Sagar assembly constituency :ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನಾನು ಸಹ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ

Sagar assembly constituency : I am also a bjp candidate for Sagar assembly constituency: Chetan Raj Kannur

Sagar assembly constituency  :ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನಾನು ಸಹ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ
Sagar assembly constituency :ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನಾನು ಸಹ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ

 Sagar assembly constituency : ಶಿವಮೊಗ್ಗ ಜಿಲ್ಲೆ  ಸಾಗರ ವಿಧಾನಸಭಾ ಕ್ಷೇತ್ರದ ೨೦೨೩ನೇ ಸಾಲಿನ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೇನೆ ಎಂದು ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಚೇತನ್‌ರಾಜ್ ಕಣ್ಣೂರು ಹೇಳಿದರು.ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು,೨೦೧೩ ರಲ್ಲಿ ಸಾಗರ ಕ್ಷೇತ್ರದ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ನನ್ನ ಹೆಸರು ಬಹುತೇಕ ಅಂತಿಮವಾಗಿತ್ತು.ಕೊನೆ ಕ್ಷಣದಲ್ಲಿ ಹಿರಿಯರು ಮತ್ತು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶದಿಂದ ಶರಾವತಿ ಸಿ.ರಾವ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಯಿತು.

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

 Sagar assembly constituency  :ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನಾನು ಸಹ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ 

೨೦೧೨ ರಿಂದ ಬಿಜೆಪಿಯಲ್ಲಿ ಯುವ ಮೋರ್ಚಾ ಪ್ರಧಾನಕಾರ್ಯದರ್ಶಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು,೨೦೧೨-೧೩ ರಲ್ಲಿ ಯುವಮೋರ್ಚಾ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ.೨೦೧೩ ರಿಂದ ೨೦೧೬ರವರೆಗೆ ಬಿಜೆಪಿ ಸಾಗರ ತಾಲ್ಲೂಕು ಅಧ್ಯಕ್ಷನಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇನೆ ಎಂದರು.೨೦೧೬ರಿಂದ ೨೦೧೯ರವರೆಗೂ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು,ನಂತರ ಹೊಸನಗರ ತಾಲ್ಲೂಕಿನ ಬಿಜೆಪಿ ಉಸ್ತುವಾರಿಯಾಗಿ ಹೊಣೆಗಾರಿಕೆಯನ್ನು ನಿರ್ವಹಿಸಿದ್ದೇನೆ.ಪಕ್ಷ ನೀಡಿದ ಹುದ್ದೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದ ಫಲವಾಗಿ ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರಿಂದ ಚುನಾಯಿತನಾಗಿ ನಂತರ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂದರು.

ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಉಚ್ಚರಾಯ ಸ್ಥಿತಿಯಲ್ಲಿದ್ದಾಗ ನನ್ನ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ೩೫ ಗ್ರಾಮ ಪಂಚಾಯಿತಿಯಲ್ಲಿ ೧೯ ಗ್ರಾಮಪಂಚಾಯಿತಿಯಲ್ಲಿ ಬಿಜೆಪಿ ಅಧ್ಯಕ್ಷರು ಹಾಗೂ ೨೧ ಗ್ರಾಮಪಂಚಾಯಿತಿಯಲ್ಲಿ ಬಿಜೆಪಿಯವರೇ ಉಪಾಧ್ಯಕ್ಷರಾಗುವಂತೆ ಪ್ರಯತ್ನಿಸುವ ಮೂಲಕ ಬಿಜೆಪಿ ಆಡಳಿತದ ಏರುಗತಿಗೆ ಕಾರಣವಾಗಿರುವ ತೃಪ್ತಿ ನನಗಿದೆ ಎಂದರು.ತಾಲ್ಲೂಕು ಪಂಚಾಯಿತಿಗೆ ೬ ಸದಸ್ಯರು ಬಿಜೆಪಿಯಿಂದ ಗೆಲುವು ಸಾಧಿಸುವ ಮೂಲಕ ಖಾತೆ ತೆರೆದ ಬಿಜೆಪಿ ಜಿಲ್ಲಾ ಪಂಚಾಯಿತಿ ೪ ಸ್ಥಾನಗಳಲ್ಲಿ ೨ ಸ್ಥಾನ ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿರುವುದು ನನ್ನ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಎನ್ನುವುದು ಗಮನಾರ್ಹವಾಗಿದೆ ಎಂದರು.

 Sagar assembly constituency  :ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನಾನು ಸಹ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ 

Shiralakoppa bandh : ನಾಳೆ ಹಿಂದೂ ಜಾಗರಣ ವೇದಿಕೆಯಿಂದ ಶಿರಾಳಕೊಪ್ಪ ಬಂದ್​! ಕಾರಣವೇನು?

ಈ ಹಿಂದೆ ಆವಿನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಚೇತನ್‌ರಾಜ್‌ಗೆ ಟಿಕೇಟ್ ನೀಡಿದರೇ ಗೆಲ್ಲುತ್ತಾರೆ ಎಂದು ಹೇಳುತ್ತಿರುವಾಗ ಭೀಮನೇರಿ ಶಿವಪ್ಪನವರನ್ನು ಬಿಜೆಪಿಗೆ ತಂದು ಟಿಕೇಟ್ ನೀಡಿದ್ದರಿಂದ ನನಗೆ ಅವಕಾಶ ತಪ್ಪಿತು.ನಂತರ ಭೀಮನೇರಿ ಕಾಂಗ್ರೆಸ್‌ಗೆ ಹೋದಾಗ ಮರು ಚುನಾವಣೆಯಲ್ಲಿ ನನಗೆ ಟಿಕೇಟ್ ನೀಡುವ ಬದಲಿಗೆ ಶಾಸಕ ಹಾಲಪ್ಪನವರ ಸೊಹೋದರ ಸಂಬಂದಿ ರವಿಬಸರಾಣಿಯವರಿಗೆ ಟಿಕೇಟ್ ನೀಡಿದರು.

BREAKING NEWS : ಶಿವಮೊಗ್ಗ ಜಿಲ್ಲಾ ಎಡಿಸಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ವರ್ಗಾವಣೆ!

ಪ್ರಸ್ತುತ ಬಿಜೆಪಿ ವರಿಷ್ಠರನ್ನು ಸಂಪರ್ಕಿಸಿ ನನಗೆ ಸಾಗರ ವಿಧಾನಸಭೆ ಟಿಕೇಟ್ ನೀಡುವಂತೆ ಬಲವಾದ ಮನವಿ ಮಾಡುತ್ತೇನೆ.ಬಿಜೆಪಿ ಕಾರ್ಯಕರ್ತರನ್ನು ತುರ್ತು ಸಂಪರ್ಕಿಸಲು ಕಾಲಾವಕಾಶವಿಲ್ಲವಾದ್ದರಿಂದ ಸುದ್ದಿಗೋಷ್ಠಿಯ ಮೂಲಕ ಕಾರ್ಯಕರ್ತರುಗಳಿಗೆ ನಾನು ಸಾಗರ ವಿಧಾನಸಭೆಗೆ ಪ್ರಸ್ತುತ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಎಂಬ ಸಂದೇಶ ತಲುಪಿಸುತ್ತಿದ್ದೇನೆ ಎಂದರು.

ಕ್ಷೇತ್ರದ ಶಾಸಕರು ಬಿಜೆಪಿಯವರೇ ಇರುವಾಗ ಶಾಸಕರಿಗೆ ಸಡ್ಡು ಹೊಡೆದು ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದೀರಾ? ಅವರು ಸರಿಯಾಗಿ ಕೆಲಸ ಮಾಡಲಿಲ್ಲವಾ?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಾಸಕರು ಕೆಲಸ ಮಾಡಿದ್ದಾರೆ.ನಾನು ಹಿರಿಯ ಕಾರ್ಯಕರ್ತನಾಗಿ ನನಗೂ ಅವಕಾಶ ಕೋರುತ್ತೇನೆ ಎಂದರು.ಒಂಟಿಯಾಗಿಯೇ ಸುದ್ದಿಗೋಷ್ಠಿ ನಡೆಸಿದರು.

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com