ಜಸ್ಟ್ 2 ಸಾವಿರಕ್ಕೆ ಆಸೆಪಟ್ಟ ಅಟೆಂಡರ್‌ಗೆ ತಾಲ್ಲೂಕು ಆಫೀಸ್‌ನಲ್ಲಿಯೇ ಶಾಕ್
Sagar Taluk Office Attendant Lokayukta Trap

SHIVAMOGGA | MALENADUTODAY NEWS | Jun 7, 2024 ಮಲೆನಾಡು ಟುಡೆʼ
ಕೇವಲ ಎರಡು ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರ ಕೈಲಿ ಅಟೆಂಡರ್ ಒಬ್ಬ ಟ್ರ್ಯಾಪ್ ಆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಲ್ಲಿ ವರದಿಯಾಗಿದೆ. ಅದರ ವಿವರ ಹೀಗಿದೆ.
ಸಾಗರ ಟೌನ್ ನಿವಾಸಿಯೊಬ್ಬರು ಕಸಬಾ ಹೋಬಳಿ ಬಳಸಗೋಡು ಗ್ರಾಮದ ಜಮೀನಿನ ಆರ್.ಟಿ.ಸಿ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಸಾಗರ ತಾಲ್ಲೂಕ್ ಕಛೇರಿಯ ದಾಖಲಾತಿ ವಿಭಾಗದ ಅಟೆಂಡರ್ ಬಸವರಾಜ್ ರವರಿಗೆ 1500/- ಸಾವಿರ ಲಂಚ ನೀಡಿದ್ದಾರೆ. ಆದರೆ ಅಷ್ಟಕ್ಕೆ ತೃಪ್ತನಾಗದ ಬಸವರಾಜ್ ಮತ್ತೆ 2000 ರೂಪಾಯಿ ಲಂಚ ಕೇಳಿದ್ದಾನೆ. ಎರಡು ಘಟನೆಯನ್ನ ವಿಡಿಯೋ ಮಾಡಿಕೊಂಡಿದ್ದ ದೂರುದಾರರು ಲೋಕಾಯುಕ್ತಕ್ಕೆ ಕಂಪ್ಲೆಂಟ್ ಮಾಡಿದ್ದಾರೆ.
ಕೇಸ್ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಅಟೆಂಡರ್ 2000 ರೂಪಾಯಿ ಲಂಚ ಪಡೆಯುವಾಗಲೇ ಟ್ರ್ಯಾಪ್ ಮಾಡಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಆತ ಅರೆಸ್ಟ್ ಆಗಿದ್ದಾನೆ.