ಮೂರು ಕಾಡಾನೆ ಹಿಡಿದು ರೇಡಿಯೋ ಕಾಲರಿಂಗ್ ಅಳವಡಿಸಲು ಆದೇಶ! ಏನಿದು ವಿಚಾರ

The government has issued an order to catch the wild elephants that have killed three people in Chikkamagaluru district. Dubare Elephant Camp, Nagarahole Protected Sanctuary, Bhadra Tiger Reserve, Madikeri Wildlife Range

ಮೂರು ಕಾಡಾನೆ ಹಿಡಿದು ರೇಡಿಯೋ ಕಾಲರಿಂಗ್ ಅಳವಡಿಸಲು ಆದೇಶ! ಏನಿದು ವಿಚಾರ

SHIVAMOGGA NEWS / Malenadu today/ Nov 25, 2023 | Malnenadutoday.com  

CHIKKAMAGALURU  |  ಶಿವಮೊಗ್ಗದ ನೆರೆ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಪರೀತವಾಗಿ ಸಮಸ್ಯೆ ನೀಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಸರ್ಕಾರದ ಆದೇಶ ಹೊರಬಿದ್ದಿದೆ. ಮೂವರನ್ನ ಬಲಿ ಪಡೆದಿರುವ ಕಾಡಅನೆಯು ಸೇರಿದಂತೆ ಒಟ್ಟು ಮೂರು ಆನೆಗಳನ್ನ ಹಿಡಿಯಲು ಆದೇಶ ನೀಡಲಾಗಿದೆ. 

ಆದೇಶದಲ್ಲಿ ಏನಿದೆ?

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕಮಗಳೂರು ವೃತ್ತ ಚಿಕ್ಕಮಗಳೂರು ಇವರ ಉಲ್ಲೇಖಿತ ಪತ್ರದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ವಲಯ ವ್ಯಾಪ್ತಿಯ ಊರುಬಗೆ ಗೌಡಹಳ್ಳಿ ಭೈರಾಪುರ, ಹೊಸಕೆರೆ, ಮೇಕನಗದ್ದೆ ಈ ಭಾಗಗಳಲ್ಲಿ ಸಂಚರಿಸುತ್ತಿರುವ 03 ಕಾಡಾನೆಗಳಿಂದ ಸ್ಥಳೀಯ ಜನರ ಆಸ್ತಿ-ಪಾಸ್ತಿಗಳಿಗೆ ಹಾಗೂ ಜೀವಕ್ಕೂ ಹಾನಿಯಾಗುತ್ತಿದ್ದು, ದಿನಾಂಕ: 22-11-2023 ರಂದು ಆನೆ ಕಾರ್ಯಪಡೆ, ಮೂಡಿಗೆರೆ ಇಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಕಾರ್ತಿಕ್ ಜಿ., ಇವರು ಮೂಡಿಗೆರೆ ವಲಯದ ದೇವರುಂದ ಶಾಖಾ ವ್ಯಾಪ್ತಿಗೆ ಒಳಪಡುವ ಮೇಕನಗದ್ದೆ ದೊಡ್ಡಗೊಳ ಎಂಬಲ್ಲಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುತ್ತಾರೆ. ಈ ಘಟನೆಯಿಂದ ಸ್ಥಳೀಯ ಜನರು ಆಕ್ರೋಶಗೊಂಡು ಇಲಾಖೆ ವಿರುದ್ಧ ಪ್ರತಿಭಟನೆಯನ್ನು ನಡೆಸಿರುತ್ತಾರೆ. 

ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು, ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ 03 ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಆಗ್ರಹಪಡಿಸಿರುತ್ತಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ.

READ : ಭತ್ತದ ಗದ್ದೆಯಲ್ಲಿ ಕಾಡಾನೆಗಳ ಹಿಂಡು! ಶಿವಮೊಗ್ಗ-ಹಾವೇರಿ ಜನರಲ್ಲಿ ಆತಂಕ!

ಆದಕಾರಣ ಸದರಿ ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಅರ್ಜುನ, ಹರ್ಷ, ಲಕ್ಷಣ, ಈಶ್ವರ ಮತ್ತು ರಂಜನ್ ಎಂಬ ಕುಮ್ಮಿ ಆನೆಗಳನ್ನು ಕಳುಹಿಸಿಕೊಡಲು ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವನ್ಯಜೀವಿ ವಿಭಾಗ, ಮಡಿಕೇರಿ ಇವರಿಗೆ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಹುಣಸೂರು ವಿಭಾಗದಿಂದ ಅಭಿಮನ್ಯು ಮತ್ತು ಮಹೇಂದ್ರ ಕುಮ್ಮಿ ಆನೆಗಳನ್ನು ಕಳುಹಿಸಿಕೊಡುವ ಬಗ್ಗೆ ಹಾಗೂ ಡಾ|| ರಮೇಶ್, ಪಶು ವೈದ್ಯಾಧಿಕಾರಿಗಳನ್ನು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ನಿಯೋಜಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು ವಿಭಾಗ, ಚಿಕ್ಕಮಗಳೂರು ಇವರು ಕೋರಿರುತ್ತಾರೆ.

ಆದುದರಿಂದ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು ವಿಭಾಗ, ಚಿಕ್ಕಮಗಳೂರು ಇವರು ಕೋರಿರುವಂತೆ ಮೂಡಿಗೆರೆ ವಲಯ ವ್ಯಾಪ್ತಿಯ ಊರುಬಗೆ, ಗೌಡಹಳ್ಳಿ ಭೈರಾಪುರ, ಹೊಸಕೆರೆ, ಮೇಕನಗದ್ದೆ ಈ ಭಾಗಗಳಲ್ಲಿ ಸಂಚರಿಸುತ್ತಾ, ಸಾರ್ವಜನಿಕ ಆಸ್ತಿ-ಪಾಸ್ತಿ ಮತ್ತು ಪ್ರಾಣಕ್ಕೆ ಹಾನಿ ಉಂಟುಮಾಡುತ್ತಿರುವ 03 ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಗೊಳಿಸಲು ತುರ್ತಾಗಿ ಅನುಮತಿ ನೀಡಬೇಕೆಂದು ಹಾಗೂ ಸದರಿ ಕಾರ್ಯಾಚರಣೆ ಕುರಿತಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ. ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಚಿಕ್ಕಮಗಳೂರು ವಿಭಾಗಮೂಡಿಗೆರೆ ವಲಯ ವ್ಯಾಪ್ತಿಯ ಊರುಬಗೆ, ಗೌಡಹಳ್ಳಿ ಭೈರಾಪುರ, ಹೊಸಕೆರೆ, ಮೇಕನಗದ್ದೆ ಈ ಭಾಗಗಳಲ್ಲಿ ಸಂಚರಿಸುತ್ತಾ, ಸಾರ್ವಜನಿಕ ಆಸ್ತಿ-ಪಾಸ್ತಿ ಮತ್ತು ಪ್ರಾಣಕ್ಕೆ ಹಾನಿ ಉಂಟಾಗಿದ್ದು, ಮುಂದೆ ಆಗುವ ಸಂಭವನೀಯ ಹಾನಿಯನ್ನು ತಪ್ಪಿಸಲು ಸದರಿ 03 ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆಹಿಡಿದು ರೇಡಿಯೋ ಕಾಲರಿಂಗ್​ ಮಾಡಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಲು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಸೆಕ್ಷನ್ 11 (1) (ಎ) ರನ್ವಯ ಅನುಮತಿ ನೀಡಲಾಗಿದೆ. ಸದರಿ ಕಾಡಾನೆಗಳ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಉಲ್ಲಂಘನೆಯಾಗದಂತೆ ಹಾಗೂ ಭಾರತ ಸರ್ಕಾರದಿಂದ / ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ನೀಡಿದ ನಿರ್ದೇಶನ ಹಾಗೂ ಪ್ರಮಾಣಿತ ಕಾರ್ಯ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು, ಮುಂಜಾಗ್ರತಾ ಕ್ರಮ ವಹಿಸಲು ತಿಳಿಸಿದೆ ಹಾಗೂ ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಮತ್ತು ಸ್ಥಳೀಯ ಜನರಿಗೆ ಯಾವುದೇ ಅಪಾಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.