ಸಾಗರ ರಸ್ತೆಯಲ್ಲಿ ಸರಣಿ ಅಪಘಾತ! ಡಿವೈಡರ್ ಹತ್ತಿ ನಿಂತ ಒಮಿನಿ! ಘಟನೆ ಚಿತ್ರಣ ಇಲ್ಲಿದೆ !

Here is the details of the incident that took place near the industrial area on Sagar Road in Shivamogga city

ಸಾಗರ ರಸ್ತೆಯಲ್ಲಿ ಸರಣಿ ಅಪಘಾತ! ಡಿವೈಡರ್ ಹತ್ತಿ ನಿಂತ ಒಮಿನಿ! ಘಟನೆ ಚಿತ್ರಣ ಇಲ್ಲಿದೆ !

SHIVAMOGGA NEWS / Malenadu today/ Nov 25, 2023 | Malnenadutoday.com  

 

SHIVAMOGGA |  ಶಿವಮೊಗ್ಗ ನಗರದ ಸಾಗರ ರಸ್ತೆ (sagara road shivamogga ) ಸರಣಿ ಅಪಘಾತ ಸಂಭವಿಸಿದೆ. ಸಾಗರ ನಡೆದ ಘಟನೆಯಲ್ಲಿ ಬ್ರೀಜಾ ಕಾರೊಂದು ಮಾರುತಿ ಒಮಿನಿಗೆ ಗುದ್ದಿದೆ, ಒಮಿನಿ ಮುಂದಿದ್ದ ಆಟೋಕ್ಕೆ ಡಿಕ್ಕಿ ಹೊಡೆದಿದೆ. 

 

 

ಇಂಡಸ್ಟ್ರಿಯಲ್ ಏರಿಯಾದಿಂದ ಸ್ವಲ್ಪ ಮುಂದೆ ಈ ಘಟನೆ ನಡೆದಿದ್ದು, ಘಟನೆ ಬೆನ್ನಲ್ಲೆ ಸ್ಥಳದಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೂ ಘಟನೆಯಲ್ಲಿ ಆಟೋ ಚಾಲಕ ಗಾಯಗೊಂಡಿದ್ದು, ಸ್ಥಳೀಯರು ಹಾಗೂ ಇತರೇ ವಾಹನ ಸವಾರರು ಅವರನ್ನ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. 

 

 

READ : ಮೂರು ಕಾಡಾನೆ ಹಿಡಿದು ರೇಡಿಯೋ ಕಾಲರಿಂಗ್ ಅಳವಡಿಸಲು ಆದೇಶ! ಏನಿದು ವಿಚಾರ

 

ಘಟನೆ ಹೇಗಾಯ್ತು ಎಂಬುದರ ಬಗ್ಗೆ ಮಾಹಿ ಸ್ಪಷ್ಟವಾಗಿಲ್ಲ. ಆದರೆ ಸ್ಥಳದಲ್ಲಿ ಇದ್ದವರು ಹೇಳುವ ಪ್ರಕಾರ, ಎದುರುಗಡೆಯಿಂದ ಏನೋ ಅಡ್ಡ ಬಂದು ಮುಂದೆ ಹೋಗುತ್ತಿದ್ದ ವಾಹನಗಳು ಸ್ಲೋ ಮಾಡಿವೆ.

 

ಈ ವೇಳೆ ಬ್ರೀಜಾ ವಾಹನದ ಚಾಲಕನಿಗೆ ಕಂಟ್ರೋಲ್ ಸಿಗದೇ ಕಾರು ಒಮಿನಿಗೆ ಡಿಕ್ಕಿಯಾಗಿದೆ. ಒಮಿನಿ ವಾಹನ ಆಟೋಗೆ ಡಿಕ್ಕಿಯಾಗಿ ಡಿವೈಡರ್ ಮೇಲೆ ಹತ್ತಿ ನಿಂತಿದೆಯಂತೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬಂದಿದ್ದು ವಾಹನಗಳ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.