂದರೆ ಮಹಿಳೆಯ ಮೃತದೇಹದಲ್ಲಿ ಅವರ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂಬುದಕ್ಕೆ ಸಾಕ್ಷ್ಯಗಳು ಕಾಣಿಸಿವೆ. ಅಲ್ಲದೆ ಮೃತ ಮಹಿಳೆಯ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಅವರ ಮೊಬೈಲ್ ಮತ್ತು ಬಟ್ಟೆ ಬ್ಯಾಗ್‌ಗಳು ಸುಮಾರು 20 ಕಿ.ಮೀ. ಅಂತರದಲ್ಲಿಪತ್ತೆಯಾಗಿವೆ. ಅದರಲ್ಲಿ ಬೆಲೆಬಾಳುವ ವಸ್ತುಗಳು ಇರದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಮಹಿಳಾ ಬೋಗಿ
ರೈಲಿನಲ್ಲಿ ಮಹಿಳೆಯರಿಗಾಗಿ ವಿಶೇಷ ಬೋಗಿಗಳು ಇರುತ್ತವೆ. ಆದರೆ ಈ ಭೋಗಿಗಳಲ್ಲಿ ಹತ್ತುವ ಮಹಿಳಾ ಪ್ರಯಾಣಿಕರ ಸಂಖ್ಯೆ ವಿರಳ. ಇದರ ನಡುವೆ ಮಹಿಳಾ ಬೋಗಿಯಲ್ಲಿಪ್ರಯಾಣಿಸುವ ಮಹಿಳೆಯರು ಎದುರಿಸುವ ಕಿರಿಕಿರಿ, ಕಿರುಕುಳ, ಅಸುರಕ್ಷತೆ ಬಗ್ಗೆ ಬಹಳಷ್ಟು ದೂರುಗಳು ರೈಲ್ವೆ ಇಲಾಖೆಗೆ ಸಲ್ಲಿಕೆಯಾಗುತ್ತಲೆ ಇವೆ.
ಇನ್ನೂ ಮಹಿಳೆಯರಿಗೆ ಮಹಿಳಾ ಬೋಗಿಯಲ್ಲಿ ಆಗುತ್ತಿರುವ ತೊಂದರೆ ತಪ್ಪಿಸುವ ಸಲುವಾಗಿ ಹಾಗು ಸುರಕ್ಷತೆಯ ದೃಷ್ಟಿಯಿಂದ ಮಹಿಳಾ ಬೋಗಿಯನ್ನು ರೈಲಿನ ನಡುವೆ ತರಬೇಕು ಹಾಗೂ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂಬ ಒತ್ತಡವಿತ್ತು. ಅದರಂತೆ 2018 ರಲ್ಲಿಕೇಂದ್ರ ರೈಲ್ವೆ ಮಂಡಳಿಯು ಮಹಿಳಾ ಬೋಗಿಯನ್ನು ರೈಲಿನ ಮಧ್ಯದಲ್ಲಿಅಳವಡಿಸಲು ಕ್ರಮ ಕೈಗೊಂಡಿತ್ತು. ಆದರೆ ಈ ಕ್ರಮ ಸಮರ್ಪಕವಾಗಿ ಇದುವರೆಗೂ ಜಾರಿಯಾಗಿಲ್ಲ. ಹಲವು ರೈಲುಗಳಲ್ಲಿ ಮಹಿಳಾ ಬೋಗಿಗಳು ರೈಲಿನ ಕೊನೆಭಾಗದಲ್ಲಿ ಇರುತ್ತವೆ ಎಂದು ಮಹಿಳಾ ಪ್ರಯಾಣಿಕರು ಇಂದಿಗೂ ಆರೋಪಿಸುತ್ತಾರೆ.
ಶಿವಮೊಗ್ಗ-ಯಶವಂತಪುರ ಟ್ರೈನ್
ಇನ್ನೂ ಶಿವಮೊಗ್ಗ-ಯಶವಂತಪುರ ಟ್ರೈನ್ನಲ್ಲಿ ಪ್ರಯಾಣ ಆರಂಭಿಸುವ ಹೊತ್ತಿಗೆ ಅನ್ನಪೂರ್ಣರವರಿಗೆ ಮಹಿಳಾ ಬೋಗಿ ಬೇಡ ಎಂದು ಅವರ ಸಹೋದರ ಎಚ್ಚರಿಸಿದ್ದರು. ಮಹಿಳಾ ಬೋಗಿಯಲ್ಲಿ ಇತರೇ ಪ್ರಯಾಣಿಕರು ಇಲ್ಲದೇ ಇರುವುದನ್ನ ಗಮನಿಸಿದ ಅನ್ನಪೂರ್ಣರವರ ಸಹೋದರ ಬ್ರಹ್ಮಾನಂದ ರಾನಡೆ ಸಹೋದರಿಯನ್ನ ಎಚ್ಚರಿಸಿದ್ದರು.
ನಿರಂತರ ರಜೆ ಇದ್ದ ಕಾರಣ ಇಬ್ಬರಿಗೂ ಸ್ಲೀಪಿಂಗ್ ಕೋಚ್‌ನಲ್ಲಿ ಬುಕ್ಕಿಂಗ್ ಸಿಕ್ಕಿರಲಿಲ್ಲ. ಹಾಗಾಗಿ ಅವರಿಬ್ಬರು ಸಾಮಾನ್ಯ ದರ್ಜೆ ಬೋಗಿಯಲ್ಲಿಹೊರಟಿದ್ದರು. ಆದರೆ, ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿ ಕೂರಲು ಸಹ ಜಾಗ ಇರಲಿಲ್ಲ. ಇತ್ತ ಮಹಿಳಾ ಬೋಗಿ ಸಂಪೂರ್ಣ ಖಾಲಿಯಾಗಿತ್ತು. ನಿದ್ರೆ ಮಾಡದಿದ್ದಲ್ಲಿಬೆಳಗ್ಗೆ ಕಚೇರಿಯಲ್ಲಿಕೆಲಸ ಮಾಡಲು ಆಗುವುದಿಲ್ಲಎಂದು ಅನ್ನಪೂರ್ಣ ಅವರು ಒಬ್ಬರೆ ಆದರೂ ಪರವಾಗಿಲ್ಲ ಎಂದು ಸಹೋದರನನ್ನು ಒಪ್ಪಿಸಿ ಮಹಿಳಾ ಬೋಗಿಗೆ ಹೋಗಿ ಮಲಗಿದ್ದರಂತೆ.
ಇನ್ನೂ ಟ್ರೈನ್ ಯಶವಂತಪುರ ತಲುಪುತ್ತಲೇ ಬ್ರಹ್ಮಾನಂದರವರು ಸಹೋದರಿಗೆ ಕರೆ ಮಾಡಿದ್ದಾರೆ. ಅದಾಗಲೇ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಹುಶಃ ಮನೆಗೆ ಹೋಗಿರಬಹುದು ಎಂದು ಅವರು ತಾವು ಬಂದ ಕೆಲಸದತ್ತ ನಿಗಾವಹಿಸಿದ್ದಾರೆ. ಆ ಬಳಿಕ ಅನ್ನಪೂರ್ಣ ಮನೆಗೆ ವಾಪಸ್ ಆಗಿಲ್ಲ ಎಂಬ ವಿಚಾರ ತಿಳಿದಿದೆ. ಹೀಗಾಗಿ ತಮ್ಮ ಸಂಬಂಧಿಕರ ಜೊತೆಗೆ ಬ್ರಹ್ಮಾನಂದರವರು ಸಹ ಹುಡುಕಾಟ ಆರಂಭಿಸಿದ್ದಾರೆ. ಎಲ್ಲೆಡೆ ವಿಚಾರಿಸಿ ಯಶವಂತಪುರ ರೈಲ್ವೆ ನಿಲ್ದಾಣದಕ್ಕೆ ಬಂದು ಕೇಳಿದ್ದಾರೆ. ಅಷ್ಟರಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಬಗ್ಗೆ ಅಲ್ಲಿ ಮಾಹಿತಿ ಸಿಕ್ಕಿದೆ.
ಪೊಲೀಸ್ ಇಲಾಖೆ
ಮೃತದೇಹ ಫೋಟೋ ನೋಡಿ ಗುರುತು ಖಾತರಿ ಮಾಡಿಕೊಂಡು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಸ್ಥಳಕ್ಕೆ ತೆರಳಿ ನೋಡಿದ್ದಾರೆ. ಈ ವೇಳೆ ಅನ್ನಪೂರ್ಣರವರು ಧರಿಸಿದ್ದ ಕಿವಿಯೊಲೆ, ಮಾಂಗಲ್ಯಸರ, ಬಳೆಗಳನ್ನು ದೋಚಲಾಗಿದೆ. ಮೊಬೈಲನ್ನು ಸ್ವಿಚ್ ಆಫ್ ಮಾಡಿ ವ್ಯಾನಿಟಿ ಬ್ಯಾಗ್‌ನಲ್ಲೆ ಇಟ್ಟಿರುವುದು ಗೊತ್ತಾಗಿದೆ.
ಪೊಲೀಸ್ ಮೂಲಗಳ ಪರಕಾರ, ಅನ್ನಪೂರ್ಣರವರದ್ದು ಕೊಲೆ ಎಂಬದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಒಂದೋ ಚಿನ್ನಾಭರಣ ದೋಚಿ ಅವರನ್ನು ರೈಲಿನಿಂದ ಹೊರಗೆ ದಬ್ಬಿರಬಹುದು ಆ ಬಳಿಕ ಬ್ಯಾಗ್‌ಗಳನ್ನು ತಡಕಾಡಿ ಅವುಗಳನ್ನೂ ಹೊರಗೆ ಎಸೆದಿರಬಹುದು ಎಂಬ ಅನುಮಾನ ಇದೆ. ಇನ್ನೊಂದೆಡೆ ಮಹಿಳಾಬೋಗಿಯಲ್ಲಿ ಹತ್ತಿರುವ ದುಷ್ಕರ್ಮಿಗಳು ಅನ್ನಪೂರ್ಣರವರನ್ನು ಕೊಲೆ ಮಾಡಿ ಶವವನ್ನ ರೈಲಿನಿಂದ ಹೊರಕ್ಕೆ ಎಸೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅನ್ನಪೂರ್ಣರವರ ಸಾವು ನಿಗೂಢವಾಗಿದ್ದಷ್ಟೆ ಅಲ್ಲದೆ ಮಹಿಳಾ ರೈಲ್ವೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಪ್ರಕರಣವನ್ನು ಭೇದಿಸುವುದು ಅನಿವಾರ್ಯ. ಅನ್ನಪೂರ್ಣರವರ ಸಾವಿಗೆ ಕಾರಣವಾದವರವರನ್ನು ಪೊಲೀಸರು ಬಂಧಿಸಿ ಪ್ರಕರಣದಲ್ಲಿ ನೋಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ.