ಮಹಿಳೆಗೆ ಹೆದರಿಸಿ ಬೆದರಿಸಿದರಾ ಶಿವಮೊಗ್ಗದ ಆ ಪೊಲೀಸರು? ಸ್ಟೇಷನ್​ನಲ್ಲಿ ಹೀಗೂ ನಡೆಯುತ್ತಾ??

A complaint has been lodged with the superior alleging that a woman was threatened by some policemen over a land issue

ಮಹಿಳೆಗೆ ಹೆದರಿಸಿ ಬೆದರಿಸಿದರಾ ಶಿವಮೊಗ್ಗದ ಆ ಪೊಲೀಸರು? ಸ್ಟೇಷನ್​ನಲ್ಲಿ ಹೀಗೂ ನಡೆಯುತ್ತಾ??
A complaint has been lodged with the superior alleging that a woman was threatened by some policemen over a land issue

6SHIVAMOGGA NEWS / Malenadu today/ Nov 26, 2023 | Malenadutoday.com  

SHIVAMOGGA | ಪೊಲೀಸ್ ಸ್ಟೇಷನ್​ಗಳು ರಿಯಲ್​ ಎಸ್ಟೇಟ್ ದಂಧೆಯ ಸೆಟ್ಲ್​ಮೆಂಟ್ ಕೇಂದ್ರಗಳಾದರೇ ಹೇಗೆ ಅಂತಾ ಮೊನ್ನೆ ಮೊನ್ನೆ ಹೈಕೋರ್ಟ್​ ಪ್ರಶ್ನಿಸಿತ್ತು…ಯಾಕೆ ಕೇಳಿದ್ರೇ, ರಿಯಲ್ ಎಸ್ಟೇಟ್​ ಕಿರುಕುಳದ ಕಾಟ ತಡೆಯಲಾರದೇ ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿ, ಈಥರಕ್ಕೆ ಈಥರ,  ಹಿಂಗಿಂಗೆ ಎಂದು ನ್ಯಾಯಸ್ಥಾನದಲ್ಲಿ ಅಳಲು ತೋಡಿಕೊಂಡಿದ್ದ ಈ ಕಾರಣಕ್ಕೆ ಕೋರ್ಟ್ ಪೊಲೀಸ್ ಸ್ಟೇಷನ್​ಗಳ ಕಾರ್ಯವೈಖರಿಯನ್ನ ಪ್ರಶ್ನಿಸಿತ್ತು. 

ದೂರದ ಬೆಂಗಳೂರು ಅಷ್ಟೆ ಅಲ್ಲದೇ ಶಿವಮೊಗ್ಗದಲ್ಲಿಯು ಪೊಲೀಸ್ ಠಾಣೆಗಳಲ್ಲಿ ರಿಯಲ್ ಎಸ್ಟೇಟ್​ ವಹಿವಾಟು ನಡೆಯುತ್ತಿರುವುದು ಗುಟ್ಟಾಗಂತು ಉಳಿದಿಲ್ಲ. ಈ ಮಧ್ಯೆ ಏನಾಗಿದೆ ಎಂದರೆ, ಭ್ರಷ್ಟ ಪೊಲೀಸ್ ಅಧಿಕಾರಿಗಳ ಸಾಥ್ ಪಡೆದುಕೊಂಡು ಒಂಟಿ ಮಹಿಳೆಯ ವಿರುದ್ಧ ಇಲ್ಲದ ಪಿತೂರಿ ಮಾಡಿರುವ ಬಗ್ಗೆ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿಯೇ ದೂರು ದಾಖಲಾಗಿದ್ದು, ಎಫ್​ಐಆರ್ ಕೂಡ ಆಗಿದೆ. ಅದು ಸಹ ಮೇಲಾಧಿಕಾರಿಗಳಿಗೆ ದೂರು ಕೊಟ್ಟು ನೋವು ಹೇಳಿಕೊಂಡು ಮಹಿಳೆಯೊಬ್ಬರು ನ್ಯಾಯಕ್ಕಾಗಿ ಅಂಗಲಾಚಿದ ಮೇಲೆ.. 

READ: ಭತ್ತದ ಗದ್ದೆಯಲ್ಲಿ ಕಾಡಾನೆಗಳ ಹಿಂಡು! ಶಿವಮೊಗ್ಗ-ಹಾವೇರಿ ಜನರಲ್ಲಿ ಆತಂಕ!

ದಾಖಲಾದ ಎಫ್ಐಆರ್​ನಲ್ಲಿ ಇರುವಂತೆ ವಿಚಾರ ಹೀಗಿದೆ. IPC 1860 (U/s-143, 147, 148,447,511,506,120B,149) ಅಡಿಯಲ್ಲಿ ಈ FIR ದಾಖಲಾಗಿದೆ. ಅಸಲಿಗೆ ಎಫ್​ಐಆರ್​ ದಾಖಲಾಗಿರುವುದು ಮೇಲಾಧಿಕಾರಿಗಳ ಕಚೇರಿಯಿಂದ ದೂರು ಸ್ಟೇಷನ್​ಗೆ ವರ್ಗಾವಣೆ ಆದ ಮೇಲೆ. 

ವಿನೋಬ ನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನೆಲಸಿರುವ ಸಂತ್ರಸ್ತೆಯೊಬ್ಬರಿಗೆ ಸೇರದಿ  30*50 ಅಡಿ ಸೈಟ್​ವೊಂದನ್ನ ಕಬಳಿಸೋಕೆ ವ್ಯಕ್ತಿಯೊಬ್ಬರು ಸ್ಕೆಚ್​ ಹಾಕಿದ್ದಾರೆ. ಅದಕ್ಕೆ ಕೆಲವು ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್​​ ಸಿಬ್ಬಂದಿಯ ಸಹಾಯ ಪಡೆದಿದ್ದಾರೆ. 

ಸಂತ್ರಸ್ತೆ ಜಾಗವನ್ನು ಕಬಳಿಸುವ ಸಲುವಾಗಿ ಪರೋಕ್ಷವಾಗಿ ಪೊಲೀಸರ ಮೂಲಕವೇ ಜೀವ ಬೆದರಿಕೆ ಹಾಕಿದ್ದಾರಂತೆ. ಖಾಲಿ ಪೇಪರ್​ಗೆ ಸಹಿಹಾಕಿಸಿಕೊಂಡಿದ್ದಷ್ಟೆ ಅಲ್ಲದೆ ಆ ಜಾಗಕ್ಕೆ ಹೋದಾಗ  ನಿಮಗೇನಾದರೂ ಆದರೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ ಎಂಬುದು ಆರೋಪ. ಇಷ್ಟೆ ಅಲ್ಲದೆ ಸಂತ್ರಸ್ತೆ ಜಾಗ ಕಬಳಿಸಲು ಮುಂದಾಗಿರುವ ವ್ಯಕ್ತಿಗೆ ಮನೆ ಕಟ್ಟಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದ್ದು ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸರು ಎಂಬ ಪದವನ್ನ ಎಫ್​ಐಆರ್​  ನಲ್ಲಿ ಉಲ್ಲೇಖಿಸಲಾಗಿದೆ. 

ಇಷ್ಟೆ ಅಲ್ಲದೆ ಸಂತ್ರಸ್ತೆ ತನ್ನ ಜಾಗದ ಹತ್ತಿರ ಹೋದಾಗ 15-20 ಮಂದಿ ದೊಣ್ಣೆ, ಮಚ್ಚು ಹಿಡಿದು  ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹೆದರಿಕೊಂಡು ಪುನಃ ದೂರು ಕೊಡಲು ಬಂದರೇ ಕಂಪ್ಲೆಂಟ್​ ತೆಗೆದುಕೊಂಡಿಲ್ಲವಂತೆ. ಹೀಗಾಗಿ ಸಂತ್ರಸ್ತೆ ನೇರವಾಗಿ ಮೇಲಾಧಿಕಾರಿಗಳ ಕಚೇರಿ ಕದ ತಟ್ಟಿದ್ದಾರೆ. 

ಮೇಲಾಧಿಕಾರಿ ಪ್ರಕರಣವನ್ನು ನೇರವಾಗಿ ಸ್ಟೇಷನ್​ಗೆ ವರ್ಗಾಯಿಸಿ ಎಫ್​ಐಆರ್ ಹಾಕಿಸಿದ್ದಾರೆ. ಸಂತ್ರಸ್ತೆಯ ನೆರವಿಗೆ ನಿಂತ ಮೇಲಾಧಿಕಾರಿ ಯಾರು ಎಂಬುದು ಗೊತ್ತಾಗಿಲ್ಲ. ಹಾಗೆಯೇ ಸಂತ್ರಸ್ತೆಯನ್ನು ಅಲೆದಾಡಿಸಿದ ಕೆಲವು ಭ್ರಷ್ಟ ಅಧಿಕಾರಿ ಸಿಬ್ಬಂದಿ ಯಾರು ಎಂಬುದು ಉಲ್ಲೇಖಿಸಿಲ್ಲ. ಆದರೆ 12-20 ಮಂದಿಯನ್ನ ಆರೋಪಿಯನ್ನಾಗಿಸಲಾಗಿದೆ. ಪ್ರಕರಣ ಮುಂದೆ ಯಾವ ತಿರುವು ಸಹ ಪಡೆದುಕೊಳ್ಳಬಹುದು. ಆದರೆ ವ್ಯವಸ್ಥೆಯು ಅನ್ಯಾಯಕಾರಿಯಾಗಬಾರದು!