ಭತ್ತದ ಗದ್ದೆಯಲ್ಲಿ ಕಾಡಾನೆಗಳ ಹಿಂಡು! ಶಿವಮೊಗ್ಗ-ಹಾವೇರಿ ಜನರಲ್ಲಿ ಆತಂಕ!

Malenadu Today

SHIVAMOGGA NEWS / Malenadu today/ Nov 25, 2023 | Malnenadutoday.com  

SHIVAMOGGA  | ಚಿಕ್ಕಮಗಳೂರು  ಜಿಲ್ಲೆ ಬಳಿಕ  ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಕಾಡಾನೆ ಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭತ್ತದ ಹೊಲದಲ್ಲಿ ಕಾಡಾನೆಗಳು ಅಡ್ಡಾಡುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. 

ಸೊರಬ ತಾಲ್ಲೂಕಿನ ಆನವಟ್ಟಿ  ಸಮೀಪ  ಮೂರು ಆನೆಗಳು  ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ಬೆಳೆ ಕಳೆದುಕೊಳ್ಳುವ ಆತಂಕವನ್ನ ತಂದಿಟ್ಟಿದೆ. ಇಲ್ಲಿನ ದ್ವಾರಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಕಾಣ ಸಿಕ್ಕಿವೆ. 

READ : ಬೀಗ ಭದ್ರವಾಗಿ ಹಾಕಿಹೋಗಿದ್ದ ಹೋಟೆಲ್ ಮಾಲೀಕರಿಗೆ ಶಾಕ್! ಕತ್ತಲಲ್ಲಿ ನಡೆದಿತ್ತು ಈ ಕೃತ್ಯ!

 ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗೋಂದಿಹಳ್ಳಿಯಿಂದ ಈ ಕಾಡಾನೆಗಳು ವರದಾ ನದಿ ದಾಟಿಕೊಂಡು ಬಂದಿರುವ ಸಾಧ್ಯತೆ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. 

ಕಾಡಾನೆಗಳ ಪೈಕಿ ಒಂದು ಮರಿಯಾನೆ ಸಹ ಇದ್ದು, ಆನೆಗಳಿಂದ ಬೆಳೆ ರಕ್ಷಿಸಿ ಎಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ 

Share This Article